ಕಲಬುರಗಿ: ಭಾರತೀಯ ಜನತಾ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ, ಕೋಮುವಾದ, ªಜಾತಿ- ಮತ ಧೃವೀಕರಣದಲ್ಲೇ ಚುನಾವಣೆ ಗೆಲ್ಲಬೇಕೆಂಬ ಜಾಯಮಾನ ಅವರದ್ದು, ರಾಜ್ಯದಲ್ಲಂತೂ ಕಳೆದ ಮೂರ್ನಾಲ್ಕು ವರ್ಷದಿಂದ ಯಾವ ಅಭಿವೃದ್ಧಿ ಕೆಲಸವನ್ನ ಬಿಜೆಪಿ ಮಾಡಿಲ್ಲ, ಸಮಾಜದಲ್ಲಿ ಹಿಂದೂ ಮುಸ್ಲಿಂ ನಡುವೆ ಜಗಳ ಹಚ್ಚೋದೇ ಇವರ ಕೆಲಸವಾಗಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಧೃವೀಕರಣ ಪಾಲಿಟಿಕ್ಸ್ನಲ್ಲೇ ಮಗ್ನವಾಗಿದೆ. ಅದಕ್ಕೇ ಹಳ್ಳಿ ಪಟ್ಟಣ ಎಲ್ಲಕಡೆಯ ಜನರ ವಿಶ್ವಾಸವನ್ನ ಬಿಜೆಪಿ ಕಳೆದುಕೊಂಡಿದೆ, ಅದಕ್ಕಾಗಿಯೇ ಬಿಜೆಪಿಯವರಿಗೆ ಇನ್ನೂ ತಾಲೂಕು ಜಿ¯್ಲÁ ಪಂಚಾಯತಿ ಎಲೆP್ಷÀನ್ ಮಾಡಲಾಗುತ್ತಿಲ್ಲ . ಇಂತಹ ಪಕ್ಷದ ಆಡಳಿತ À ಕರ್ನಾಟಕದಲ್ಲಿ ಇರೋದೇ ನಮ್ಮೆಲ್ಲರ ದುರಾದೃಷ್ಟ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸÀರ್ಕಾರ ಸಮಾಜದ ಕೋಮು ಸಾಮರಸ್ಯ ಕದಡುವಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಾ, ಆ ಮೂಲಕ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದೆ. ಈ ಲೆಕ್ಕಾಚಾರವೇ ಮುಂದೆ ಬಿಜೆಪಿಗೆ ತಿರುಗುಬಾಣವಾಗಲಿದೆ. ಮಂದಿರ, ಮಸೀದಿ, ಚರ್ಚು ಎ¯್ಲÁ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಇಷ್ಟುದಿನ ಯಾರಿಗೆ ತೊಂದರೆ ಆಗಿತ್ತು? ಕಣ್ಣೆದುರೇ ಸಮಾಜದ ಸಾಮರಸ್ಯ ಕುಸಿದುಬೀಳುತ್ತಿದ್ದರೂ, ಅದಕ್ಕೆ ಕಾರಣವಾದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗದಷ್ಟು ಅಸಾಮಥ್ರ್ಯ ಈಗಿನ ಮುಖ್ಯಮಂತ್ರಿಗಳು ತೋರುತ್ತಿರೋದು ನಿಜವಾಗಿಯೂ ದುರಾದೃಷ್ಟಕ ಸಂಗತಿ.
ದಿನೇ ದಿನೆ ರಾಜ್ಯದಲ್ಲಿ ಇಷ್ಟೊಂದು ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಬೊಮ್ಮಾಯಿಯವರದ್ದು ಈ ಎಲ ಸಮಾಜ ವಿರೋಧಿ ಕೃತ್ಯಗಳಿಗೆ ಸಹಮತವೋ ಅಥವಾ ಕಾನೂನು ಕ್ರಮ ಜರುಗಿಸಲಾಗದ ಅಸಹಾಯಕತೆಯೋ? ಗೊತ್ತಾಗುತ್ತಿಲ್ಲ, ಮುಖ್ಯಮಂತ್ರಿಗಳ ಮಹಾಮೌನದಿಂದ ರಾಜ್ಯದ ಜನತೆ ಗೊಂದಲಕ್ಕೆ ಒಳಗಾಗಿದ್ದಾರೆಂದು ಡಾ. ಅಜಯ್ ಸಿಂಗ್ ಅಚ್ಚರಿ ಹೊರಹಾಕಿದ್ದಾರೆ.
