ಬಿಸಿ ಬಿಸಿ ಸುದ್ದಿ

ಅಪರೂಪದ, ವಿಶಿಷ್ಟ ಮತ್ತು ನಾಡಿನ ಹೆಮ್ಮೆಯ ಗಾಯಕರಾದ ರಾಮಕುಮಾರ ಸಿಂಧೆಯವರು..!

  • ಕೆ.ಶಿವು.ಲಕ್ಕಣ್ಣವರ

ಬಸವಣ್ಣನವರ ವಚನಗಳನ್ನು ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಹಾಡುತ್ತಾ ವಚನಗಳನ್ನು ಪ್ರಚುರ ಪಡಿಸದ ರಾಮಕುಮಾರ ಸಿಂಧೆ ಅವರು ವಿಶಿಷ್ಟ ಮತ್ತು ಅಪರೂಪದ ಗಾಯಕರು.

ವಚನಗಳ ಗಂಧ-ಗಾಳಿಯನ್ನು ಅರಿತು ಕುಡಿದ ಅಪರೂಪದ ಗಾಯಕರು ಇವರು. ಆ ಕಾಣಕ್ಕೇ ಇರಬೇಕು ಇವರು ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಸುಂದರವಾಗಿ ಮತ್ತು ಅರ್ಥಗರ್ಭಿತವಾಗಿ ಮೂಲ ವಚನಗಳಿಗೆ ಎಲ್ಲೂ ಚ್ಯುತಿ ಬರೆದಂತೆ ಹಾಡುವ ಕನ್ನಡದ ಅಪರೂಪದ ಗಾಯಕರೆಂದರೆ ಈ ನಮ್ಮ ರಾಮಕುಮಾರ ಸಿಂಧೆಯವರು.

ನಾಡಿನ ಎಲ್ಲೆ ಮೀರಿ ಪಸರಿಸಿರುವ ಇವರ ಜನಪ್ರಿಯತೆ ಈ ಮೂಲ ವಚನಗಳ ಹಾಡಿನಲ್ಲೇ. ಇದರೊಂದಿಗೆ ಮುಕೇಶ್ ಎಂದೂ ಹೆಸರು ಮಾಡಿರುವ ಇವರು ನಾಡಿನುದ್ದಕ್ಕೂ ವಚನಗಳನ್ನು ಹಾಡಿದ್ದಾರೆ ಮತ್ತು ವಚನಗಳನ್ನು ಪ್ರಚುರಪಡಿಸಿದ್ದಾರೆ. ಪ್ರಚುರ ಪಡಿಸುತ್ತಿದ್ದಾರೆ ಕೂಡ.

ಇದರ ಜೊತೆಗೆ ಈ ನಮ್ಮ ಗಜಲ್ ಗಳನ್ನು ರಾಮಕುಮಾರ ಸಿಂಧೆ ಬಾಯಲ್ಲಿ ಕೇಳುತ್ತಿದ್ದರೆ ಎಲ್ಲರೂ ಮೂಖ ವಿಸ್ಮತರಾಗುತ್ತಾರೆ. ಆ ನಮ್ಮ ರಾಮಕುಮಾರ ಹಾಡು ಕೇಳುವಂತೆ ಮನಸ್ಸನ್ನು ಗಾಯನದಲ್ಲಿ ತಲ್ಲೀನರಾಗುತ್ತಾರೆ. ಅಂತಹ ಇವರ ಧ್ವನಿ ಕನ್ನಡ ಮತ್ತು ಹಿಂದಿ ಗಾಯನ ಪ್ರಿಯರಿಗೆ ಸಗ್ಗ ಸುಖವನ್ನು ನೀಡುತ್ತದೆ.

ಕನ್ನಡದ ಮುಕೇಶ್ ಎಂದೇ ಹೆಸರು ಮಾಡಿರುವ ರಾಮಕುಮಾರ ಸಿಂಧೆಯವರು ವಚನಗಳ ಹಾಡುವಿಕೆ ಜೊತೆಗೆ ಗಜಲ್ ನ್ನು ಜನರಿಗೆ ಮುಟ್ಟಿಸುತ್ತಾ ಇದರ ಜೊತೆಯಲ್ಲಿಯೇ ಭಕ್ತಿ ಗೀತೆ, ಜಾನಪದ ಗೀತೆ, ಸುಗಮ ಸಂಗೀತ ಮತ್ತು ನಾಟಕ ಗೀತೆಗಳನ್ನು ಹಾಡುತ್ತಾ ಸಂಗೀತದ ವಿವಿಧ ಪ್ರಕಾರಗಳಲ್ಲಿಯೂ ಸಾಕಷ್ಟು ಗಾಯನ ಸಾಧನೆ ಮಾಡಿದ್ದಾರೆ.

