ಮಲಿಕಜಾನ್ ಶೇಖ ಅವರ ‘ಚಿಲಿಪಿಲಿ’ ಮಕ್ಕಳ ಕವನ ಸಂಕಲನ ಬಿಡುಗಡೆ

ಸೊಲ್ಲಾಪುರ : ಕನ್ನಡ ನಮ್ಮ ಮಾತೃ ಭಾಷೆ, ನಮ್ಮ ತಾಯಿ ಭಾಷೆಯ ಬೆಳವಣಿಗೆಗೆ ಸ್ವಾರ್ಥ ಬಿಟ್ಟು ನಾವೇಲ್ಲರೂ ಕನ್ನಡಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಕೇಂದ್ರಿಯ ವಿವಿಯದ ಡಾ.ಬಿ.ಬಿ.ಪೂಜಾರಿ ಹೇಳಿದರು.

ಜತ್ತ ತಾಲೂಕಿನ ಯುವಲೇಖಕ ಮಲಿಕಜಾನ್ ಶೇಖ ಅವರ ಪ್ರಥಮ ಕೃತಿ ‘ಚಿಲಿಪಿಲಿ’ ಮಕ್ಕಳ ಕವನ ಸಂಕಲನವನ್ನು ಇತ್ತಿಚೆಗೆ ಅಕ್ಕಲಕೋಟದಲ್ಲಿ ನಡೆದ ೨ನೇ ಮಹಾರಾಷ್ಟç ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಬಿ.ಬಿ.ಪೂಜಾರಿ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯುವಲೇಖಕ ಮಲಿಕಜಾನ್ ಶೇಖ ಅವರು ಆದರ್ಶ ಕನ್ನಡ ಬಳಗ ಮೂಲಕ ಮಹಾರಾಷ್ಟçದಲ್ಲಿ ಕನ್ನಡ ಕಂಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಯುವಲೇಖಕರು ಒಬ್ಬ ಉತ್ತಮ ಸಾಹಿತಿಗಳಾಗಿ ರೂಪುಗೊಳ್ಳಲಿದ್ದಾರೆ. ಮುಂದೆ ಇವರು ಒಬ್ಬ ಶ್ರೇಷ್ಠ ಸಾಹಿತಿಯಾಗಿ ಗುರುತಿಸಿಕೋಳ್ಳಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಸಚಿನ ಕಲ್ಯಾಣಶೆಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಡಾ.ಮಧುಮಾಲ ಲಿಗಾಡೆ, ಜತ್ತ ತಾಲೂಕಿನ ಕನ್ನಡ ಹೋರಾಟಗಾರ ಡಾ.ಆರ್.ಕೆ.ಪಾಟೀಲ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಲೇಖಕ ಮಲಿಕಜಾನ ಶೇಖ, ಪೂಜ್ಯ ಬಸವಲಿಂಗ ಶ್ರೀಗಳು, ಪೂಜ್ಯ ಅಭಿನವ ಡಾ.ಬಸವಲಿಂಗ ಶ್ರೀಗಳು, ಪೂಜ್ಯ ಶ್ರೀಕಂಠ ಶ್ರೀಗಳು, ಪೂಜ್ಯ ಅಭಿನವ ಶಿವಲಿಂಗ ಶ್ರೀಗಳು, ಪೂಜ್ಯ ಡಾ.ಶಾಂತಲಿಂಗ ಶ್ರೀಗಳು, ಪೂಜ್ಯ ಪಾಂಡುರಂಗ ಶ್ರೀಗಳು, ವೇ.ಬಸವರಾಜ ಶಾಸ್ತ್ರೀ,  ಮಹೇಶ ಹಿಂಡೋಳೆ, ಆನಂದ ತಾನವಡೆ, ರಾಜಶೇಖರ ಉಮರಾಣಿಕರ, ದಯಾನಂದ ಬಿಡವೆ, ರಾಜಶೇಖರ ಮಸೂತಿ, ಬಿಇಒ ಖೂದುಸಿಯಾ ಶೇಖ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.

ಮಲಿಕಜಾನ್ ಶೇಖ ಅವರು ಬರೆದ ‘ಚಿಲಿಪಿಲಿ’ ಕವನ ಸಂಕಲನ ಸೊಗಸಾಗಿ ಮೂಡಿ ಬಂದಿದೆ. ಒಂದೊಂದು ಕವನವು ಮಕ್ಕಳ ಬದುಕು, ಸಾಹಿತ್ಯ, ಹಾಸ್ಯ, ಪ್ರಸ್ತುತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವಂತಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ.   –ಡಾ. ಮಧುಮಾಲ ಲಿಗಾಡೆ, ಹಿರಿಯ ಸಾಹಿತಿ, ಸೊಲ್ಲಾಪುರ.

ನಾವಿಂದು ಏನಾಗಿದ್ದೇವೋ ಅದಕ್ಕೆ ಮೂಲಕ ಕಾರಣ ನಮ್ಮ ಮಾತೃ ಭಾಷೆ. ಕನ್ನಡ ಭಾಷೆಯ ಬಗ್ಗೆ ನಮಗೆಲ್ಲ ಅಪಾರ ಅಭಿಮಾನ, ಸ್ವಾಭಿಮಾನವಿರಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾದ್ಯವಾಗಲಿದೆ. ಮಲಿಕಜಾನ್ ಶೇಖ ಅವರು ಬರೆದ ‘ಚಿಲಿಪಿಲಿ’ ಕವನ ಸಂಕಲನ ಮಕ್ಕಳಿಗೆ ಅನುಕೂಲವಾಗಲಿದೆ. – ಸೋಮಶೇಖರ ಜಮಶೆಟ್ಟಿ, ಅಧ್ಯಕ್ಷರು, ಕಸಾಪ ಮಹಾರಾಷ್ಟ್ರ ಘಟಕ.

 

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago