ಶಹಬಾದ :ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಇದೆ. ಮನವನ್ನು ಅರಳಿಸಿ ಹೃದಯವನ್ನು ಉದ್ದೀಪಿಸಿ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಬದುಕುವ ರೀತಿ-ನೀತಿಗಳನ್ನು ಕಲಿಸುತ್ತದೆ ಎಂದು ಸೆಂಟ್ ಥಾಮಸ್ ಚರ್ಚ್‌ನ ಫಾದರ್ ಸ್ಟೇನಿ ಗೋವಿಯಸ್ ಅಭಿಪ್ರಾಯ ಪಟ್ಟರು.
ಅವರು ಜಿ.ಬಿ.ಸಂಗೀತಾ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ/ಸಾಮನ್ಯ ಯೋಜನೆಯಡಿ ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಧಾರ್ಮಿಕ ಹಿನ್ನೆಲೆ ಹೊಂದಿರುವ ಇದು ಸಾಹಿತ್ಯ, ಗಾನ, ನೃತ್ಯ ಈ ಮೂರು ಪ್ರಕಾರಗಳನ್ನು ಮೇಳೈಸಿಕೊಂಡು ಮನಸಿಗೆ ಮುದ ನೀಡುತ್ತದೆ. ಸಂಗೀತ ಹಾಗೂ ಗಾಯನವನ್ನು ಆಧುನಿಕತೆಗೆ ಮುಖಾಮುಖಿಯಾಗಿಸಿಕೊಂಡು ಅಸ್ಮಿತೆಯನ್ನು ಹಾಗೆ ಉಳಿಸಿಕೊಳ್ಳಬೇಕಿದೆ.
ಸಂಗೀತ, ಜ್ಞಾಪನ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶಾಂತಿ-ಸಮಾಧಾನ ನೀಡುತ್ತದೆ. ಜಗತ್ತಿನ ಜೀವ-ಜಂತುಗಳು ಸಹ ನಾದಕ್ಕೆ ತಲೆದೂಗುತ್ತವೆ. ಇತ್ತೀಚಿಗೆ ಸಂಗೀತ ತೋಟಗಳನ್ನು ನಿರ್ಮಾಣ ಮಾಡುವುದರೊಂದಿಗೆ ಗಿಡ-ಮರಗಳು ಸಹ ಸಂಗೀತಕ್ಕೆ ಮಾರು ಹೋಗಿವೆ ಎಂದು ಸಂಶೋಧನೆ ಮಾಡಲಾಗಿದೆ.
ಅಧ್ಯಕ್ಷತೆ ವಸಹಿ ಮಾತನಾಡಿ ಹಿರಿಯ ಕಲಾವಿದ ಜಿ.ಎಸ್.ನನ್ನಾವರೆ ಮಾತನಾಡಿ, ಗಾಯನ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ತಮ್ಮ ಹಾಡುಗಳನ್ನು ಹಾಡುವ ಮುಖೇನ ಲೋಕ ಪ್ರಸಿದ್ದಿಯಾಗಿದ್ದಾರೆ. ಈ ದಿಸೆಯಲ್ಲಿ ಸಂಗೀತ ಜಾಗೃತಿ ಮೂಡಿಸುವುದರೊಂದಿಗೆ ಮುಂದಿನ ಜನಾಂಗಕ್ಕೆ ಅದನ್ನು ಹಸ್ತಾಂತರಿಸುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ನಗರಸಭೆಯ ಸದಸ್ಯೆ ಸಾಬೇರಾ ಬೇಗಂ, ಇಂಗಳಗಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಜಿ.ಬಿ. ಸಂಗೀತಾ ಕಲಾ ಸಂಸ್ಥೆಯ ಕಾರ್ಯದರ್ಶಿ ಶಾಂತಪ್ಪ ಹಡಪದ ವೇದಿಕೆಯ ಮೇಲಿದ್ದರು.
ಶಾಸ್ತ್ರೀಯ ಸಂಗೀತವನ್ನು ಕಲಾವಿದ ಮೌನೇಶ್ವರರಾವ ಸೂನಾರ್, ವಚನ ಗಾಯನವನ್ನು ಕಲಾವಿದೆ ಸುಲಲಿತಾ ಕೊಳ್ಳಿ, ದಾಸವಾಣಿಯನ್ನು ಸೇಡಂನ ಕಲಾವಿದೆ ವಿಜಯಲಕ್ಷ್ಮಿ ಕಟ್ಟಿಮನಿ ನಡೆಸಿಕೊಟ್ಟರು. ತಬಲಾ ಕಲಾವಿದರಾದ ನಾಗಭೂಷಣ ಸ್ಥಾವರಮಠ, ಲೋಕೇಶ ಪತ್ತಾರ, ಪೂಜಾ ಮೋನಯ್ಯಾ ಹಾರ್ಮೋನಿಯಂ ಸಾಥ್ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…