ಕನ್ನಡ ಮತ್ತು ಹಿಂದಿಯಲ್ಲಿ ವಚನಗಳನ್ನು ಹಾಡಿರುವ ಇವರೇ ಪ್ರಥಮರೆಂದರೆ ತಪ್ಪಾಗುವುದಿಲ್ಲ. ಹೀಗೆಯೇ ವಚನಕಾರರನ್ನು ಈ ರಾಷ್ಟ್ರದ ಎಲ್ಲೆ ಮೀರಿ ಪ್ರಚುರಪಡಿಸಿದ ಇವರ ಧ್ವನಿಯಿಂದಲೇ ಈ ವಚನಗಳನ್ನು ಹಾಡಿಸಲೆಂದೇ ವಿದೇಶಿಗರು ಇವರನ್ನು ಕರೆಸಿಕೊಳ್ಳುದುಂಟು. ನೇಪಾಳ, ಅಮೇರಿಕಗಳಂತೆ ಇವರ ವಚನಗಳನ್ನು ಮತ್ತು ಸಂಗೀತವನ್ನು ಕೇಳಲೆಂದೇ ಇವರನ್ನು ಬೇರೆ-ಬೇರೆ ರಾಷ್ಟ್ರಗಳು ಕರೆಸಿಕೊಳುವುದುಂಟು.

ಇವರನ್ನು ಕನ್ನಡದ ಮುಖೇಶ್ ಅಂತಲೂ ಬಹುಜನ ಕರೆಯುವುದುಂಟು ಮತ್ತು ಈ ಹೆಸರು ಇವರಿಗೆ ಸಾಮಾನ್ಯವಾಗಿದೆ. ಮತ್ತು ಹೆಚ್ಚು ಜನಜನಿತವಾಗಿದೆ.

ಸಾಹಿತ್ಯ ಮತ್ತು ಸಂಗೀತದ ನೆಲೆವೀಡು ಧಾರವಾಡದ ಮಲೆನಾಡಿನ ಅಂಚಿಗೆ ಅಂಟಿಕೊಂಡಿರುವ ‘ಅಳ್ನಾವರ’ ಪಟ್ಟಣದ ಇವರು ಹುಟ್ಟಿರಿವುದು 1943 ರ ಮಾರ್ಚ್ 1 ರಂದು.

ಬಾಲ್ಯದಲ್ಲಿಯೇ ಇವರಿಗೆ ಗ್ರಾಮಾಫೋನ್ ಸಹವಾಸ ಬೆಳೆಯಿತು. ಇದರ ಸಹವಾಸದಲ್ಲಿಯೇ ಇವರು ತಮ್ಮ 9 ನೆಯ ವಯಸ್ಸಿನಲ್ಲಿ ಸೈಗಲ್ ಮತ್ತು ಮುಖೇಶ್ ಅವರ ಹಾಡುಗಳನ್ನು ಹಾಡುವುದುರೊಂದಿಗೆ ತಮ್ಮ ಗಾಯನ ವಾಚನ ಶುರು ಮಾಡಿದರು ರಾಮಕುಮಾರ ಸಿಂಧೆ ಅವರು.

ಹಾಗೆಯೇ ಬರುಬರುತ್ತ ಗಾಯನದ ವಿವಿಧ ಪ್ರಕಾರಗಳನ್ನು ತೆರೆಯುತ್ತಾ ಅವರಿಷ್ಟದ ವಚನಗಳನ್ನಂತೂ ನಾಡಿನುದ್ದಕ್ಕೂ ಕೊಂಡೊಯ್ದರು. ಹಾಗೆಯೇ ಲಂಡನ್‌, ಪ್ಯಾರಿಸ್ ಜೊತೆಗೆ ವಿವಿಧ ರಾಷ್ಟ್ರಗಳಲ್ಲೂ ಈ ವಚನಗಳನ್ನು ಮತ್ತು ವಿವಿಧ ರೀತಿಯ ಗಾಯನವನ್ನು ಕೊಂಡೊಯ್ದರು.

ಹೀಗಿರುವ ಇವರು ಹವ್ಯಾಸಿ ಪತ್ರಕರ್ತರೂ ಹೌದು ಎಂಬುದೂ ವಿಶೇಷ.

ರಾಮಕುಮಾರ ಸಿಂಧೆಯವರು ಹುಬ್ಬಳ್ಳಿಯ ಶ್ರೀಮಂಜುನಾಥ ಹೈಸ್ಕೂಲ್ ನ‌ ಸಂಸ್ಥಾಪಕರೂ ಹೌದು.
ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಮಜಸೇವೆಯಲ್ಲೂ ತೊಡಗಿಕೊಂಡವರು. ಹಲವಾರು ಸಂಘ-ಸಂಸ್ಥೆಗಳಲ್ಲೂ ತೊಡಗಿಕೊಂಡವರು.

ವೈಚಾರಿಕ ಸಾಹಿತ್ಯ, ಸಂಗೀತ, ಕಲೆಗಳ ಆಶ್ರಯದಾತರು. ಸಾಮಾಜಿಕ, ಶೈಕ್ಷಣಿಕ, ಕಾರ್ಮಿಕ ಸಂಘಟನೆಗಳಲ್ಲೂ ತೊಡಗಿಕೊಂಡವರು.
ವಿವಿಧ ರಾಷ್ಟ್ರಗಳಲ್ಲಿ ತಮ್ಮ ಗಾಯನದಿಂದ ದುಡಿದ ದುಡ್ಡನ್ನು ಈ ಕಾರ್ಯಗಳಲ್ಲಿ ಬಳುಸುವವರು.

ಇಂತಹ ಇವರಿಗೆ ಭಾರತ, ನೇಪಾಳ ದೇಶದಿಂದ ಶಾಂತಿ- ಸದ್ಭಾವನ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಇತ್ಯಾದಿ ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳೂ ಇವರನ್ನು ಹುಡಿಕೊಂಡು ಬಂದಿವೆ.

ಇಂತಹ ರಾಮಕುಮಾರ ಸಿಂಧೆಯವರ ಮಗಳು ಗೀತಾ‌ ಗಾಯನದಲ್ಲಿ ಮತ್ತು ಭರತನಾಟ್ಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅದಲ್ಲದೇ ಗೀತಾ ಅವರ ಮಗಳು ಅಂದರೆ ರಾಮಕುಮಾರ ಸಿಂಧೆಯವರ ಮೊಮ್ಮಗಳು ಭರತನಾಟ್ಯದಲ್ಲಿ ಸಾಧಾಕರಾದವರು.
ಹೀಗೆಯೇ ರಾಮಕುಮಾರ ಸಿಂಧೆಯವರು ತಮ್ಮ ಇಡೀ ಕುಟುಂಬವನ್ನು ಸಂಗೀತ ಮತ್ತು ನಾಟ್ಯದಲ್ಲಿ ತೊಡಗಿಸಿದವರು.

ರಾಮಕುಮಾರ ಸಿಂಧೆಯವರು ಅಲ್ಲದೇ ಇನ್ನುಳಿದ ಇವರ ಕುಟುಂಬದ ಸಂಗೀತ ಮತ್ತು ನಾಟ್ಯದ ಬಗೆಗೆ ಇನ್ನೊಮ್ಮೆ ಬರೆಯುತ್ತೇನೆ. ಸದ್ಯಕ್ಕೆ ಸಾಕಿಷ್ಟು.

ಹೀಗಿರುವ ಮತ್ತು ಇಂತಹ ಗಾಯಕ ಅಪರೂಪ. ಮತ್ತು ಸಾಹಿತ್ಯ-ಕಲೆಗಳ ತವರು ಎಂದೇ ಪ್ರಖ್ಯಾತಿ ಪಡೆದಿರುವ ಧಾರವಾಡದವರು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ಅಂಥ ಹೇಳಿ ಇವರ ಬಗೆಗಿನ ಮಾತು ಮುಗಿಸುತ್ತೇನೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago