ಬಿಸಿ ಬಿಸಿ ಸುದ್ದಿ

ಓದುವ ಹಂಬಲ ಮತ್ತು ಸಾಧಿಸುವ ಛಲ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ: ಚಿಕ್ಕಮಠ

ಶಹಾಬಾದ: ಓದುವ ಹಂಬಲ ಹಾಗೂ ಏನಾದರೂ ಸಾಧಿಸಬೇಕೆಂಬ ಛಲ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಸುಧಾರಾಣಿ ನಾಟೇಕಾರ ಅವರೇ ಸಾಕ್ಷಿ ಎಂದು ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಹೇಳಿದರು.

ಅವರು ಶನಿವಾರ ನಗರದ ಪೊಲೀಸ್ ಠಾಣೆ ವತಿಯಿಂದ ಡಿವಾಯ್‌ಎಸ್‌ಪಿ ಕಚೇರಿಯಲ್ಲಿ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧನೆಮಾಡುವವರಿಗೆ ಯಾವುದು ಅಡ್ಡಿಯಾಗಲ್ಲ.ಆದರೆ ಸಾಧಿಸುವ ಛಲವೊಂದಿದ್ದರೇ ಎಲ್ಲ ಅಡೆತಡೆಗಳು ಸರಳವಾಗುತ್ತವೆ. ಸತತ ಪರಿಶ್ರಮ, ಅಭ್ಯಾಸದಿಂದ ಪಿಎಸ್‌ಐ ಆಗಿ ನೇಮಕವಾಗಿದ್ದಾರೆ.ಅವರು ನಮ್ಮ ಇಲಾಖೆಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯ.ಅವರು ಇನ್ನೂ ಅಭ್ಯಾಸ ಮಾಡಿ ಕೆಎಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯಬೇಕು ಎಂಬ ಆಸೆ ಹೊಂದಿದ್ದು, ಇನ್ನೂ ಅವರ ಅಭ್ಯಾಸ ನಿರಂತರವಾಗಿರಲಿ. ಅವರ ಆಸೆ ಈಡೇರಲಿ ಎಂದು ಶುಭಕೋರಿದರು.

ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಮಾತನಾಡಿ, ಸಾಧನೆ ಯಾರಪ್ಪನ ಸ್ವತ್ತು ಅಲ್ಲ.ಅದು ಸಾಧಕನ ಸ್ವತ್ತು. ಸುಧಾರಾಣಿ ಸಾಧನೆಗೆ ಅವರ ಕುಟುಂಬದವರ ಪೋತ್ಸಾಹ ಪ್ರಮುಖವಾದುದು. ಮುಂದೆ ಇವರು ಶೋಷಿತ ಹೆಣ್ಣುಮಕ್ಕಳ ರಕ್ಷಣೆಯಾಗಿ ತೊಟ್ಟಿಲು ತೂಗುವ ಕೈ ದೇಶವನ್ನೂ ಆಳುತ್ತದೆ ಎಂಬುದನ್ನು ತೋರಿಸಲಿ. ಎಲ್ಲಾ ರಂಗಗಳಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಇಂತಹವರು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಲಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಸುಧಾರಾಣಿ ನಾಟೇಕಾರ, ನನ್ನ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ. ಅಲ್ಲಿಂದಲೇ ನನ್ನ ಸಾಧನೆ ಪ್ರಾರಂಭವಾಯಿತು. ನನ್ನಕೈಲಿ ಏನೂ ಆಗುವುದಿಲ್ಲ ಎಂಬ ಕೀಳರಿಮೆ ಬಿಟ್ಟು, ಸತತ ಪ್ರಯತ್ನ ಮಾಡಿದರೆ ಸಾಧನೆ ತಾನಾಗಿ ಒಲಿದು ಬರುತ್ತದೆ. ಮನೆಯ ಸಮಸ್ಯೆಗಳನ್ನು ಕಾರಣ ಕೊಡದೇ ಸಾಧನೆ ಮಾಡಬೇಕು. ನನ್ನ ಸಾಧನೆಯಲ್ಲಿ ನನ್ನ ತಾಯಿ-ತಂದೆ ಸಹಕಾರ ಪ್ರಮುಖವಾಗಿದೆ. ನಾನು ಆಯ್ಕೆಯಾದ ಇಲಾಖೆಯಿಂದ ಸನ್ಮಾನ ಮಾಡಿರುವುದು ನನ್ನ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು.

ನಾಗೇಂದ್ರ ನಾಟೇಕಾರ, ಶೋಭಾ ನಾಟೇಕಾಎ, ಶಿವ ನಾಟೇಕಾರ, ಹರೀಶ ಕರಣಿಕ್, ವೆಂಕಟೇಶ, ಪೊಲೀಸ್ ಸಿಬ್ಬಂದಿಗಳಾದ ನಿಂಗಣ್ಣಗೌಡ ಪಾಟೀಲ, ಹುಸೇನ ಪಾಷಾ,ಬಸವಣ್ಣಪ್ಪ,ಸತೀಶ ಪೂಜಾರಿ, ಮಾಳಪ್ಪ ಪೂಜಾರಿ, ಮದಸೂದನ್,ದೊಡ್ಡಪ್ಪ ಪೂಜಾರಿ,ಮಹಾನಂದ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago