ಗುರು-ಶಿಷ್ಯರ ಮಹಿಮೆಯಲ್ಲಿ ಮಿಂದೆದ್ದ ಭಕ್ತರು-ಶ್ರೀ ಗಂಗಲಿಂಗೇಶ್ವರ, ಬೀರಲಿಂಗೇಶ್ವರ ಜಾತ್ರಾ ಸಮಾರೋಪ

ಆಳಂದ : ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಶ್ರೀ ಗಂಗಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಅತೀ ವಿಜೃಂಭಣೆಯಿಂದ ಜರುಗಿ ರವಿವಾರ ಸಂಪನ್ನಗೊಂಡಿತು.

ಜಾತ್ರಾ ದಿನದ ಕೊನೆಯ ದಿನವಾದ ರವಿವಾರ ವಿವಿಧ ಕಾರ್ಯಕ್ರಮಗಳಿಂದ ದೇವಸ್ಥಾನದ ಆವರಣವು ಭಕ್ತ ಗಣ ಮಧ್ಯೆ ಜಗಮಗಿಸಿದ್ದು ಕಂಡು ಬಂತು. ರಾತ್ರಿಯೆಲ್ಲ ಇಂಡಿ ತಾಲೂಕಿನ ಝಳಕಿ ಗ್ರಾಮದ ಬೀರಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ ’ಹಠವಾದಿ ಬೀರಪ್ಪ , ಮಹಾಜ್ಞಾನಿ ಮಾಳಪ’ (ಗುರು-ಶಿಷ್ಯರ ಮಹಿಮೆ) ಎಂಬ ಪೌರಾಣಿಕ ನಾಟಕ ಪ್ರದರ್ಶನವಾಯಿತು.ನಾಟಕವನ್ನು ನೂರಾರು ಭಕ್ತರು ವೀಕ್ಷಿಸಿ, ಗುರು-ಶಿಷ್ಯರ ನಡುವಿನ ಪ್ರಸಂಗದ ದೃಶ್ಯಗಳು ಕಂಡು ಭಾವುಕರಾದರು.

ಇದಕ್ಕೂ ಮುನ್ನ ಜಮಖಂಡಿಯ ಮಲ್ಲಿಕಾರ್ಜುನ ಶಾಸ್ತ್ರಿಗಳ ನೇತೃತ್ವದಲ್ಲಿ ಮಾ. ೨೧ ರಿಂದ ಪ್ರಾರಂಭವಾಗಿದ್ದ ಹಾಲುಮತದ ಮಹಾಪುರಾಣವು ೧೧ ನೇ ದಿನಕ್ಕೆ ಮುಕ್ತಾಯವಾಯಿತು. ಗಂಗಲಿಂಗೇಶ್ವರ ದೇವಸ್ಥಾನದಿಂದ ದೇವಲಗಾಣಗಾಪುರದ ಸಂಗಮನಾಥ
ಸನ್ನಿಧಿಗೆ ಪಲ್ಲಕ್ಕಿ ಉತ್ಸವ ತಲುಪಿ ವಾಸ್ತವ್ಯ ಮಾಡಿದ ನಂತರ ಗ್ರಾಮಕ್ಕೆ ಮರಳಿದ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ನಂತರ ದೇವಸ್ಥಾನಕ್ಕೆ ತಲುಪಿತು.

ನಿರಂತರ ಹದಿನೈದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವವು ಕೊನೆಯ ದಿನದ ನಾಟಕ ಪ್ರದರ್ಶನಕ್ಕಿಂತ ಮುಂಚೆ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನವರಂತೆ ಏರುಧ್ವನಿಯಲ್ಲಿ ಚಂದಪ್ಪ ಸಿದ್ಧಪ್ಪ ಅರಳಿಕಟ್ಟೆ ಎಂಬ ಕಲಾವಿದರು ತಮ್ಮ ಏಕಾಭಿನಯ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.ಅಲ್ಲದೇ, ಜಾತ್ರಾ ಮಹೋತ್ಸವ ನಿಮಿತ್ಯ ಪ್ರಸಿದ್ಧ ಗಾಯಕರಿಂದ ಶ್ರೀ ಗಂಗಲಿಂಗೇಶ್ವರ ಹಾಗೂ ಬೀರಲಿಂಗೇಶ್ವರ ದೇವಸ್ಥಾನದಆವರಣದಲ್ಲಿ ಡೊಳ್ಳಿನ ಪದಗಳು ಹಾಗೂ ವಿವಿಧ ಕಲಾವಿದರಿಂದ ಡೊಳ್ಳು ಕುಣಿತ ಜರುಗಿದವು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಚಿದಾನಂದ ತೇಲಿ, ಉತ್ಸವ ಸಮಿತಿಯ ಬಸವರಾಜ ಪೂಜಾರಿ, ಶರಣಬಸಪ್ಪ ಧಬಾಡೆ, ಬೀರಣ್ಣ ಪಟ್ಟಣ, ಗ್ರಾ.ಪಂ ಸದಸ್ಯ ಶಿವಲಿಂಗಪ್ಪ ಪೂಜಾರಿ, ಎಸ್. ಎಸ್ ಪಾಟೀಲ್, ಮಂಜುನಾಥ ಅಕ್ಕಲಕೋಟ, ಮುಖಂಡ ತಿಪ್ಪಯ್ಯ ಗುತ್ತೇದಾರ, ಮಲ್ಲಪ್ಪ ಹೊನಗುಂಟಿ, ಮಾಳಪ್ಪ ಪೂಜಾರಿ, ಸದಾಶಿವ ಜವಳಿ, ಶಾಂತಮಲ್ಲ ಪೂಜಾರಿ, ಕಲ್ಲಪ್ಪ ಹೊನಗುಂಡಿ, ಸಿದ್ದಪ್ಪ ಜವಳಿ, ಮಲ್ಲಪ್ಪ ಜವಳಿ, ಶರಣು ಮಾಂಗ್ ಸೇರಿದಂತೆ ಭಕ್ತಾದಿಗಳು ಈ ವೇಳೆ ಪಾಲ್ಗೊಂಡಿದ್ದರು.

emedialine

Recent Posts

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

35 mins ago

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

2 hours ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

16 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

16 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

16 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420