ಆಳಂದ: ತಾಲೂಕಿನ ಭೂಸನೂರ ಗ್ರಾಮದ ಹತ್ತಿರದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಬಗ್ಯಾಸ್‌ಗೆ ( ಕಬ್ಬಿನ ಸಿಪ್ಪೆಗೆ ) ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟವಾದ ಘಟನೆ ಸಂಭವಿಸಿದೆ.
ಸಕ್ಕರೆ ಕಾರ್ಖಾನೆಯ ಬಯಲು ಪ್ರದೇಶದಲ್ಲಿನ ನುರುಸಿದ ಸುಮಾರು ೬೦ ಸಾವಿರ ಟನ್ ದಷ್ಟು ಕಬ್ಬಿನ ಸಿಪ್ಪೆಗೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯಿಂದ ಸಿಪ್ಪೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ೨ ಹಿಟಾಚಿ , ೧ ಜೆಸಿಪಿ, ೨ ಲಾರಿಗಳ ಮೂಲಕ ಸಾಗಾಣಿಕ ಮಾಡಲು ಶುರು ಮಾಡಿದಾಗ ಹಿಟಾಚಿಯ ಬೆಂಕಿ ತಗುಲಿ ಕೆನ್ನಾಲೆಗೆ ಸಿಪ್ಪೆ ೨೫ ಸಾವಿರ ಟನ್ನ ಹಾಗೂ ೨ ಹಿಟಾಚಿ , ೧ ಜೆಸಿಪಿ, ೨ ಲಾರಿಗಳು ಸುಟ್ಟು ಕರಕಲಾಗಿದ್ದು ಬೆಂಕಿ ನಂದಿಸಲು ಕಾರಖಾನೆಯ ಕಾರ್ಮಿಕ ವರ್ಗ ಹಾಗೂ ಕಲಬುರಗಿ, ಅಫಜಲ್‌ಪೂರ, ಆಳಂದ ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ ಪಟ್ಟು ಬೆಂಕಿ ನಂದಿಸಿ ಮುಂದೆ ಆಗುವ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾದರು.
ಈ ವೇಳೆ ಬೆಂಕಿಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಸಿಪ್ಪೆಯ ಕೆನ್ನಾಲೆ ಬೆಂಕಿ ಹಾಗೂ ಹೊಗೆ ಬಾನೆತ್ತರ ಹೋಗಿರುವದು ಕಂಡು ಜನರು ಹೌಹಾರಿದರು. ಸ್ಥಳಕ್ಕೆ ಕಾರಖಾನೆಯ ಉಪಾಧ್ಯಕ್ಷ ದೇವರಾಜಲು, ಕಬ್ಬು ಅಭಿವೃದ್ದಿ ಅಧಿಕಾರಿ ಶಿವಾನಂದ ವಿ. ನಂದಗಾಂವ ಹಾಗೂ ಸಿಬ್ಬಂದಿ ವರ್ಗ ಹಾಜರಾಗಿ ಹಾನಿಯ ಕುರಿತು ಪರಿಶೀಲಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…