ಜೇವರ್ಗಿ: ಗಂಡು– ಹಣ್ಣು ಂಬ ಲಿಂಗಭೇದ ತಾರತಮ್ಯ ನಿಲ್ಲಬೇಕು, ಅಂದಾಗ ಮಾತ್ರ ದೇಶದ ಪ್ರಗತಿಯಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಕರೆ ನೀಡಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾರಣೆ ಹಿನ್ನೆಲೆಯಲ್ಲಿ ಜೇವರ್ಗಿಯಲ್ಲಿ ನಡೆದ ಕೆಡಿಪಿ ಸಭೆಲ್ಲಿಯೇ ಶಾಸಕರಾದ ಡಾ. ಅಜಯ್ ಸಿಂಗ್ ಹೆಣ್ಣು ಮಗು ದೇಶದ ಸಂಪತ್ತು ಎಂಬ ಅರಿವಿನ ಆಂದೋಲನಕ್ಕೆ ಚಾಲನೆ ನೀಡಿದರಲ್ಲದೆ ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯವರ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಹೆಣ್ಮಕ್ಕಳಿಗೆ ಯೋಜನೆಯಡಿಯಲ್ಲಿ ನೀಡಲಾಗಿರುವ ವಿಮೆ ಅಂಗವಾಗಿ ಇರುವ ಪಾಸ್‍ಬುಕ್ ವಿತರಿಸಿದರು.
ಸಮಾಜದಲ್ಲಿನ ಮೌಢ್ಯ, ಪುರುಷ ಪ್ರಧಾನ ಸಮಾಜದ ತಾರತಮ್ಯ ನೀತಿಗಳು ಇಂದಿಗೂ ಮಹಿಳೆಯರನ್ನು ಕಾಡುತ್ತಿವೆ. ಇವುಗಳಿಗೆಲ್ಲದಕ್ಕೂಬ ನಾವು ಕೊನೆ ಹೇಳಲೇಬೇಕಿದೆ. ಮಹಿಳೆಯರೂ ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಅನೇಕ ರಂಗಗಳಲ್ಲಿ ಸಾಧಿಸಿ ತೋರಿಸುತ್ತಿದ್ದಾರೆ. ಇದನ್ನು ನಾವಿಂದು ಎಲ್ಲರು ಅರಿತು ಹೆಣ್ಣಿರಲಿ, ಗಂಡಿರಲಿ, ಸಮಾನ ಅವಕಾಶಗಳನ್ನು ಅವರಿಗೆ ಕಲ್ಪಿಸುತ್ತ, ಶಿಕ್ಷಣ ನೀಡುತ್ತ ಎಲ್ಲರಿಗೂ ಸಮಾಜದಲ್ಲಿ ಉತ್ತಮರಾಗಿ ಬಾಳುವಂತೆ ಪರಿಸರ ರೂಪಿಸಬೇಕಿದೆ ಎಂದರು.
ಹೆಣ್ಣುಮಕ್ಕಳನ್ನು ಗೌರವಿಸುವ, ಪೂಜಿಸುವ ಮನೋಭಾವನೆ ನಾವಿಂದು ಹೆಚ್ಚು ರೂಢಿಸಿಕೊಳ್ಳಬೇಕಿದೆ. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಗತಿ ಸಾಧ್ಯ? ಹೆಣ್ಣು ಮಕ್ಕಳನ್ನು ಯಾವ ದೇಶದಲ್ಲಿ ಪೂಜ್ಯ ಭಾವದಿಂದ ಕಾಣುವರೋ ಅಂತಹ ದೇಶದಲ್ಲಿ ದೇವಾನುದೇವತೆಗಳೇ ನಲಿದಾಡುತ್ತ ಎಲ್ಲರಿಗೂ ಮಂಗಳ ಮಾಡುತ್ತಾರೆಂಬ ಪ್ರತೀತಿ ಇದೆ. ಇಂತಹ ಆದರ್ಶzಲ್ಲಿ ನಾವಿಂದು ಮಹಿಳೆಯರಿಗೆ ಗೌರವಾದರದ ಮೂಲಕ ಸಮಾಜದಲ್ಲಿ ಬೆಂಬಲಿಸಲು ಇದು ಸಕಾಲ ಎಂದು ಡಾ. ಅಜಯ್ ಸಿಂಗ್ ಹೇಳಿದರು.
ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯಡಿಲ್ಲಿ ಜೇವರ್ಗಿಯಲ್ಲಿ 700 ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆಲ್ಲರಿಗೂ ವಿಮಾ ಸವಲತ್ತು ಕಸಲ್ಪಿಸಲಾಗಿದೆ. ಇದೇ ಯೋಜನೆಡಿಲ್ಲಿ ಇಬ್ಬರು ಫಲಾನುಭವಿಗಳಿಗೆ ಶಾಸಕರಾದ ಡಾ. ಅಜಯ್ ಸಿಂಗ್ ಅವರೇ ಖುದ್ದು ವಿಮಾ ಪಾಸ್‍ಬುಕ್‍ಗಳನ್ನು ವಿಚರಿಸಿ ಶುಭ ಕೋರಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…