ಭಾರತದಲ್ಲಿನ ವಹಿವಾಟು ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ ತನ್ನ ಗ್ರಾಹಕ ಮಾರುಕಟ್ಟೆ ಹಿಗ್ಗಿಸಿದ ಪಿಯರ್ಸನ್

ಬೆಂಗಳೂರು: ವಿಶ್ವದ ಪ್ರಮುಖ ಕಲಿಕಾ ಕಂಪನಿಯಾಗಿರುವ ಪಿಯರ್ಸನ್, ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳನ್ನು ತ್ವರಿತವಾಗಿ ಪರಿಚಯಿಸುವ ಮೂಲಕ ಮತ್ತು ಅರ್ಥಪೂರ್ಣ ಪಾಲುದಾರಿಕೆಗಳ ಮೂಲಕ 21ನೇ ಶತಮಾನದ ಕಲಿಕಾರ್ಥಿಗಳ ಜೊತೆ ಉತ್ತಮ ಸಂಪರ್ಕ ಸಾಧಿಸಲು ಹಲವಾರು ದಾಪುಗಾಲುಗಳನ್ನು ಹಾಕುತ್ತಿದೆ.

ಕಂಪನಿಯ ಪ್ರಮುಖ ಮಾರುಕಟ್ಟೆಯಾಗಿರುವ ಭಾರತವು, ಕಳೆದ ಕೆಲವು ತಿಂಗಳುಗಳಲ್ಲಿ ಪಿಯರ್ಸನ್ ಡಿಜಿಟಲ್ ಲೈಬ್ರರಿಯಂತಹ ಹೊಸ ಉತ್ಪನ್ನಗಳನ್ನು ಪರಿಚಯಿಸಿರುವುದಕ್ಕೆ ಸಾಕ್ಷಿಯಾಗಿದೆ. ಕಂಪನಿಯ ಬೆಳವಣಿಗೆಯ ವೇಗ ತ್ವರಿತಗೊಳಿಸಲು ಪಿಯರ್ಸನ್ ತನ್ನ ಗ್ರಾಹಕ ಮಾರುಕಟ್ಟೆ ಪ್ರಯತ್ನಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಗ್ರಾಹಕರ ಜೊತೆ ನಿಕಟ ಸಂಪರ್ಕ ಸಾಧಿಸುವ ಮತ್ತು ಬ್ರ್ಯಾಂಡ್‌ನ ಜನಪ್ರಿಯತೆ ಹೆಚ್ಚಿಸುವ ಮೂಲಕ ಶಿಕ್ಷಣ ಕ್ಷೇತ್ರದ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸಲು ಮುಂದಾಗಿದೆ.

ಪಿಯರ್ಸನ್ ಇಂಡಿಯಾ, ಸಿದ್ಧತೆಯ ಮುಖ್ಯ ಧ್ಯೇಯವಾಗಿರುವ ತನ್ನ ಮೊದಲ ಮತ್ತು ಸಂಪೂರ್ಣವಾಗಿ ಹೊಸದಾದ ಡಿಜಿಟಲ್ ಬ್ರ್ಯಾಂಡ್ ಫಿಲ್ಮ್ ‌ಅನಾವರಣಗೊಳಿಸಿದೆ. ಯುವ ಜನರ ಅಚ್ಚುಮೆಚ್ಚಿನ ಜನಪ್ರಿಯ ನಟ ವಿಕ್ಕಿ ಕೌಶಲ್ ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡು ದೇಶದಾದ್ಯಂತ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಲು ಮುಂದಾಗಿದೆ. ಕಂಪನಿಯು ಇತರ ಪ್ರಭಾವಿ ವ್ಯಕ್ತಿಗಳ ಜೊತೆಗೂ ಕೆಲಸ ಮಾಡುತ್ತಿದೆ.

ಜೊತೆಗೆ ವಿಷಯಾಧಾರಿತ ಕಥೆ ಹೇಳುವ ವಿಧಾನವನ್ನು ಅಳವಡಿಸಿಕೊಳ್ಳಲು ಮತ್ತು ಕಲಿಕಾರ್ಥಿಗಳ ಜೊತೆಗೆ ನಿಕಟ ಬಾಂಧವ್ಯ ವೃದ್ಧಿಸಲು ಕಾರ್ಯಪ್ರವೃತ್ತವಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದ ಖ್ಯಾತನಾಮರು, ಜನಪ್ರಿಯ ಕ್ರೀಡಾಪಟುಗಳು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರಮುಖರನ್ನು ಒಳಗೊಂಡಿರುವ ಪಿಯರ್ಸನ್‌ ಬ್ರ್ಯಾಂಡ್‌ಗೆ ಸಂಬಂಧಿಸಿದ ಚಲನಚಿತ್ರಗಳ ಮೂಲಕ, ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಲು, ಉತ್ತಮ ಸಿದ್ಧತೆಯು ಮುಖ್ಯವಾಗಿರುತ್ತದೆ ಎನ್ನುವ ಸಂದೇಶ ಪ್ರಸಾರ ಮಾಡಲು ಕಂಪನಿಯು ಉದ್ದೇಶಿಸಿದೆ.

ಪಿಯರ್‌ಸನ್‌ದ ಭಾರತ ಮತ್ತು ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಬ್ಯಾನರ್ಜಿ ಅವರು ಮಾತನಾಡಿ, ‘ಡಿಜಿಟಲ್ ಮೊದಲು, ಗ್ರಾಹಕರಿಗೆ ನೇರವಾಗಿ ತಲುಪುವ ಬ್ರ್ಯಾಂಡ್ ಮತ್ತು ಭಾರತದಲ್ಲಿ ಸಮಗ್ರ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ದೂರದೃಷ್ಟಿ ಹೊಂದಿರುವ ಪಿಯರ್ಸನ್‌, ಸದ್ಯಕ್ಕೆ ವಹಿವಾಟು ಪರಿವರ್ತನೆಯ ಮಹತ್ವದ ಘಟ್ಟದಲ್ಲಿ ಇದೆ. ಗ್ರಾಹಕ-ಕೇಂದ್ರಿತ ಕಂಪನಿಯಾಗಿ ನಮ್ಮ ಗಮನವನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ನಮ್ಮ ಬೆಳವಣಿಗೆಯ ಕಾರ್ಯತಂತ್ರವನ್ನು ನಾವು ಬದಲಿಸಿದ್ದೇವೆ.

ನಮ್ಮ ಗ್ರಾಹಕರ ಜೊತೆ ಹೆಚ್ಚು ಅರ್ಥಪೂರ್ಣ ಮತ್ತು ವೈಯಕ್ತಿಕ ಬ್ರ್ಯಾಂಡ್ ಸಂಬಂಧ ಹೊಂದುವುದು ನಮ್ಮ ಉದ್ದೇಶವಾಗಿದೆ. ನಾವು ಕೈಗೊಳ್ಳುವ ಪ್ರತಿಯೊಂದು ಕೆಲಸ – ಕಾರ್ಯಗಳಲ್ಲಿ ಗ್ರಾಹಕರ ಹಿತಾಸಕ್ತಿ ರಕ್ಷಿಸುವುದನ್ನು ಖಚಿತಪಡಿಸಿಕೊಂಡೇ ನಾವು ಕೆಲಸ ಮಾಡುತ್ತಿದ್ದೇವೆ. ಕಲಿಕಾರ್ಥಿಗಳು ಉನ್ನತ ವ್ಯಾಸಂಗ ಕೈಗೊಳ್ಳಲು ಅಥವಾ ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನದ ಗುರಿ ಸಾಧಿಸಲು, ವೃತ್ತಿ ಬದುಕಿನಲ್ಲಿ ವೇಗವಾಗಿ ಮುನ್ನಡೆ ಸಾಧಿಸಲು ಭಾರತದಲ್ಲಿನ ಸದ್ಯದ ಕಲಿಕಾರ್ಥಿಗಳು ‌ವಿಶ್ವ ದರ್ಜೆಯ ಕಲಿಕೆಯ ಅನುಭವ ಬಯಸುತ್ತಾರೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ.

ಇದೇ ಕಾರಣಕ್ಕೆ ನಮ್ಮ ಸಮೃದ್ಧ, ವಿಶ್ವಾಸಾರ್ಹ ಮತ್ತು ವೈಯಕ್ತಿಕ ಅಗತ್ಯಗಳಿಗೆ ವಿಶೇಷ ಗಮನ ನೀಡುವ ವಿಷಯಗಳ ಮೂಲಕ ನಾವು ಅವರ ಕನಸುಗಳಿಗೆ ನೀರೆರೆಯುತ್ತಿದ್ದೇವೆ. ಅವರ ಬದುಕಿನ ಉದ್ದಕ್ಕೂ ಪ್ರತಿಯೊಂದು ಕಲಿಕೆಯ ಹಂತದಲ್ಲಿ ಉತ್ತಮ ಸಿದ್ಧತೆ (#PಡಿeಠಿಚಿಡಿeWeಟಟ) ಒದಗಿಸುವ ಮೂಲಕ ನೆರವಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಕ್ರಿಯೇಟಿವ್ ಏಜೆನ್ಸಿ– ಬ್ಯಾಂಗ್ ಇನ್ ದಿ ಮಿಡಲ್ (ಃIಖಿಒ) ರೂಪಿಸಿರುವ ಬ್ರ್ಯಾಂಡ್ ಫಿಲ್ಮ್ – ಡಿಜಿಟಲ್ ಕಲಿಕೆಯ ಪರಿಹಾರಗಳು ಮತ್ತು ವಿಷಯಗಳ ಕಲಿಕೆಯ ತಯಾರಿಯ ಪ್ರಕ್ರಿಯೆಯನ್ನು ಹೇಗೆ ಅನುಕೂಲಕರವಾಗಿ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ ಎಂಬುದರ ಕುರಿತು ಮಾಹಿತಿ ನೀಡುತ್ತದೆ. ಈ ಪ್ರಕ್ರಿಯೆಯ ಉದ್ದಕ್ಕೂ, ಕಲಿಕಾರ್ಥಿಗಳಿಗೆ ಪಿಯರ್ಸನ್‌ನಂತಹ ಪಾಲುದಾರರ ಮಹತ್ವವನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಕೊಡುತ್ತದೆ. ‌

