ಬಿಸಿ ಬಿಸಿ ಸುದ್ದಿ

ಶೇಕಡಾ 50 ರಷ್ಟು ಆಸನ ಭರ್ತಿ ನಿಯಮ ನಮಗೇಕಿಲ್ಲ: ಕಲ್ಯಾಣ ಮಂಟಪಗಳ ಮಾಲೀಕರ ಪ್ರಶ್ನೆ

ಹುಬ್ಬಳ್ಳಿ: ಚಿತ್ರಮಂದಿರ, ಸಭಾಭವನ, ಜಿಮ್‌ ಮುಂತಾದವುಗಳಿಗೆ ಇರುವ ಕೋವಿಡ್‌ ನಿಯಮ ನಮಗೇಕಿಲ್ಲ? ಅವರಿಗೆ ಶೇ 50 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಕಲ್ಯಾಣ ಮಂಟಪಗಳಿಗೇಕೆ ಈ ನಿಯಮ ಅನ್ವಯಿಸಿಲ್ಲ? ಸಾವಿರ ಆಸನ ಸಾಮರ್ಥ್ಯದ ಕಲ್ಯಾಣ ಮಂಟಪಕ್ಕೂ 200 ಮಂದಿಗೆ ಮಾತ್ರವೇ ಏಕೆ ಅವಕಾಶ ನೀಡಲಾಗಿದೆ ಎಂಬುದು ಕಲ್ಯಾಣ ಮಂಟಪಗಳ ಮಾಲೀಕರ ಪ್ರಶ್ನೆ.

ಕೋಟ್ಯಂತರ ಖರ್ಚು ಮಾಡಿ ನಿರ್ಮಿಸಿದ ಕಲ್ಯಾಣ ಮಂಟಪಗಳು ಬೀಗ ಹಾಕಬೇಕಾದ ಸ್ಥಿತಿಗೆ ತಲುಪಿವೆ. ಅವುಗಳನ್ನೇ ನಂಬಿಕೊಂಡಿರುವ ಕಾರ್ಮಿಕರು, ಅಡುಗೆ ಮಾಡುವವರು, ಅಲಂಕಾರದವರು, ಓಲಗದವರು ಸೇರಿದಂತೆ ಸಾವಿರಾರು ಕುಟುಂಬಗಳು ಉದ್ಯೋಗ ಕಳೆದುಕೊಳ್ಳುತ್ತವೆ ಎನ್ನುತ್ತಾರೆ ಕಲ್ಯಾಣ ಮಂಟಪಗಳ ಮಾಲೀಕರು.

‘200 ರಿಂದ 1,500 ಜನರ ಸಾಮರ್ಥ್ಯದ ಕಲ್ಯಾಣ ಮಂಟಪಗಳಿವೆ. ಸಾವಿರ ಆಸನ ಹೊಂದಿರುವ ಮಂಟಪಗಳಲ್ಲಿಯೂ 200 ಜನರಿಗೆ ಸೀಮಿತಗೊಳಿಸಿರುವುದರಿಂದ ಜನರು ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುತ್ತಿಲ್ಲ. ಇಲ್ಲಿಯೂ ಶೇ 50 ರಷ್ಟು ಅನ್ವಯಿಸಿದರೆ, ಅನುಕೂಲ ಆಗುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿಯ-ಧಾರವಾಡ ಕಲ್ಯಾಣ ಮಂಟಪ ಓನರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಬಸವರಾಜ ಹೆಬಸೂರ.

ವಿದ್ಯುತ್‌ ಬಿಲ್‌, ಮ್ಯಾನೇಜರ್, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರ ವೇತನ ಸೇರಿದಂತೆ ಕಲ್ಯಾಣ ಮಂಟಪ ನಿರ್ವಹಣೆಗೆ ತಿಂಗಳಿಗೆ ಒಂದು ಲಕ್ಷ ಖರ್ಚಾಗುತ್ತದೆ. ಮೂರು ವರ್ಷಗಳಿಂದ ಇಲ್ಲಿ ನಡೆಯುವುದಕ್ಕಿಂತ ರದ್ದಾದ ಮದುವೆಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಅವರು.

‘ಮುಂಗಡವಾಗಿ ಕಲ್ಯಾಣ ಮಂಟಪ ಕಾಯ್ದಿರಿಸಿದವರು ಈಗ ಮಂಟಪ ರದ್ದು ಮಾಡಿದ್ದಾರೆ. ಕೆಲವರು ಮನೆ ಮುಂದೆಯೇ ಮದುವೆ ಮಾಡುತ್ತಿದ್ದರೆ, ಇನ್ನೂ ಕೆಲವರು ಮುಂದೂಡಿದ್ದಾರೆ. ಮುಂಗಡ ಹಣ ವಾಪಸ್‌ ನೀಡುವುದೇ ಕೆಲಸವಾಗಿದೆ. ಇದರಿಂದಾಗಿ ಮಂಟಪಗಳ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಸಂಕಷ್ಟ ಬಿಚ್ಚಿಟ್ಟರು.

‘ಡಿಸೆಂಬರ್‌ನಲ್ಲಿ ಎರಡು ಕಾರ್ಯಕ್ರಮಗಳು ನಡೆದವು. ಆ ನಂತರ ಯಾರೂ ಬಂದಿಲ್ಲ. ಜನವರಿಯಲ್ಲಿಯೂ ಕೋವಿಡ್‌ ನಿಯಮಗಳಿಂದಾಗಿ ಕಾರ್ಯಕ್ರಮ ನಡೆದಿಲ್ಲ’ ಎನ್ನುತ್ತಾರೆ ಗೋಕುಲ ಗಾರ್ಡನ್‌ ಮ್ಯಾನೇಜರ್‌ ರಮೇಶ.

ಮದುವೆ ಸೀಸನ್‌ ಅಲ್ಲದ ಸಂದರ್ಭದಲ್ಲಿ ಕಲ್ಯಾಣ ಮಂಟಗಳನ್ನು ವಿವಿಧ ವಸ್ತುಗಳ ಮಾರಾಟ ಮೇಳಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಅವುಗಳೂ ನಡೆಯುತ್ತಿಲ್ಲ.

ನಿರ್ವಹಣೆಗೆ ಲಕ್ಷಾಂತರ ವೆಚ್ಚ ಸಾವಿರಾರು ಕುಟುಂಬಗಳಿಗೆ ಸಂಕಷ್ಟ ಮುಂಗಡ ಹಣ ವಾಪಸ್‌ ನೀಡುವುದೇ ಕೆಲಸ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

51 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago