ಶಹಾಪುರ: ಡಾ.ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಿಂದ ಅಭಿವೃದ್ಧ ರಾಷ್ಟ್ರಗಳ ಪಟ್ಟಿಗೆ ಸೇರುವತ್ತ ದಾಪುಗಾವಲಿಟ್ಟಿದ್ದ ಭಾರತದ ಆರ್ಥಿಕತೆಯನ್ನು ಕೇವಲ ಐದಾರು ವರ್ಷಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಹೊರ ಬೀಳುವಂತೆ ಮಾಡಿದ ಕೇಂದ್ರ ಸರ್ಕಾರವು ಭಾರತದ ಜನರ ಬದುಕನ್ನು, ರೈತರು ಮತ್ತು ಗ್ರಾಮೀಣ ಜನರ ಆರ್ಥಿಕತೆಯನ್ನು ಎಲ್ಲ ಅರ್ಥಗಳಲ್ಲಿಯೂ ಸಹ ಮುಗಿಸಿ ಹಾಕಿದೆ ಎಂದು ಭೀಮಾರ್ಮಿ ಜಿಲ್ಲಾಧ್ಯಕ್ಷರಾದ ಶಿವು ಆಂದೋಲ ಟೀಕಿಸಿದ್ದಾರೆ.
ಬಜೆಟ್ ಮಂಡನೆ ಕುರಿತು ಹೇಳಿಕೆ ನೀಡಿದ ಅವರು ಇನ್ನು ಹಸಿವು, ಬಡತನ, ನಿರುದ್ಯೋಗವು ಹಿಂದಿಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಭಾರತದ ಆರ್ಥಿಕ ಮತ್ತು ಸಮಗ್ರ ಅಭಿವೃದ್ಧಿಯ ಶಕ್ತಿಯನ್ನು ತೀರಾ ಕುಗ್ಗಿಸಿ, ಇದೀಗ ಅತ್ಯಂತ ಅಭಿವೃದ್ಧಿ ಹೊಂದಿದ ಅಮೇರಿಕಾದಂತಹ ದೇಶಗಳಿಗೆ ತಕ್ಕಂತೆ ಡಿಜಿಟಲ್ ಲೋಕದ ಬಜೆಟ್ ನ ರೂಪು ರೇಷೆಗಳನ್ನು ಸಿದ್ಧಪಡಿಸಲು ಹೊರಟಿರುವ ಕೇಂದ್ರ ಸರ್ಕಾರವು ಜಾಗತಿಕ ಮಟ್ಟದಲ್ಲಿ ಕಾರ್ಪೋರೇಟ್ ಗಳಿಗೆ ಸಹಾಯವಾಗುವಂತೆ ಭಾರತವನ್ನು ಪ್ರತಿನಿಧಿಸಲು ಹೊರಟಿದ್ದು ನಮ್ಮ ದೇಶದ ಬಡವರು, ಕೃಷಿ ಕಾರ್ಮಿಕರು ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಮೋಸ ಮಾಡುತ್ತಿದೆ ಎಂದು ಆರರೋಪಿಸಿದ್ದಾರೆ.
ಭಾರತದಲ್ಲಿ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳುವ ವಾತವರಣವನ್ನಾಗಲೀ ಇಲ್ಲವೇ ಮೂಲ ಸೌಕರ್ಯವನ್ನಾಗಲೀ ಇವರ ಕೈಯಲ್ಲಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಹೀಗಿದ್ದರೂ ಕೂಡಾ ಸಾಮಾನ್ಯ ಜನರ ಬದುಕಿಗೆ ಸಂಬಂಧವಿಲ್ಲದಂತೆ ಆರ್ಥಿಕ ನೀತಿಗಳನ್ನು ರೂಪಿಸಲು ಹೊರಟಿರುವ ಇವರ ಬಜೆಟ್ಟಿಗೂ ಜನ ಸಾಮಾನ್ಯರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಇವರ ಯೋಜನೆ ಮತ್ತು ಯೋಚನೆ ಏನಿದ್ದರೂ ಕಾರ್ಪೊರೇಟ್ ಗಳ ಹಿತಕಾಯುವುದು ಹೇಗೆ ಎಂಬುದರ ಕುರಿತಾಗಿದ್ದು ಇದು ಪಕ್ಷಾತೀತವಾಗಿ ಭಾರತದ ಎಲ್ಲಾ ಜನ ಸಾಮಾನ್ಯರ ಅನುಭವಕ್ಕೂ ಬರುತ್ತಿದೆ, ಮುಂದೆಯೂ ಬರುತ್ತದೆ ಮುಂದೆ ಬರುತ್ತದೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…