ಸುರಪುರ: ನಗರದ ಬಸ್ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಬಾಬು ರಾಠೋಡ ಮತ್ತು ಸಂತೋಷ ಕುಮಾರ ಇವರ ಮೇಲಿನ ಸುಳ್ಳು ದೂರು ಹಿಂಪಡೆಯಬೇಕು ಮತ್ತು ಇಬ್ಬರು ನೌಕರರ ಉದ್ದೇಶಪೂರ್ವಕವಾಗಿ ಬೇರೆಡೆಗೆ ವರ್ಗಾವಣೆ ಮಾಡಿದ್ದನ್ನು ರದ್ದುಗೊಳಿಸುವಂತೆ ದಲಿತ ಸೇನೆಯಿಂದ ಎನ್‌ಇಕೆಆರ‍್ಟಿಸಿ ಕಲಬುರ್ಗಿ ವಿಭಾಗಿಯ ವ್ಯವಸ್ಥಾಪಕರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಮನವಿ ಮಾಡಿಕೊಂಡಿರುವ ದಲಿತ ಸೇನೆಯ ಮುಖಂಡರು ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದ್ದು.ಬಾಬು ರಾಠೋಡ ಮತ್ತು ಸಂತೋಷ ಕುಮಾರ ಎಂಬುವವರು ದಲಿತ ಸಮುದಾಯಕ್ಕೆ ಸೇರಿದ ನೌಕರರಾಗಿದ್ದು,ಈ ಇಬ್ಬರು ಇದುವರೆಗೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಬಂದಿದ್ದಾರೆ.
ಇಲ್ಲಿಯ ಟ್ರಾಫಿಕ್ ಇನ್ಸ್ಪೇಕ್ಟರ್ ಗಿರೀಶ ಕುಮಟಳ್ಳಿಯವರು ಚಾಲಕರು ಮತ್ತು ನಿರ್ವಾಹಕರು ಲಂಚ ಕೊಡಬೇಕೆಂದು ಕೇಳುತ್ತಾರೆ ಎಂದು ನೇರವಾಗಿ ಆರೋಪಿಸಿ,ಇದನ್ನು ವಿರೋಧಿಸಿದ್ದರಿಂದ ಈ ಇಬ್ಬರು ನೌಕರರನ್ನು ಯಾದಗಿರಿ ವಿಭಾಗಿಯ ನಿಯಂತ್ರಣಾಧಿಕಾರಿ, ಡಿಪೋ ಮ್ಯಾನೆಜರ್ ಹಾಗು ಗಿರೀಶ ಕುಮಟಳ್ಳಿ ಸೇರಿ ಇವರ ಮೇಲೆ ಸುಳ್ಳು ದೂರು ನೀಡಿ ತೊಂದರೆ ನೀಡುತ್ತಿದ್ದಾರೆ.
ಕೂಡಲೆ ಈ ದೂರನ್ನು ವಾಪಸ್ಸು ಪಡೆಯಬೇಕು ಮತ್ತು ಉದ್ದೇಶಪೂರ್ವಕವಾಗಿ ಇವರನ್ನು ಬಳ್ಳಾರಿ ಮತ್ತು ಹೊಸಪೇಟೆ ಬಸ್ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ.ಇವರ ವರ್ಗಾವಣೆಯನ್ನು ರದ್ದು ಮಾಡಿ ನ್ಯಾಯ ಒದಗಿಸಬೇಕು ಇಲ್ಲವಾದರೆ ಇದೇ ತಿಂಗಳ ೩೦ನೇ ತಾರೀಖಿನಿಂದ ಬಸ್ ಡಿಪೋ ಮುಂದೆ ಸತ್ಯಾಗ್ರಹ ಆರಂಭಿಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…