ಕಲಬುರಗಿ: ನಮ್ಮ ವ್ಯಕ್ತಿಯ ವ್ಯಕ್ತಿತ್ವಕ್ಕೆ ನಮ್ಮ ಅಂತರಂಗದ ಆಲೋಚನೆಗಳೆ ಮೂಲ ಅವುಗಳು ಸದಾ ಪರಿಶುದ್ಧವಾಗಿರುವಂತೆ ನಾವು ನೋಡಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ಅಂತರಂಗ ಶುದ್ಧಿಯಾಗಿ ಬಹಿರಂಗ ಸುದ್ದಿಯಾಗುತ್ತದೆ ಅದೆ ದಾರಿಯಲ್ಲಿ ಹಳ್ಳಿಯ ಹಿರಿಯ ಜನಪದ ಹಾಗೂ ಸಂಗೀತ ಕಲಾವಿದರು ನಡೆದು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ ಎಂದು ಕಲಬುರಗಿ ತಾಲ್ಲೂಕು ಉತ್ತರ ವಲಯದ ಕನ್ನಡ ಜಾನಪದ ಪರಿಷತ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.
ಇಲ್ಲಿನ ತಾಜ ಸುಲ್ತಾನಪುರ ಗ್ರಾಮದಲ್ಲಿ ಶ್ರೀ ನಾಗನಾಥ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ಉತ್ತರ ವಲಯ ಹಾಗೂ ದೇವಸ್ಥಾನದ ಕಮಿಟಿಯ ವತಿಯಿಂದ ಆಯೋಜಿಸಲಾದ ಹಿರಿಯ ಜನಪದ ಹಾಗೂ ಸಂಗೀತ ಕಲಾವಿದರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಹಳ್ಳಿಯಲ್ಲಿ ಹಲವಾರು ಜನ ಹಿರಿಯ ಜೀವಿಗಳು ತಮ್ಮ ಇಡಿ ಆಯುಷ್ಯವನ್ನೇ ಜನಪದ, ಸಂಗೀತ ಹಾಗೂ ಸಮಾಜಕ್ಕಾಗಿ ಅರ್ಪಣೆ ಮಾಡಿರುತ್ತಾರೆ ಆದರೆ ಯುವಕರು ಅವರಿಗೆ ಗೌರವಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡದಿರುವುದು ವಿಷಾದಕರ ಸಂಗತಿ. ಇಂತಹ ಮಹಾನ ವ್ಯಕ್ತಿಗಳು ನಮ್ಮ ಸಮಾಜದ ಆಸ್ತಿ ಹಾಗೂ ಸಂಪತ್ತು ಅವರನ್ನು ಮಕ್ಕಳಿಗೆ ಪರಿಚಯಿಸಿ ಅವರ ಕಲೆ ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಝಳಕಿ(ಬಿ) ಗ್ರಾಮದ ಹಿರಿಯ ಕಲಾವಿದರಾದ ಬಸವಂತರಾಯ ಬಿರಾದಾರ, ಭೋಗೇಶ ನಾವದಗಿ, ಶರಣಗೌಡ ಪಾಟೀಲ, ತಾಜ ಸುಲ್ತಾನಪುರದ ಗ್ರಾಮದ ಹಿರಿಯ ಕಲಾವಿದರಾದ ರೇವಣಸಿದ್ದಯ್ಯಸ್ವಾಮಿ ಬೇಲೂರ, ಪಾಂಡುರಂಗ ಸುತಾರ ಅವರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾಗನಾಥ ದೇವಸ್ಥಾನದ ಆರಾಧಕರಾದ ನಾಗಣ್ಣ ದಾನಪ್ಪಗೋಳ,ಯುವ ಮುಖಂಡರಾದ ಸೂರ್ಯಕಾಂತ ಚನ್ನಮಲ್ಲಶೆಟ್ಟಿ , ವಿನೋದಕುಮಾರ ಚಿಮದಿ, ನಾಗೇಂದ್ರಪ್ಪ ನಾಗೂರ, ಶಿವಕುಮಾರ ದಾನಪ್ಪಗೋಳ, ನಾಗರಾಜ ದಾನಪ್ಪಗೋಳ, ಶರಣಬಸಪ್ಪ ಕುದುರಿ,ಶರಣಬಸಪ್ಪ ಮಡಿವಾಳ,ತುಳಸೀದಾಸ ದಾನಪ್ಪಗೋಳ, ಶಶಿಕಾಂತ ಓಗಿ,ರೇವಪ್ಪ ಭಾಗೋಡಿ, ರಾಜು ಅಜಾತಪುರ, ನಾಗಣ್ಣ ನೀಲೂರ,ಝಳಕಿ(ಬಿ) ಗ್ರಾಮದ ಕಲಾವಿದರಾದ ವಿಜಯಕುಮಾರ ಪೂಜಾರಿ, ಗುಂಡೇರಾಯ ನಾವದಗಿ, ಶಿವಪುತ್ರ ಕಂಬಾರ, ಭೋಗೇಶ ಜೇವರ್ಗಿ, ಮಹಾರುದ್ರ ಮಡಿವಾಳ, ಲಕ್ಷ್ಮಣ ಬೆಳಮಗಿ, ದೇವೇಂದ್ರ ಪೂಜಾರಿ, ಬಸವಣ್ಣ ಮಡಿವಾಳ, ಶಂಕರ ಪೂಜಾರಿ, ಚಂದಣ್ಣ ಚಿತಲಿ, ಶಿವಾನಂದ ಹಡಪದ, ಶ್ರೀಶೈಲ ಕೋರ್ಬಾ, ಗುರು ಚಿತಲಿ, ಸೇರಿದಂತೆ ಹಲವಾರು ಜನ ಭಾಗವಹಿಸಿದರು.
ಶನಿವಾರ ಶ್ರೀ ನಾಗನಾಥ ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ಯ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಲವಾರು ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ 7ಗಂಟೆಗೆ ಭವ್ಯ ರಥೋತ್ಸವ ಜರುಗಿತು. ವಿವಿಧ ಗ್ರಾಮದಿಂದ ಆಗಮಿಸಿದ ಕಲಾವಿದರಿಂದ ಅಹೋರಾತ್ರಿ ಸಂಗೀತ ಸೇವೆ ಜರುಗಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…