ಕಲಬುರಗಿ: ಅಧಿಕ ಬಿಸಿಲು ಈ ಬಾರಿ ಕಲಬುರಗಿ ಹಾಗೂ ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳನ್ನು ಕಾಡುತ್ತಿದ್ದರೂ ಸಹ ರಾಜ್ಯ ಸರ್ಕಾರ ದಿಲ್ಲಿ ಬಿಸಿಲಿಗೆ ಹೋಲಿಕೆ ಮಾಡುತ್ತ ಕಳೆದ 40 ವರ್ಷದಿಂದ ಪ್ರತಿ ಬೇಸಿಗೆಯಲ್ಲೂ ಕಚೇರಿ ವೇಳೆ ಬದಲಾವಣೆಯ ಸವಲತ್ತು ಹೊಂದುತ್ತಿದ್ದ ಕಲಬುರಗಿ ಕದಾಯ ವಿಭಾಗದ 7 ಹಾಗೂ ಬೆಳಗಾವಿಯ 2 ಸೇರಿದಂತೆ 9 ಜಿಲ್ಲಗಳನ್ನು ವಂಚಿಸಿರೋದು ಬಿಸಿಲು ಜಿಲ್ಲೆಗಳ ನೌಕರರು ಹಾಗೂ ಸಾಮಾನ್ಯ ಜನತೆಗೆ ಸರ್ಕಾರ ಮಾಡಿರುವ ದ್ರೋಹ ಎಂದು ವಿಧಾನ ಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ದೂರಿದ್ದಾರೆ.
ನೌಕರರ ಸಂಘ ಕಚೇರಿ ವೇಳೆ ಬದಲವಣೆಗೆ ಕೋರಿದ್ದರೂ ಸಹ ಅದನ್ನು ತಿರಸ್ಕರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಆಯೋಗದವರು ದಿಲ್ಲಿಯಲ್ಲೂ ಕಲುಗುರಗಿ ವಿಭಗಕ್ಕಿಂತ ಅದಿಕ ಹಬಿಸಿಲಿದೆ, ಹಾಗಿದ್ದರೂ ಅಲ್ಲಿನ ಕಚೇರಿ ವೇಳೆ ಬದಲಾಗುತ್ತಾ? ಇನ್ಮುಂದೆ ಕಲಬುರಗಿ, ಬೆಳಗಾವಿ ವಿಭಾಗಗಳಲ್ಲಿಯೂ ಕಚೇರಿ ವೇಳೆ ಬದಲಾಗದು ಎಂದು ಏಕಾಏಕಿ ತಾನೇ ತೀರ್ಮಾವನಿಸಿದಂತಿದೆ. ಯಾಕೆ ಹೀಗೆ? ಈ ನಿರ್ಣಯ ಕೈಗೊಳ್ಳಲು ಇರುವ ಕಾರಣಗಳೇನು? ಇವನ್ನು ಹೇಳದೆ ಏಕಾಏಕಿ ಕಚೇರಿ ವೇಳೆ ಬದಲಿಸಿ ಸೂಚನೆ ಹೊರಡಿಸಿರೋದು ತಕ್ಷಣ ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶ ಮಾಡಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ದಿ.. ದೇವರಾಜ ಅರಸು ಸರ್ಕಾರದ ಕಾಲದಿಂದಲೂ ಬಿಸಿಲ ಬೇಗೆಯಿಂದ ನೌಕರರಿಗೆ ಹಾಗೂ ಜನತೆಗೆ ರಕ್ಷ್ಷೆ ನೀಡಲು, ಬಿಸಿಲಿಂದ ಆಗಬಹುದಾದ ತೊಂದರೆಗಳಿಂದ ಇವರಿಗೆ ಸುರಕ್ಷತೆ ಕಲ್ಪಿಸಲು ಕಚೇರಿ ವೇಳೆಯಲ್ಲಿಯೇ ಬದಲಾವಣೆಯ ಆದೇಶ ಅಂದು ಕೈಗೊಂಡು ಜಾರಿಗೆ ತರಲಾಗಿತ್ತು. ಇಂದು ಏನೂ ಯೋಚಿಸದೆ ಇದ್ದಂತಹ ಸವಲತ್ತಿಗೂ ಕೊಕ್ಕೆ ಹಾಕೋದು ಸರಿಯಾದ ಕ್ರಮವಲ್ಲ. ಇಂತಹ ನಿರ್ಣಯಕ್ಕೆ ವೈe್ಞÁನಿಕ ಅಥವಾ ಇರೆ ಯಾವ ಗಟ್ಟಿ ಆದಾರವೂ ಸರ್ಕಾರ ನೀಡಿಲ್ಲ.
ಮೇಲ್ನೋಟಕ್ಕೆ ಇದು ಕಲಬುರಗಿ ವಿಭಾಗವನ್ನು ಕೇಂದ್ರೀಕರಿಸಿ ಕೈಗೊಂಡ ನಿರ್ಣಯವಾಗಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಮುಖ್ಯಮಂತ್ರಿಗಳು ಇದನ್ನು ಗಮನಿಸಿ ತಕ್ಷಣ ಬಿಸಿಲಿನಿಂದ ನೌಕರರಿಗೆ, ಜನತತೆಗೆ ರಕ್ಷಿಸಲು ಕಚೇರಿ ವೇಳೆಯಲ್ಲಿ ಎಂದಿನಂತೆ ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಕಾಲ ಬೆ. 8 ರಿಂದ ಮಧ್ಯಾಹ್ನ 1. 30 ರ ವರೆಗೆ ಬದಲಾವಣೆ ಮಾಡಿ ಆದೇಶ ಹೊರಡಿಸಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಈಗಾಗಲೇ ಮಾರ್ಚ್ ತಿಂಗಳಲ್ಲೇ ರಣರಣ ಬಿಸಿಲಿಂದ ಕಲಬುರಗಿ , ಬೆಳಗಾವಿ ವಿಭಾಗದ ಜಿಲ್ಲೆಗಳು ಬಸವಳಿದಿವೆ. ಬಿಸಿಲ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗಿದೆ. ಬೆಳಗಿನ 7 ಗಂಟೆಗೆ ಶುರುವಾಗುವ ಬಿಸಿಲ ಪ್ರಖರತೆ 6 ಗಂಟೆಯವರೆಗೂ ಇರುತ್ತದೆ. ಹೀಗಿರುವಾಗ ಕೇರಿ ವೇಳೆ ಬೆಳಗಿನ ಹೊತ್ತು ಇದ್ದಲ್ಲಿ ನೌಕರರು ಹಾಗೂ ಸಾರ್ವಜನಿಕರು ಇಬ್ಬರಿಗೂ ಅನುಕೂಲವಾಗಲಿದೆ. ಸರ್ಕಾರ ವೇಳೆ ಬದಲಾವಣೆ ಮಾಡೋದು ಬೇಡವೆಂದು ಕೈಗೊಂಡ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…