ಬಿಸಿ ಬಿಸಿ ಸುದ್ದಿ

ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ದಾಸೋಹ ಮಹಾಸೂತ್ರದ ಮೇಲೆ ಡಾ.ಸುಬ್ಬಯ್ಯ ನೀಲಾ ರಚಿಸಿದ ಚಿತ್ರಕಲೆ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರಾಗಿರುವ ಖ್ಯಾತ ಕಲಾವಿದ ಡಾ.ಸುಬ್ಬಯ್ಯ ನೀಲಾ ಅವರ ದಾಸೋಹ ಮಹಾಸೂತ್ರ ಕುರಿತು ರಚಿಸಿದ ಚಿತ್ರಕಲೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದು, ವಿವಿಧ ದೇಶಗಳ ಖ್ಯಾತ ಕಲಾವಿದರ ಚಿತ್ರಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಇದನ್ನು ನವದೆಹಲಿ ಮೂಲದ ಆನ್‌ಲೈನ್ ೨೫ ನೇ ಮೊಸಾಯಿಕ್ ಪದಮ್ ಚಂದ್ ಮೆಮೋರಿಯಲ್ ಗ್ಲೋಬಲ್ ಆನ್‌ಲೈನ್ ಪೇಂಟಿಂಗ್ ಸ್ಪರ್ಧೆ ೨೦೨೧ನ್ನು ಹ್ಯಾಪಿ ಸ್ಕೂಲ್ ಆಯೋಜಿಸಿದೆ.

ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರು ರಚಿಸಿದ ದಾಸೋಹ ಮಹಾಸೂತ್ರದ ಕುರಿತು ಹಲವಾರು ಚಿತ್ರಗಳನ್ನು ಬಿಡಿಸಿರುವ ಡಾ.ನೀಲಾ ಅವರು ’ಗುರುವಿಂಗೆ ಶರಣು ಶರಣಾರ್ಥಿ ಲಿಂಗಕ್ಕೆ ಶರಣು ಶರಣಾರ್ಥಿ ಜಂಗಮಕ್ಕೆ ಶರಣು ಶರಣಾರ್ಥಿ’ ಎಂಬ ದಾಸೋಹ ಮಹಾಸೂತ್ರ ಎಂಬ ವಿಷಯದ ಮೇಲೆ ಡಾ.ನೀಲಾ ಅವರು ಕ್ಯಾನ್ವಾಸ್‌ನಲ್ಲಿ ಅಕ್ರಿಲಿಕ್ ಬಣ್ಣದ ಕಲಾಕೃತಿ ರಚಿಸಿದ್ದಾರೆ. ಈಗ ಇದು ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಸ್ಪರ್ಧೆಯ ಸಂಘಟಕರು ಸ್ಪರ್ಧೆಯಲ್ಲಿ ಭಾಗವಹಿಸಲು ೪೬ ದೇಶಗಳಿಂದ ತಲಾ ಒಬ್ಬ ಕಲಾವಿದನನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವರ ಚಿತ್ರಗಳನ್ನು ಪ್ರದರ್ಶಿಸಲು ಭಾರತದಿಂದ ಆಯ್ಕೆಯಾದ ಏಕೈಕ ಭಾರತೀಯ ಎಂದರೆ ಡಾ. ನೀಲಾ. ಇವರಲ್ಲದೆ ಅಜೆಂಟೀನಾ, ಬ್ರೆಜಿಲ್, ಅಮೇರಿಕಾ, ಅಜರ್‌ಬೈಜಾನ್, ಬೊಲಿವಿಯಾ, ಬಾಂಗ್ಲಾದೇಶ, ಕೋಸ್ಟರಿಕಾ, ಕ್ಯೂಬಾ, ಕೊಲಂಬಿಯಾ, ನ್ಯೂಜಿಲೆಂಡ್, ಇಂಡೋನೇ?, ಇಟಲಿ, ಮೆಕ್ಸಿಕೊ, ಪೆರು, ಪರಾಗ್ವೆ, ಪೋರ್ಚುಗಲ್, ಸ್ಪೇನ್ ಸೇರಿದಂತೆ ವಿವಿಧ ದೇಶಗಳ ಹೆಸರಾಂತ ಚಿತ್ರಕಲಾವಿದರು ಈ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ತಮ್ಮ ಚಿತ್ರಕಲೆಗಳನ್ನು ಪ್ರದರ್ಶಿಸಲು ಆಯ್ಕೆಯಾಗಿರುವರು.

ಡಾ.ನೀಲಾ ಅವರ ವರ್ಣಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿವೆ ಮತ್ತು ಅವರ ವರ್ಣಚಿತ್ರಗಳು ಭಾರತ ಮತ್ತು ವಿದೇಶಗಳಲ್ಲಿನ ಅನೇಕ ಖಾಸಗಿ ಸಂಗ್ರಹಕಾರರ ಗೋಡೆಗಳನ್ನು ಅಲಂಕರಿಸುತ್ತವೆ.

ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ. ನಿಷ್ಠಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು ಡಾ.ನೀಲಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ವವಿದ್ಯಾಲಯಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಅಭಿನಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago