ಕಾವಿಗೆ ಬೆಲೆ, ಪೀಠಕ್ಕೆ ಗೌರವ ಕೊಟ್ಟವರು ಶಿವಕುಮಾರ ಸ್ವಾಮೀಜಿ

ಶಹಾಬಾದ: ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮಹಾನ್ ಚೇತನ ಶಕ್ತಿಯಾಗಿದ್ದರು ಎಂದು ಸಾಹಿತಿ ಮತ್ತು ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಹೇಳಿದರು.

ಅವರು ಕಲಬುರಗಿ ಸಮೀಪದ ನೃಪತುಂಗ ಕಾಲೋನಿಯಲ್ಲಿ ತುಮಕೂರಿನ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವು ಮುಖ್ಯವಲ್ಲ.ಅವರು ಮಾಡಿದ ಸತ್ಕರ್ಮಗಳೇ ಶಾಶ್ವತವಾಗಿ ನಾಡಿನಲ್ಲೆಡೆ ನೆಲೆಯೂರುತ್ತವೆ ಎಂಬುದಕ್ಕೆ ತುಮಕೂರಿನ ಡಾ.ಶಿವಕುಮಾರ ಸ್ವಾಮೀಜಿಯವರೇ ಸಾಕ್ಷಿ.ಎಪ್ರಿಲ್ ಒಂದರಂದು ಮೂರ್ಖರ ದಿನ ಎಂದು ಆಚರಿಸುತ್ತೆವೆ.ಆದರೆ ಅದೇ ದಿನದಂದು ಹುಟ್ಟಿದ ಶ್ರೀಗಳು ತಮ್ಮ ಸತ್ಯ ಶುದ್ಧಕಾರ್ಯ ಪ್ರಜ್ಞೆ ಹಾಗೂ ನಿಷ್ಕಾಮ ಭಾವದಿಂದ ಮೂರ್ಖರ ದಿನವನ್ನು ಸತತ ಪರಿಶ್ರಮ, ಅಧ್ಯ್ಯಯನ ಮಾಡಿದರೇ ಮೂರ್ಖ ದಿನದ ಬದಲಾಗಿ ಜ್ಞಾನಿಗಳ ದಿನವನ್ನಾಗಿ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.ಯಾರಲ್ಲಿ ಬಸವಣ್ಣನವರ ತತ್ವ ಅನುಷ್ಠಾನಗೊಂಡಿರುತ್ತದೆಯೋ, ಅವರಲ್ಲಿ ಮೂಡನಂಭಿಕೆ, ಅಂಧಶ್ರದ್ದೆಗಳು ಎಂದಿಗೂ ಮನೆ ಮಾಡುವುದಿಲ್ಲ ಎಂಬುದಕ್ಕೆ ಶ್ರೀಗಳೇ ಉದಾಹರಣೆ ಎಂದರು.

ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಮಾತನಾಡಿ, ಇಂದಿಗೂ ಜನರಲ್ಲಿ ಏನಾದರೂ ಕಾವಿಗೆ ಬೆಲೆ ಮತ್ತು ಖದರ್ ಇದಿದ್ದೆಯಾದರೆ ಅದು ಶಿವಕುಮಾರ ಸ್ವಾಮೀಜಿಯಂತವರಿಂದ.ಅವರು ಯಾವುದೇ ಜಾತಿ-ಭೇಧವಿಲ್ಲದೇ ಹನ್ನೆರಡನೇಯ ಶತಮಾನದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಾದಿ ಶರಣರ ವಿಚಾಧಾರೆ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ಮಹಾಶಿವಯೋಗಿಗಳು ಎಂಬ ಖ್ಯಾತಿಗೆ ಪಾತ್ರರಾದವರು ಎಂದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ಪ್ರೀತಿಯ ಅಭಿಮಾನ ಪಡೆದಿದ್ದಾರೆ ಎಂದರು. ಅವರಿಗೆ ನಮ್ಮ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ನಿಕಟ ಪೂರ್ವ ಅಧ್ಯಕ್ಷ ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ಪ್ರಮಥ್ ಸತ್ಯಂಪೇಟೆ, ಪ್ರಣವ್ ಸತ್ಯಂಪೇಟೆ, ಬಸವರಾಜ ಮದ್ರಿಕಿ, ಬೆಳ್ಳಪ್ಪ ಕಣದಾಳ, ರಮೇಶ ಜೋಗದನಕರ್,ಶ್ರೀರಾಮ ಚವ್ಹಾಣ,ಶಾಂತಪ್ಪ ಹಡಪದ ಸೇರಿದಂತೆ ಅನೇಕರು ಇದ್ದರು.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

9 hours ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

9 hours ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

9 hours ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

9 hours ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

10 hours ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

10 hours ago