ಕಲಬುರಗಿ: ನಿರುದ್ಯೋಗದ ವಿರುದ್ಧ ದನಿ ಎತ್ತಬೇಕಿದೆ. ಹಾಗೂ ದೇಶದ ಸೌಹಾರ್ದ ಪರಂಪರೆಯನ್ನು ಕಾಪಾಡಿಕೊಳ್ಳಬೇಕಿದೆ. ಜನಸಾಂಸ್ಕೃತಿಕ ಬಹುತ್ವ ಭಾರತಕ್ಕಾಗಿ ನಾವು ಶ್ರಮಿಸೋಣ ಎಂದು ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಮಾತನಾಡಿದರು.
ಭಾನುವಾರ ಸಂಜೆ ನಾಲ್ಕು ಗಂಟೆಗೆ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಸೌಹಾರ್ದತೆಗಾಗಿ ನಾವು ಕಾರ್ಯಕ್ರಮ ನಡೆಯಿತು.
ದೇಶವು ಸರ್ವ ಧರ್ಮಗಳ ಶಾಂತಿ ತೋಟವಾಗಿದೆ. ಶರಣ ಸೂಫಿ ಸಂತ ಪರಂ ಪರೆಯನ್ನು ಜತನದಿಂದ ಕಾಪಾಡಿಕೊಂಡು ಬಂದವರು ಶ್ರಮಜೀವಿಗಳು. ಶ್ರಮಸಂಸ್ಕೃತಿಯನ್ನು ನೇಪಥ್ಯಕ್ಕೆ ತಳ್ಳಿ ಬಹುತ್ವ ಭಾರತವನ್ನು ನಾಶ ಮಾಡುವ ಕೋಮುವಾದಿಗಳ ಹುನ್ನಾರವನ್ನು ಹಿಮ್ಮೆಟ್ಟಿಸಬೇಕಿದೆ.
ದೇಶದಲ್ಲಿ ನಿರುದ್ಯೋಗ ಬಡತನ ಹೆಚ್ಚುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿ ಮಾಡುವುದನ್ನು ಬಿಟ್ಟು ದೇಶದ ಸಂಪತ್ತು ಮಾರುವಲ್ಲಿ ಮಗ್ನವಾಗಿವೆ. ಜನರನ್ನು ದಿಕ್ತಪ್ಪಿಸಲು ಕೋಮುಪ್ರಚೋದನಾತ್ಮಕ ಸಂಗತಿಗಳನ್ನು ಬೆಳೆಸುತಿದೆ. ಕೋಮುಧೃವೀಕರಣಕ್ಕಾಗಿ ಜಾನುವಾರು ಹತ್ಯಾ ನಿಷೇಧ ಕಾಯ್ದೆ ತಂದು ಆಹಾರದ ಹಕ್ಕಿನ ಮೇಲೆ ಧಾಳಿ ಮಾಡುತಿದೆ. ರೈತರ ಮೇಲೆ, ಚರ್ಮ ಮತ್ತು ಚರ್ಮೋತ್ಪನ್ನ ವ್ಯಾಪಾರಿಗಳ ಮೇಲೆ ಏಕಕಾಲಕ್ಕೆ ಆರ್ಥಿಕ ಧಾಳಿ ಮಾಡುತಿದೆ.
ಅಲ್ಪಸಂಖ್ಯಾತರ ಕೈಯಿಂದ ವ್ಯಾಪಾರವನ್ನು ಕಸಿದು ಕಾರ್ಪೋರೇಟ್ ಗಳಿಗೆ ರವಾನಿಸುವ ಹುನ್ನಾರ ಹೊಂದಿದೆ. ಕೋಮುಪುಂಡಾಟಿಕೆಗೆ ಆಸ್ಪದ ಕೊಡಲೆಂದೇ ಮತಾಂತರ ನಿಷೇಧ ಕಾಯ್ದೆ ತರಲಾಗಿದೆ. ಭಾಜಪ ಪಕ್ಷದ ಚುನಾಯಿತ ಸ್ಥಾನದಲ್ಲಿದ್ದವರು ದ್ವೇಷಮಯ ಹೇಳಿಕೆ ಮತ್ತು ಭಾಷಣ ಕೊಟ್ಟು ನಾಡಿನ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…