ಬಿಸಿ ಬಿಸಿ ಸುದ್ದಿ

ಪ್ರೇಮಿಯೇ ಕೊಂದು ಕೆರೆಗೆ ಎಸೆದ್ನಾ?

ಬ್ಯಾಡಗಿ: ತಾಲೂಕಿನ ಕಳಗೊಂಡ ಗ್ರಾಮದ ತನುಜಾ ಅನ್ನೋ ಯುವತಿ ಅದೇ ಗ್ರಾಮದ ಬಸವರಾಜ ಬಸಾಪುರ ಅನ್ನೋ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ಲು. ಹೀಗೆ ಮದುವೆಯಾದವಳು ನಿನ್ನೆ ಕಾಗಿನೆಲೆ ಕೆರೆಯಲ್ಲಿ ಶವವಾಗಿದ್ಲು.

ಪ್ರೀತಿ ಹುಟ್ಟುವಾಗ ಜಾತಿ, ಧರ್ಮ ನೋಡಿ ಹುಟ್ಟಲ್ಲ. ಆದ್ರೆ ಸಮಾಜದಲ್ಲಿ ಮದುವೆ ಆಗಲು, ಪ್ರೀತಿ ಮಾಡಲು ಜಾತಿ ಅತಿ ಮುಖ್ಯ. ಇಲ್ಲೊಂದು ಜೋಡಿಗೆ ಜಾತಿ ಬೇರೆ ಬೇರೆಯಾದ್ರೂ ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಮನೆಯವರ ವಿರೋಧದ ನಡುವೆಯೂ ಆಕೆ ಆತನನ್ನ ಮದುವೆಯಾಗಿದ್ಲು. ಹೀಗೆ ಹತ್ತಾರು ಕನಸು ಕಂಡು ಲವ್‌ ಮ್ಯಾರೇಜ್‌ ಆಗಿದ್ದ ಯುವತಿ ನಿನ್ನೆ ಶವವಾಗಿದ್ದಾಳೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಪೊಲೀಸ್‌ ಠಾಣೆ ಮುಂದೆ ನಿನ್ನೆ ಬಿಗ್‌ ಹೈಡ್ರಾಮಾವೇ ನಡೆದಿತ್ತು. ರೊಚ್ಚಿಗೆದ್ದ ಜನ ಠಾಣೆಗೆ ನುಗ್ಗಿದ್ರು. ಆಕ್ರೋಶಗೊಂಡಿದ್ರು. ಅಷ್ಟಕ್ಕೂ ಇವರ ಆಕ್ರೋಶಕ್ಕೆ ಕಾರಣವೇ ಯುವತಿಯ ಸಾವು.

ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದ ತನುಜಾ ಅನ್ನೋ ಯುವತಿ ಅದೇ ಗ್ರಾಮದ ಬಸವರಾಜ ಬಸಾಪುರ ಅನ್ನೋ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ಲು. ಹೀಗೆ ಮದುವೆಯಾದವಳು ನಿನ್ನೆ ಕಾಗಿನೆಲೆ ಕೆರೆಯಲ್ಲಿ ಶವವಾಗಿದ್ಲು. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ತನುಜಾಳನ್ನ ಗಂಡನ ಮನೆಯವರೆ ಕೊಂದು ಕೆರೆಗೆ ಎಸೆದಿದ್ದಾರೆ ಅಂತಾ ತನುಜಾ ಪೋಷಕರು ಆರೋಪಿಸುತ್ತಿದ್ದಾರೆ .

ಇನ್ನು ಜನವರಿ 28 ರಂದೇ ತನುಜಾ ಕಾಣೆಯಾಗಿದ್ಲು. ಈ ಸಂಬಂಧ ಕಾಗಿನೆಲೆ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ಕೂಡಾ ದಾಖಲಾಗಿತ್ತು. ಈ ವಿಷ್ಯ ತನುಜಾ ಪೋಷಕರಿಗೆ ಗೊತ್ತಾಗಿತ್ತು. ಹೀಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಹೀಗಿರುವಾಗ್ಲೇ ನಿನ್ನೆ ಕಾಗಿನೆಲೆ ಕೆರೆಯಲ್ಲಿ ಮಹಿಳೆಯ ಶವ ತೇಲಾಡ್ತಿರೋದು ಕಂಡಿದೆ. ಹತ್ತಿರಕ್ಕೆ ಹೋಗಿ ನೋಡಿದ್ರೆ ಅದು ತನುಜಾಳದ್ದೇ ಅನ್ನೋದು ಗೊತ್ತಾಗಿದೆ. ಜನವರಿ 28 ರಂದೇ ತನುಜಾಳನ್ನ ಕಾಗಿನೆಲೆ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದ ಪತಿ ಬಸವರಾಜ್‌ ಅಲ್ಲಿ ಮಾನಸಿಕ ಹಿಂಸೆ ನೀಡಿದ್ದಾನೆ. ಬಳಿಕ ಕೊಂದು ಶವವನ್ನ ಕೆರೆಗೆ ಎಸೆದಿದ್ದಾನೆ ಅನ್ನೋದು ಆಕೆಯ ಪೋಷಕರ ಆರೋಪ. ಅಷ್ಟಕ್ಕೂ ಸತ್ತವಳ ಕಾಲಲ್ಲಿ ಇದ್ದ ಚಪ್ಪಲಿಗಳು ಕೂಡಾ ಹಾಗೇ ಇದ್ವು. ಆಕೆ ಒಂದಿಷ್ಟು ಒದ್ದಾಡದೇ ಪ್ರಾಣ ಬಿಟ್ಟಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಆಗಿದ್ರೂ ಶವದ ಬಳಿ ಆಕೆಯ ಪತಿಯಾಗ್ಲಿ, ಪತಿ ಮನೆಯವರಾಗ್ಲಿ ಬಂದಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.

ಸದ್ಯ ಕಾಗಿನೆಲೆ ಪೊಲೀಸರು ಮೃತ ಮನುಜಾಳ ಪತಿ ಬಸವರಾಜ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು ಐವರ ವಿರುದ್ದ ಕೇಸ್‌ ದಾಖಲಿಸಿಕೊಂಡಿದ್ದಾರೆ. ಬಸವರಾಜ ಸೇರಿದಂತೆ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago