ಹೆಣ್ಣುಮಗು ದೇಶದ ಸಂಪತ್ತು- ಹೆಣ್ಣು, ಗಂಡು ಲಿಂಗ ತಾರತಮ್ಯ ನಿಲ್ಲಲಿ- ಶಾಸಕ ಡಾ. ಅಜಯ್ ಸಿಂಗ್ ಕರೆ

0
10

ಜೇವರ್ಗಿ: ಗಂಡು– ಹಣ್ಣು ಂಬ ಲಿಂಗಭೇದ ತಾರತಮ್ಯ ನಿಲ್ಲಬೇಕು, ಅಂದಾಗ ಮಾತ್ರ ದೇಶದ ಪ್ರಗತಿಯಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್  ಸಿಂಗ್ ಕರೆ ನೀಡಿದ್ದಾರೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾರಣೆ ಹಿನ್ನೆಲೆಯಲ್ಲಿ ಜೇವರ್ಗಿಯಲ್ಲಿ  ನಡೆದ ಕೆಡಿಪಿ ಸಭೆಲ್ಲಿಯೇ ಶಾಸಕರಾದ ಡಾ. ಅಜಯ್ ಸಿಂಗ್ ಹೆಣ್ಣು ಮಗು ದೇಶದ ಸಂಪತ್ತು ಎಂಬ ಅರಿವಿನ ಆಂದೋಲನಕ್ಕೆ ಚಾಲನೆ ನೀಡಿದರಲ್ಲದೆ ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯವರ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಹೆಣ್ಮಕ್ಕಳಿಗೆ ಯೋಜನೆಯಡಿಯಲ್ಲಿ ನೀಡಲಾಗಿರುವ ವಿಮೆ ಅಂಗವಾಗಿ ಇರುವ ಪಾಸ್‍ಬುಕ್ ವಿತರಿಸಿದರು.

Contact Your\'s Advertisement; 9902492681

ಸಮಾಜದಲ್ಲಿನ ಮೌಢ್ಯ, ಪುರುಷ ಪ್ರಧಾನ ಸಮಾಜದ ತಾರತಮ್ಯ ನೀತಿಗಳು ಇಂದಿಗೂ ಮಹಿಳೆಯರನ್ನು ಕಾಡುತ್ತಿವೆ. ಇವುಗಳಿಗೆಲ್ಲದಕ್ಕೂಬ ನಾವು ಕೊನೆ ಹೇಳಲೇಬೇಕಿದೆ. ಮಹಿಳೆಯರೂ ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಅನೇಕ ರಂಗಗಳಲ್ಲಿ ಸಾಧಿಸಿ ತೋರಿಸುತ್ತಿದ್ದಾರೆ. ಇದನ್ನು ನಾವಿಂದು ಎಲ್ಲರು ಅರಿತು ಹೆಣ್ಣಿರಲಿ, ಗಂಡಿರಲಿ, ಸಮಾನ ಅವಕಾಶಗಳನ್ನು ಅವರಿಗೆ ಕಲ್ಪಿಸುತ್ತ, ಶಿಕ್ಷಣ ನೀಡುತ್ತ ಎಲ್ಲರಿಗೂ ಸಮಾಜದಲ್ಲಿ ಉತ್ತಮರಾಗಿ ಬಾಳುವಂತೆ ಪರಿಸರ ರೂಪಿಸಬೇಕಿದೆ ಎಂದರು.

ಹೆಣ್ಣುಮಕ್ಕಳನ್ನು ಗೌರವಿಸುವ, ಪೂಜಿಸುವ ಮನೋಭಾವನೆ ನಾವಿಂದು ಹೆಚ್ಚು ರೂಢಿಸಿಕೊಳ್ಳಬೇಕಿದೆ. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಗತಿ ಸಾಧ್ಯ? ಹೆಣ್ಣು ಮಕ್ಕಳನ್ನು ಯಾವ ದೇಶದಲ್ಲಿ ಪೂಜ್ಯ ಭಾವದಿಂದ ಕಾಣುವರೋ ಅಂತಹ ದೇಶದಲ್ಲಿ ದೇವಾನುದೇವತೆಗಳೇ ನಲಿದಾಡುತ್ತ ಎಲ್ಲರಿಗೂ ಮಂಗಳ ಮಾಡುತ್ತಾರೆಂಬ ಪ್ರತೀತಿ ಇದೆ. ಇಂತಹ ಆದರ್ಶzಲ್ಲಿ ನಾವಿಂದು ಮಹಿಳೆಯರಿಗೆ ಗೌರವಾದರದ ಮೂಲಕ ಸಮಾಜದಲ್ಲಿ ಬೆಂಬಲಿಸಲು ಇದು ಸಕಾಲ ಎಂದು ಡಾ. ಅಜಯ್ ಸಿಂಗ್ ಹೇಳಿದರು.

ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯಡಿಲ್ಲಿ ಜೇವರ್ಗಿಯಲ್ಲಿ 700 ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆಲ್ಲರಿಗೂ ವಿಮಾ ಸವಲತ್ತು ಕಸಲ್ಪಿಸಲಾಗಿದೆ. ಇದೇ ಯೋಜನೆಡಿಲ್ಲಿ ಇಬ್ಬರು ಫಲಾನುಭವಿಗಳಿಗೆ ಶಾಸಕರಾದ ಡಾ. ಅಜಯ್ ಸಿಂಗ್ ಅವರೇ ಖುದ್ದು ವಿಮಾ ಪಾಸ್‍ಬುಕ್‍ಗಳನ್ನು ವಿಚರಿಸಿ ಶುಭ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here