ಕಲಬುರಗಿ: ನಗರದ ಮಕ್ತಂಪೂರದ ಗುರುಬಸವ ಶ್ರೀಮಠಾಶ್ರಯದ ಅಣ್ಣಾರಾವ ಗಣ್ಮುಖಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಶಿಕ್ಷಣಮಂಡಲ ಸಹಯೋಗದಲ್ಲಿ ಸುಭಾಷಚಂದ್ರ ಭೋಸರ ಜಯಂತಿಯ ನಿಮಿತ್ಯ ಪರಾಕ್ರಮ ದಿನ ಆಚರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು ವಹಿಸಿ ಮಾತನಾಡಿದ ಶ್ರೀಗಳು ಸುಭಾಷಚಂದ್ರ ಭೋಸರ ಪರಾಕ್ರಮದಂತಹ ಗುಣಗಳನ್ನು ವಿದ್ಯಾರ್ಥಿಗಳು ಮೆಚ್ಚಿ ,ದೇಶ ಪ್ರೇಮ ಮೆರೆಯಬೇಕು ಅವರ ಹಾಗೆ ದೇಶ ಪ್ರೇಮ ಪ್ರತಿಯೋಬ್ಬರು ಮೈಗೂಡಿಸಿಕೊಂಳ್ಳಬೇಕೆಂದುದಆಶಿರ್ವಚನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶಿವರಾಜ್ ನಂದಗಾವ ಸ್ವಾಗತಿಸಿದರೆ, ಪ್ರಾಸ್ತಾವಿಕವಾಗಿ ಶಿಕ್ಷಕ ಸಿದ್ಧರಾಮ ಬೇತಾಳೆ ಮಾತನಾಡಿದ ಅವರು ಭಾರತೀಯ ಶಿಕ್ಷಣ ಮಂಡಲದ ಧ್ಯೇಯ, ಕಾರ್ಯಗಳ ಬಗ್ಗೆ ಪರಿಕಲ್ಪನೆ ವಿವರಿಸಿದರು.ಇಂತಹ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಚರಿಸಿ ಅರ್ಥ ಪೂರ್ಣವಾಗಿ ಜಯಂತಿಯನ್ನಾಗಿಸಿದೆ ಎಂದರು.
ವಿಶೇಷ ಉಪನ್ಯಾಸದಲ್ಲಿ ಭಾರತೀಯ ಶಿಕ್ಷಣಮಂಡಲದ ಜಿಲ್ಲಾ ಕಾರ್ಯದರ್ಶಿ ಶಿಕ್ಷಕ ಶಿವಶರಣ ಉದನೂರ ಸುಭಾಷಚಂದ್ರ ಭೋಸರ ಬಾಲ್ಯ ,ಶಿಕ್ಷಣದ ಬಗ್ಗೆ ಹೆಳುತ್ತಾಸಮಗ್ರ ಜೀವನ ಅನಾವರಣ ಮಾಡಿದರು.ವಿದೇಶದಲ್ಲಿದ ಭಾರತೀಯ ಸೈನಿಕರನ್ನು ಸಂಘಟಿಸಿ ಭಾರತ ಸ್ವತಂತ್ರಕ್ಕಾಗಿ ಜೀವದ ಹಂಗು ತೊರೆದು ದೇಶ-ವಿದೇಶಗಳನ್ನು ಪಾದರಸದಂತೆ ಸುತ್ತಾಡಿ ಹೋರಾಡಿದ ಕ್ರಾಂತಿಕಾರಿ ಅಂಶಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಲಕ್ಷ್ಮೀಕಾಂತ ಖಣದಾಳ ಮಾತನಾಡಿದರು ವಿದ್ಯಾರ್ಥಿಗಳು ಆಸಕ್ತಿಯುತವಾಗಿ ಸುಭಾಶ್ಚಂದ್ರರ ಸಮಗ್ರ ಜೀವನ ಚಿತ್ರಣವನ್ನು ಗ್ರಹಿಸಿ ರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಯುವ ಆಯಾಮದ ಪ್ರಮುಖ ಶಿವರಾಜ್ ಪಾಟೀಲ್, ಕಾಲೇಜಿನ ಉಪನ್ಯಾಸಕರು.ವಿದ್ಯಾರ್ಥೀಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…
ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…
ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…
ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…
ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…