ಸುರಪುರ: ಅಗ್ನಿ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ನಗರದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಜನರ ಏಳಿಗೆಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಪ್ರಯತ್ನಸಿದ್ದೇನೆ. ಹಾಗೂ ರೈತರ ಜಮೀನುಗಳಿಗೆ ಕಾಲುವೆ ಮುಖಾಂತರ ಹಿಂಗಾರು ಮತ್ತು ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯೋಜೆನಯನ್ನು ಹಾಕಿಕೊಂಡು ರೈತರಪರವಾಗಿ ನಿರ್ಣಯಗಳನ್ನು ಕೈಗೊಂಡಿದ್ದೇನೆ.
ಈಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರದಲ್ಲಿ ಜನರು ನೆಮ್ಮದಿಯಿಂದ ಜೀವನಸಾಗಿಸಲಾಗುತ್ತಿಲ್ಲಾ, ದಿನೆ ದಿನೆ ಗ್ಯಾಸ್ ಸಿಲೆಂಡರ್, ಅಡುಗೆ ಎಣ್ಣೆ, ಪೇಟ್ರೊಲ್ ಮತ್ತು ಡೀಸೆಲ್ ಬೆಲೆ ಎರಿಕೆಯಾಗಿ ಜನರು ಇವರ ಆರ್ಥೀಕ ನೀತಿಗೆ ತತ್ತರಿಸುತ್ತಿದ್ದಾರೆ. ಇನ್ನು ಕೆಂಧ್ರ ಸರ್ಕಾರವೆ ರೈತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದರು ಇನ್ನು ರಾಜ್ಯ ಸರ್ಕಾರ ಹಿಂಪಡೆಯದೆ ರೈತರ ಬಗ್ಗೆ ನಿಷ್ಕಾಳಜಿತನ ತೋರಿಸುತ್ತಿದ್ದಾರೆ ಇವರಿಂದ ಜನರ ಹಿತಕಾಯುವುದು ಸಾಧ್ಯವಿಲ್ಲ ಎಂದು ಅವರ ನಡೆಯಿಂದ ಜನರು ಅರೆತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಇದನ್ನು ಸದೋಪಯೋಗ ಪಡೆದುಕೊಂಡು ನಮ್ಮ ಕಾರ್ಯಕರ್ತರು ಪಕ್ಷ ಬಲವರ್ಧನೆಗೆ ಮುಂದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಗಳನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.
ನಂತರ ರವಿಕುಮಾರ ಪರಮಣ್ಣ, ಸೊಲಬಣ್ಣ ಮಾನಪ್ಪ, ಚಂದಶಾ ಕಲ್ಲಾಶ, ಉಮೇಶ ಶಾಂತಪ್ಪ, ರಾಜು ಮೌಲಾಸಾಬ, ಗುತ್ತಣ್ಣ ಭೀಮನಗೌಡ, ಭಾಗಣ್ಣ ಅಣ್ಣಪ್ಪಗೌಡ, ಪ್ರಸಾದ ಸಿದ್ದಲಿಂಗಯ್ಯ, ಮಲ್ಲಿಕಾರ್ಜುನ ಚಂದಪ್ಪ, ಸಿದ್ದು ಶಿವನಂದ, ಬನ್ನಪ್ಪ ನಾಗಣ್ಣ, ಸಂತೋಷ ಶಿವಣ್ಣ, ಶಿವಕುಮಾರ ಮಾಲಿಪಾಟೀಲ, ದೇವಣ್ಣ ಜಗಲಿ, ರಾಜು ಬಾಗೋಡಿ, ಸೇರಿದಂತೆ ಇನ್ನಿತರರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ವಿ ಯಾದವ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುದೋಳ, ರಾಜಾ ಸಂತೋಷ ನಾಯಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಭೀಮರಾಯ ಮೂಲಿಮನಿ, ಗೋಪಾಲ ದೊರಿ, ರವಿ ಸಾಹು ಹುದ್ದಾರ, ಮುದ್ದಣ್ಣ ಸಾಹು, ಹಣಮಂತ್ರಾಯ ಶುಕ್ಲಾ, ಚಂದ್ರು ಹೆಬ್ಬಳಾ ಕೆ, ಶರಣು ಶಾಂತಪೂರ, ಪ್ರವೀಣ ನಾಯಕ ,ಇನ್ನಿತರರು ಉಪಸ್ಥಿತರಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…