ಸುರಪುರ: ತಾಲೂಕಿನ ಅನೇಕ ಕಡೆಗಳಲ್ಲಿ ಸಿದ್ಧಗಂಗಾದ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ೧೧೫ನೇ ಜಯಂತಿಯನ್ನು ಆಚರಿಸಲಾಗಿದೆ.ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಶ್ರೀಗಳ ಜನುಮ ದಿನಾಚರಣೆ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ವಂದಿಸಿದರು.ಕಾರ್ಯಕ್ರಮದಲ್ಲಿ ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಹಾಗೂ ರುಕ್ಮಾಪುರ ಹಿರೇಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಭಾಗವಹಿಸಿ ಸಾನಿಧ್ಯವಹಿಸಿದ್ದರು.ಅಮರಯ್ಯಸ್ವಾಮಿ ಕಡ್ಲೆಪ್ಪನವರಮಠ,ವಿರೇಶ ಪಂಚಾಂಗಮಠ ಇದ್ದರು.
ನಂತರ ನಡೆದ ಅನ್ನದಾಸೋಹ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗೂ ಮುಖಂಡರುಗಳಾದ ರಾಜಾ ಮುಕುಂದ ನಾಯಕ,ಕಿಶೋರಚಂದ್ ಜೈನ್,ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ,ಜಿ.ಎಸ್.ಪಾಟೀಲ್,ಟಿಹೆಚ್‌ಓ ಡಾ:ಆರ್.ವಿ ನಾಯಕ,ವೇಣುಗೋಪಾಲ ಜೇವರ್ಗಿ,ಶಿವರಾಜಪ್ಪ ಗೋಲಗೇರಿ,ಸೂಗುರೇಶ ವಾರದ,ಮಲ್ಲಣ್ಣ ಸಾಹು ನರಸಿಂಗಪೇಟ,ಎಸ್.ಎಮ್ ಕನಕರಡ್ಡಿ,ವಿರೇಶ ನಿಷ್ಠಿ ದೇಶಮುಖ,ಶರಣಪ್ಪ ಕಲಕೇರಿ,ಉಸ್ತಾದ ವಜಾಹತ್ ಹುಸೇನ್,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ,ಶಿವರಾಜ ಕಲಕೇರಿ,ಪ್ರದೀಪ ಕದರಾಪುರ,ಮಲ್ಲಿಕಾರ್ಜುರಡ್ಡಿ ಅಮ್ಮಾಪುರ,ಜಗದೀಶ ಪಾಟೀಲ್,ರವಿಕುಮಾರ ಹೆಮನೂರ,ಚಂದ್ರಶೇಖರ ಡೊಣೂರ,ಶಿವರುದ್ರ ಉಳ್ಳಿ,ಸಿದ್ದನಗೌಡ ಹೆಬ್ಬಾಳ,ಶೇಖು ಭೂಮಶೆಟ್ಟಿ,ಮಲ್ಲು ಬಾದ್ಯಾಪುರ,ಶರಣು ಬಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ರಂಗಂಪೇಟೆ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಬಳಿಯಲ್ಲಿ ಅನೇಕ ಜನ ಶ್ರೀ ಶಿವಕುಮಾರ ಸ್ವಾಮಿಜಿಯವರ ಭಕ್ತವೃಂದ ಅನ್ನದಾಸೋಹ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಸೂಗುರೇಶ ಸಜ್ಜನ್,ಆನಂದ ಕುಂಬಾರ,ಶರಣು ಸಜ್ಜನ್,ಬಸವರಾಜ ಯಾದವ್,ಲಿಂಗರಾಜ ಶಾಬಾದಿ,ಧರ್ಮಣ್ಣ ಮಡಿವಾಳ,ಮಲ್ಲಪ್ಪ ಯಾದವ್ ಸೇರಿದಂತೆ ಅನೇಕರಿದ್ದರು.ನೂರಾರು ಸಂಖ್ಯೆಯ ಜನರಿಗೆ ಅನ್ನದಾಸೋಹ ಮಾಡಲಾಯಿತು.
ನಡಕೂರ:ತಾಲೂಕಿನ ನಡಕೂರ ಗ್ರಾಮದಲ್ಲಿ ಸಿದ್ದಗಂಗಾದ ಶ್ರೀ ಶಿವಕುಮಾರಸ್ವಾಮೀಜಿಯವರ ೧೧೫ನೇ ಜನುಮ ದಿನಾಚರಣೆ ಅಂಗವಾಗಿ ಗ್ರಾಮದ ಶ್ರೀ ಸಿದ್ಧಾರೂಢರ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ನಂತರ ಸಿದ್ಧಗಂಗಾದ ಶಾಲೆಯಲ್ಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗ್ರಾಮದ ಜನರಿಗೆ ಅನ್ನದಾಸೋಹ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಯ್ಯ ಹಿರೇಮಠ,ಚಿದಾನಂದಗೌಡ,ಮುದಕಪ್ಪಗೌಡ,ಸಂಗಣ್ಣ ಮೂಕ್ಯಾಳ,ನಿಂಗಣ್ಣ ಸಾಹುಕಾರ,ಸಿದ್ದಣ್ಣ ಹತ್ತಿಗುಡೂರ,ಮಂಜುನಾಥಗೌಡ,ಮಲ್ಲು ಗುಂಡಳ್ಳಿ,ಸದಾನಂದ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಗರದ ತಿಮ್ಮಾಪುರ ಬಸ್ ನಿಲ್ದಾಣದ ಬಳಿ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೫ನೇ ಜಯಂತ್ಯೋತ್ಸವ ಅಂಗವಾಗಿ ಸಾರ್ವಜನಿಕರಿಗಾಗಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಮುಖಂಡರಾದ ಸಿದ್ರಾಮ ಎಲಿಗಾರ, ಎಲ್ಲಪ್ಪ ತೆಲಗೂರ,ವೀರಭಧ್ರಪ್ಪ ಕುಂಬಾರ, ಯಲ್ಲಪ್ಪ ಎಲಿಗಾರ, ಮಲ್ಲಪ್ಪ ವಗ್ಗಾ, ಮಲ್ಲು ವಿಶ್ವಕರ್ಮ ಇತರರು ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…