ಬೆಲೆ ಏರಿಕೆ ಮೂಲಕ ಜನರ ಲೂಟಿ: ವಿದ್ಯುತ್ ದರವನ್ನು ಪ್ರತಿ ಯುನಿಟ್ಗೆ 35 ಪೈಸೆಯಷ್ಟು ಹೆಚ್ಚಿಸಿರುವ ಸರ್ಕಾರ, ಬೆಲೆ ಏರಿಕೆಯ ಮೂಲಕ ಜನರನ್ನು ಲೂಟಿ ಮಾಡುವ ತನ್ನ ಒಂದಂಶದ ಕಾರ್ಯಕ್ರಮವನ್ನು ನಿರ್ಲಜ್ಜ ರೀತಿಯಲ್ಲಿ ಮುಂದುವರೆಸಿದೆ. ದರ ಹೆಚ್ಚಳದ ಮೂಲಕ ಜನ ಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ಈ ಕ್ರಮ ಖಂಡನೀಯ.
ಈ ಬೆಲೆ ಏರಿಕೆಯು ಎಲ್ಲ ಮನೆಗಳ. ಬಿಲ್ ಗಳನ್ನು ಹೆಚ್ಚಿಸಲಿದೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಬೆಲೆಗಳ ಏರಿಕೆಯು ಸಣ್ಣ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಯನ್ನು ವ್ಯಾಪಕಗೊಳಿಸಲಿದೆ ಹಾಗೂ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಮತ್ತೊಂದು ಹೊರೆಯನ್ನು ಹೇರಲಿದೆ.
ಒಂದೇ ಸಮನೆ ಏರುತ್ತಿರುವ ಪೆಟ್ರೋಲ್, ಡೀಸೆಲ್, ವಾಣಿಜ್ಯ ಬಳಕೆ ಸಿಲೆಂqರ್, ಒಳ್ಳೆಣ್ಣೆ ದರಗಳ ನಡುವೆಯೇ ಇದೀಗ ವಿದ್ಯುತ್ ದರ ಹೆಚ್ಚಳವಾಗಿರೋದು ಬಡವರು, ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಬರೆ. ರಾಜ್ಯದಲ್ಲೀಗ ವಿದ್ಯುತ್ ದರ ಹಾಗೂ ಹೋಟಲ್ ಆಹಾರ ಪದಾರ್ಥಗಳ ದರ ಹೆಚ್ಚಳದ ಆಗಾತ ಏಕಕಾಲಕ್ಕೇ ಗ್ರಾಹಕರು ಅ ನುಭವಿಸಬೇಕಾಗಿದೆ. ಇದರಿಂದಾಗಿ ಜನ ಸಾಮಾನ್ಯರ ಬದುಕೇ ದುರ್ಭರವಾಗಲಿದೆ. ವಿದ್ಯುತ್ ದರ ಹೆಚ್ಚಳ ಕೃಷಿ ಕಾಯಕಕ್ಕೂ ಹೊಡೆತ ನೀಡಲಿದೆ.
ವಿದ್ಯುತ್ ಕೊರತೆಯೇ ಇಲ್ಲ ಎನ್ನುವ ಸರಕಾರ, ಈಗ ದರ ಏರಿಕೆ ಮಾಡಿದ್ದು ಏಕೆ? ಜನರ ಮೇಲೆ ಭಾರ ಹೊರೆಸಿ ವಿದ್ಯುತ್ ಅನ್ನು ಸರಕಾರ ಕಳ್ಳ ಮಾರ್ಗದಲ್ಲಿ ಮಾರಿಕೊಳ್ಳುತ್ತಿದೆಯಾ? ಇಲ್ಲ ಎನ್ನುವುದಾದರೆ ದರ ಏರಿಕೆ ಹಿಂಪಡೆಯಲಿ. ಜನರಿಗೆ ವಿದ್ಯುತ್ ಬರೆ, ಬಡವರ_ ಮೇಲೆ_ ಬಿಜೆಪಿ_ ಬೆಲೆ_ ಏರಿಕೆ_ ಸಮರ ಸಾರಿದೆ. ಬಿಜೆಪಿ ಬೆಲೆ ಏರಿಕೆಯ ಮಾರಣಕಾಂಡ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರಕಾರಕ್ಕೆ ಹಣ ಮಾಡುವುದೇ ದಂಧೆ ಆಗಿಬಿಟ್ಟಿದೆ ಎಂದು ಡಾ. ಅಜಯ್ ಸಿಂಗ್ ಆಕ3ಓಶ ಹೊರಹಾಕಿದ್ದಾರೆ.
ಕೋಮುವಾದ ಬಿಜೆಪಿ ಅಜೆಂಡಾ: ರಾಜ್ಯದ ಬಿಜೆಪಿ ಸರ್ಕಾರ ತನ್ನ ಎ¯್ಲÁ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್, ಜಟ್ಕಾ ಕಟ್, ಮಾವು- ಬಾಳೆ ವ್ಯಾಪಾರÀದಲ್ಲಿಯೂ ಕೋಮುವಾದದ ಅಜಂಡಾ ಹುಡುಕುತ್ತಾ ಅವುಳ ಬಗ್ಗೆ ಮಾತ್ರ ಮಾತನಾಡುತ್ತಿದೆ ಎಂದು ಡಾ. ಅಜಯ್ ಸಿಂಗ್ ಮಾತಿನಲ್ಲಿ ಕುಟುಕಿದ್ದಾರೆ.
ಜನರ ಕಷ್ಟಗಳ ಬಗ್ಗೆ ಬಿಜೆಪಿಯದ್ದು ಸದಾಕಾಲ ದಿವ್ಯಮೌನ. ಅಭಿವೃದ್ಧಿ ವಿರೋಧಿ, ಕೋಮು- ಸಾಮರಸ್ಯ ಕದಡುವ ಅಜಂಡಾ ಹೊಂದಿರುವ ಇಂತಹ ಅಸಮರ್ಥ ಬಿಜೆಪಿ ಪಕ್ಷದ ನೇತೃತ್ವದ ಆಡಳಿತದಿಂದಾಗಿ ಕರ್ನಾಟಕ ಹೊಂದಿದ್ದಂತಹ ವರ್ಚಸ್ಸು ದಿನದಿಂದ ಇನಕ್ಕೆ ಮಾಸುತ್ತಿದೆ ಎಂದು ಡಾ. ಅಜಯ್ ಸಿಂಗ್ ಕಳವಳ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯ ಹೊಂದಿರುವ ಉನ್ನತ, ಉತಕೃಷ್ಟ ಪರಂಪರೆ ಕಾಪಾಡಿಕೊಂಡು ಹೋಗಲು, ರಾಜ್ಯದ ಸರ್ವತೋಮುಖ ಒಳಿತಿಗಾಗಿ, ಜನರ ಹಿತಾಸಕ್ತಿ ರಕ್ಷಿಸಲು, ಸಮಾಜದಲ್ಲಿ ಶಾಂತಿ ನೆಮ್ಮದಿ ಪುನರ್ ಸ್ಥಾಪಿಸಲು ಬಿಜೆಪಿ ಆಡಳಿತ ಇನ್ನಾದರೂ ಮೇಲಿ ಎಲ್ಲಾ ದೋಷಗಳನ್ನು ತಿದ್ದಿಕೊಂಡಲ್ಲಿ ಒಳಿತು, ಇಲ್ದೆ ಹೋದಲ್ಲಿ ನರೇ ದಂಗೆ ಎದ್ದು ಬಿಜೆಪಿಗೆ ಪಾಠ ಕಲಿಸುತ್ತಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…