ಈ ಪ್ರಚಾರ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಗ್‌ ಇನ್‌ ದಿ ಮಿಡಲ್‌ನ ಸಹ ಸ್ಥಾಪಕ ಮತ್ತು ಮುಖ್ಯ ಸೃಜನಶೀಲ ಅಧಿಕಾರಿ ಪ್ರತಾಪ್‌ ಸುಥನ್‌ ಅವರು, ‘ಈ ಪ್ರಚಾರ ಅಭಿಯಾನಕ್ಕೆ ಸಂಬಂಧಿಸಿದಂತೆ ಪಿಯರ್ಸನ್‌ ಜೊತೆ ಕೆಲಸ ಮಾಡಿರುವುದು ನಮಗೆ ಅದ್ಭುತ ಅನುಭವ ನೀಡಿದೆ. ಈ ಉತ್ತೇಜಕರ ಬ್ರ್ಯಾಂಡ್‌ ಫಿಲ್ಮ್‌, ಸದ್ಯಕ್ಕೆ ದೇಶಿ ಶಿಕ್ಷಣ ಕ್ಷೇತ್ರದಲ್ಲಿನ ಜಾಹೀರಾತುಗಳ ಅತಿಶಯೋಕ್ತಿಯನ್ನು ತಗ್ಗಿಸಲಿದೆ.

ವಿಕಿ ಕೌಶಲ್ ಅವರ ಉಪಸ್ಥಿತಿಯ ಹೊರತಾಗಿಯೂ ಇದೊಂದು ನಂಬಲರ್ಹವಾದ ಮತ್ತು ಪ್ರಾಮಾಣಿಕ ಪ್ರಯತ್ನವಾಗಿದೆ. ಯಾವುದೇ ಪರೀಕ್ಷೆಗಳಿಗೆ ಸಂಬಂಧಿಸಿದ ಪೂರ್ವಭಾವಿ ಸಿದ್ಧತೆ ಮತ್ತು ಅಧ್ಯಯನ ಪ್ರಕ್ರಿಯೆಯು ಮಂಕಾಗಿರುವುದರ ಜೊತೆಗೆ ತೀರ ವೈಯಕ್ತಿಕ ಅನುಭವವೂ ಆಗಿರುತ್ತದೆ. ನಟನೊಬ್ಬ ನಿರ್ದಿಷ್ಟ ಪಾತ್ರ ನಿರ್ವಹಿಸಲು ಅಥವಾ ನಿರ್ದಿಷ್ಟ ಪಾತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಮಾನಸಿಕವಾಗಿ ಸಿದ್ಧವಾಗುವುದು ಹಾಗೂ ತರಬೇತಿ ಪಡೆಯುವುದು ತುಂಬ ಮಹತ್ವದ್ದಾಗಿರುತ್ತದೆ.

ಅದೇ ರೀತಿಯಲ್ಲಿ, ಜಾಗತಿಕವಾಗಿ ಮಾನ್ಯತೆ ಪಡೆದಿರುವ ಹಾಗೂ ಸಾಬೀತಾಗಿರುವ ಪಿಯರ್ಸನ್‌ ಅನುಭವದ ಪರಂಪರೆಯನ್ನು ಪರಿಚಯಿಸಲು ನಾವು ಇಲ್ಲಿ ಶ್ರಮಿಸಿದ್ದೇವೆ. ಭಾರತದ ವಿದ್ಯಾರ್ಥಿಗಳ ಸುದೀರ್ಘ ಸಂಕೀರ್ಣ ಹಾಗೂ ಗೊಂದಲಮಯ ಸಿದ್ಧತೆಗೆ ಪಿಯರ್ಸನ್‌ ಪರಿಣತಿ ಉತ್ತಮ ಪರಿಹಾರವಾಗಿದೆ. ಜೊತೆಗೆ ಭಾರಿ ಸದ್ದುಮಾಡುವ ಹೆಚ್ಚು ಪ್ರಯೋಜನಕಾರಿಯಲ್ಲದ ಜಾಹೀರಾತುಗಳ ಅಬ್ಬರದಿಂದ ವಿದ್ಯಾರ್ಥಿಗಳ ಗಮನವನ್ನು ಪೂರ್ವ ಸಿದ್ಧತೆಗಳತ್ತ ಸೆಳೆಯಲಿದೆ’ ಎಂದು ಹೇಳಿದ್ದಾರೆ.

ಮೊದಲ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಿದೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ‌ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಇಲ್ಲಿ ವೀಕ್ಷಿಸಿ:
ಹೆಚ್ಚಿನ ಮಾಹಿತಿಗೆ:in.pearson.com

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago