ಭಾರತ ವಿಶ್ವಗುರುವಾಗಲು ಎಡವಿದೆ: ಡಾ. ಚಿಂಚನಸೂರ

ಆಳಂದ: ಎಲ್ಲಾ ರಂಗದಲ್ಲೂ ಭಾರತ ವಿಶ್ವಗುರುವಾಗಲು ಎಡವಿದೆ ಎಂದು ಆಮ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ಡಾ| ರಾಘವೇಂದ್ರ ಚಿಂಚನಸೂರ ಅವರು ಹೇಳಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ತಾಲೂಕಿನ ಬೆಳಮಗಿ, ನರೋಣಾ, ಕಮಲಾನಗರ ಮತ್ತು ವಿ.ಕೆ.ಸಲಗರ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಪ್ರಚಾರ ಕೈಗೊಂಡ ವೇಳೆ ಅವರು ಮಾತನಾಡಿದರು.

ಭಾರತವು ಇಡೀ ವಿಶ್ವಕ್ಕೆ ಮಾದರಿಯನ್ನಾಗಿ ಮಾಡಬೇಕಾಗಿದೆ. ರ‍್ಯಾಂಕಿಂಗ್ ನೋಡಿದರೆ ವಿಶ್ವ ದರ್ಜೆ ಹೊಂದಿರುವ ಸಂಸ್ಥೆಗಳಿಂದ ದೇಶಗಳ ರ‍್ಯಾಂಕಿಕೊಡುತ್ತಾರೆ. ನಮ್ಮ ದೇಶ ರ‍್ಯಾಂಕಿಂಗ ಗಮನಿಸಿದರೆ ಮೊದಲಿಗೆ ಮಕ್ಕಳ ಅಭಿವೃದ್ಧಿಯಲ್ಲಿ ೧೪೧ ದೇಶಗಳ ಪೈಕಿ ೧೧೨ಸ್ಥಾನ ಪಡೆದಿದೆ. ಇನ್ನೂ ಹೆಚ್ಚಿನ ಸಾಧನೆ ಬೇಕಾಗಿದೆ. ಭ್ರಷ್ಟಾಚಾರ ವಿಷಯದಲ್ಲಿ ವಿಶ್ವಕ್ಕೆ ಹೊಲಿಸಿದರೆ ಶೇ ೮೫ರಷ್ಟಿದೆ. ಈ ರ‍್ಯಾಂಕಿಂಗ ೨೦೨೧ರಲ್ಲಿ ಡೆನ್ಮಾರ್ಕ ಶೂನ್ಯವಿದೆ. ಸೌತ ಆಫ್ರೀಕ್ ತೀರಾ ಕಡಿಮೆ ಇದೆ.

ಆದರೆ ಭಾರತ ಇನ್ನೂ ಹೊರಬರುತ್ತಿಲ್ಲ. ಪ್ರಜಾಪ್ರಭು ಜಾರಿಯಲ್ಲೂ ಪ್ರತಿಷಿತ ೩೫ ರ‍್ಯಾಂಕಿಂಗ ಬದಲು ೪೬ ಸ್ಥಾನಕ್ಕೆ ಕುಸಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ೬೪ ದೇಶಗಳಲ್ಲಿ ೪೩ ಸ್ಥಾನ, ಪ್ರಕೃತಿಯಲ್ಲೂ ಜಾಗತೀಕ ಮಟ್ಟದಲ್ಲಿ ೧೬೮ ಸ್ಥಾನವಿದೆ, ವಿಶ್ವದಲ್ಲಿ ದೇಶದ ರ‍್ಯಾಂಕಿಂಗ್ ಹೆಚ್ಚಿಸಲು ಜನರ ಪಾತ್ರವೂ ಇದೆ. ಇದಕ್ಕಾಗಿ ಆಮ ಆದ್ಮಿ ಪಕ್ಷವು ನಿರಂತರವಾಗಿ ಜನ ಜಾಗೃತಿ ಕೆಲಸ ಮಾಡುತ್ತಿದೆ ಎಂದರು.

ಆಮ ಆದ್ಮಿ ಪಕ್ಷವು ಜಾತಿ, ಮಥ ಧರ್ಮದ ಬಗ್ಗೆ ಮಾತನಾದೆ ಕೇವಲ ಶಿಕ್ಷಣ, ಆಸ್ಪತ್ರೆ ಉದ್ಯೋಗ ಹೀಗೆ ಮೂಲಭೂತಸೌರ್ಕಗಳ ಬಗ್ಗೆ ಧ್ವನಿಎತ್ತುವ ಪಕ್ಷವಿದೆ. ರಾಜ್ಯವು ನೀರಾವರಿ ಯೋಜನೆಯಲ್ಲಿ ಅತಿ ಹಿಂದುಳಿದಕೊಂಡಿದೆ. ವಿಶೇಷವಾಗಿ ಕಲಬುರಗಿಯಲ್ಲಿ ಇದುವರೆಗೂ ನೀರಾವರಿ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಹೀಗಾಗಿ ದೇಶಕ್ಕೆ ನೀರಾವರಿ ಯೋಜನೆ ಅನುಷ್ಠಾನದಲ್ಲಿ ತೀರಾ ಹಿಂದುಳಿದಿದ್ದೇವೆ. ಪ್ರತಿವರ್ಷ ಒಂದಿಲ್ಲೊಂದು ರೀತಿಯಲ್ಲಿ ಬರಗಾಲ ಎದುರಿಸುತ್ತಿದ್ದೇವೆ.

ಈ ಕುರಿತು ಸರ್ಕಾರ ಯಾವುದೇ ಸಿದ್ಧತೆ ಮಾಡದೆ ಕೇವಲ ಜಾತಿ, ಧರ್ಮ ವಿಷ ಬೀಜ ಬಿತ್ತುತ್ತದೆ. ಶೇ ೭೦ರಷ್ಟು ಕಲಬುರಗಿ ಗ್ರಾಮೀಣ ಮತಕ್ಷೇತ್ರ ಬರ ಎದುರಿಸಿದರು ಅಧಿಕಾರಿಗಳ ಸಿದ್ಧತೆಯ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಧ್ವನಿಯಾಗ ಅವರಿಗೆ ಮೂಲಸೌಭ್ಯ ದೊರೆಯುವಂತೆ ಮಾಡುವ ಏಕೈಕ ಉದ್ದೇಶದಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಸಂಘಟಿತ ಹೋರಾಟ ಮೂಲಕ ಜನರ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಮುಂದಾಗಿದ್ದು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪಕ್ಷದ ಮುಖಂಡ ಸಚೀನ ಹುಲಿಮನಿ, ಶ್ರೀಕಾಂತ ಪಲ್ಲಾ, ಸೈಯದ್ ಯೂಸಬ್, ಮುಕೇಶ ರಾಠೋಡ ಸೇರಿದಂತೆ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago