ಕಲಬುರಗಿ; ತಾಂತ್ರಿಕ ಶಿಕ್ಷಣದ ಎಲ್ಲಾ ವಿದ್ಯಾರ್ಥಿಗಳನ್ನು ಉದ್ಯೋಗ ಮತ್ತು ಸಮಾಜದ ಮೌಲ್ಯಯುತ ಆಸ್ತಿಯನ್ನಾಗಿ ಮಾಡಲು ತಾಂತ್ರಿಕ ಶಿಕ್ಷಣವನ್ನು ಹೆಚ್ಚು ಸಂಶೋಧನೆ ಮತ್ತು ಜ್ಞಾನದ ಆಧಾರದ ಮೇಲೆ ಮರುವ್ಯಾಖ್ಯಾನಿಸಲು ಸಮಯ ಪಕ್ವವಾಗಿದೆ ಎಂದು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ಐಎಸ್‍ಟಿಇ) ಅಧ್ಯಕ್ಷ ಡಾ.ಪ್ರತಾಪ್‍ಸಿನ್ ಕಾಕಾಸಾಹೇಬ ದೇಸಾಯಿ ಹೇಳಿದರು.
ಶನಿವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನಲ್ಲಿರುವ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ವಿಶ್ವವಿದ್ಯಾಲಯದ ಐಎಸ್‍ಟಿ ಬೋಧಕ ಮತ್ತು ವಿಧ್ಯಾರ್ಥಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಡಾ.ದೇಸಾಯಿ, ವಿವಿಧ ಸಮೀಕ್ಷೆಗಳ ಪ್ರಕಾರ ಕೇವಲ ಕೆಲವೇ ಪ್ರತಿಶತ ಇಂಜಿನಿಯರಿಂಗ್ ಪದವೀಧರರು ಉದ್ಯೋಗಿಗಳಾಗಲು ಪರಿಣಿತರಾಗಿದ್ದಾರೆ ಎಂದರು.
ಒಂದು ಸಮೀಕ್ಷೆಯ ಪ್ರಕಾರ ಇಂಜಿನಿಯರಿಂಗ್ ಪದವೀಧರರಿಗೆ ಶೇಕಡಾ 18 ರಷ್ಟು ಮಾತ್ರ ಉದ್ಯೋಗಾವಕಾಶವಿದೆ ಎಂದು ತೋರಿಸಿದರೆ, ವಿಶ್ವಬ್ಯಾಂಕ್ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 8 ರಷ್ಟು ಮಾತ್ರ ಉದ್ಯೋಗಿಗಳೆಂದು ತೋರಿಸಿದೆ ಮತ್ತು ಮಲ್ಟಿ ನ್ಯಾಶನಲ್ ಕಂಪನಿಗಳು ನಡೆಸಿದ ಮತ್ತೊಂದು ಸಮೀಕ್ಷೆಯು ವಿμÁದದ ಸ್ಥಿತಿಯನ್ನು ಚಿತ್ರಿಸಿದೆ. ಶೇಕಡಾ 48 ರಷ್ಟು ಕಂಪ್ಯೂಟರ್ ಇಂಜಿನಿಯರ್‍ಗಳು ದೋಷ ಮುಕ್ತ ಕೋಡ್ ಬರೆಯಲು ಪರಿಣತರಲ್ಲ ಎಂದು ಗಮನಸೆಳೆದರು.
ತಾಂತ್ರಿಕ ಕೋರ್ಸ್‍ಗಳಿಗೆ ಸೇರುವ ವಿದ್ಯಾರ್ಥಿಗಳು ಪ್ರಸ್ತುತ ತಮ್ಮ ಕೋರ್ಸ್ ಅವಧಿಯಲ್ಲಿ ಪುಸ್ತಕಗಳಲ್ಲಿ ಲಭ್ಯವಿರುವ ಮಾಹಿತಿ ಪಡೆಯಲು ಆಸಕ್ತಿ ಹೊಂದಿಲ್ಲ ಮತ್ತು ಅವರ ಕೌಶಲ್ಯವನ್ನು ಉನ್ನತೀಕರಿಸುವ ಜ್ಞಾನವನ್ನು ಪಡೆಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ ಡಾ ದೇಸಾಯಿ ಶಿಕ್ಷಣದಲ್ಲಿ ಜ್ಞಾನವನ್ನು ಸಂಶೋಧನಾ ಕಾರ್ಯಕ್ರಮಗಳ ಮೂಲಕ ಮಾತ್ರ ನೀಡಬಹುದು ಮತ್ತು ವಿಶ್ವವಿದ್ಯಾಲಯಗಳಲ್ಲಿನ ನಿರಂತರ ಸಂಶೋಧನಾ ಚಟುವಟಿಕೆಗಳು ಅವುಗಳನ್ನು ಜ್ಞಾನದ ಕೇಂದ್ರಗಳನ್ನಾಗಿ ಮಾಡುತ್ತದೆ, ಇದು ವಿದ್ಯಾರ್ಥಿಗಳಿಗೆ ಉದ್ಯಮದಿಂದ ಹೆಚ್ಚು ಬೇಡಿಕೆಯಿರುವ ಸಂಪನ್ಮೂಲವನ್ನು ಸಕ್ರಿಯಗೊಳಿಸುತ್ತದೆ ಎಂದು ಡಾ.ಪ್ರತಾಪ್‍ಸಿನ್ ದೇಸಾಯಿ ಹೇಳಿದರು.
ಜ್ಞಾನ ಆಧಾರಿತ ಶಿಕ್ಷಣದ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮುಂದುವರಿಸುವ ಅನಿವಾರ್ಯತೆ ಉಂಟಾಗಿದೆ ಮತ್ತು ಒಂದು ಅಧಿಕೃತ ಅಧ್ಯಯನದ ಪ್ರಕಾರ ಈ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು 9 ಬಿಲಿಯನ್ ಡಾಲರ್‍ಗಳನ್ನು ಖರ್ಚು ಮಾಡುತ್ತಿದ್ದಾರೆ, ಇದು ಕೇಂದ್ರ ಬಜೆಟ್‍ನಲ್ಲಿ ವಾರ್ಷಿಕವಾಗಿ ಉನ್ನತ ಶಿಕ್ಷಣಕ್ಕಾಗಿ ವಿನಿಯೋಗ ಮಾಡುತ್ತಿರುವದಕಿಂತಲೂ ಹೆಚ್ಚಾಗಿದೆ. “ಈಗಿನ ಪೀಳಿಗೆಯ ವಿದ್ಯಾರ್ಥಿಗಳು ವಿದೇಶದಲ್ಲಿ ನೆಲೆಸಲು ಅಥವಾ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಆಸಕ್ತಿ ಹೊಂದಿಲ್ಲ ಮತ್ತು ಭಾರತೀಯ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಜ್ಞಾನ ಆಧಾರಿತ ಉನ್ನತ ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ” ಎಂದು ಹೇಳಿದರು.
1941 ರಿಂದ ತಾಂತ್ರಿಕ ಶಿಕ್ಷಣದ ಸುಧಾರಣೆಗೆ ಶ್ರಮಿಸುತ್ತಿರುವ ಐಎಸ್‍ಟಿಇ ಇಡೀ ವಿಶ್ವದ ಏಕೈಕ ಅತಿದೊಡ್ಡ ಸಂಸ್ಥೆಯಾಗಿದೆ ಎಂದು ಡಾ ದೇಸಾಯಿ ಹೇಳಿದರು. ಪ್ರಸ್ತುತ 1.64 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಐಎಸ್‍ಟಿಇಯ ಆಜೀವ ಸದಸ್ಯರಾಗಿದ್ದಾರೆ, ಪ್ರತಿ ವರ್ಷ 6.5 ಲಕ್ಷ ವಿದ್ಯಾರ್ಥಿಗಳು ತಮ್ಮನ್ನು ತಾವು ನೋಂದಾಯಿಸಿಕೊಳ್ಳುತ್ತಾರೆ. ಐಎಸ್‍ಟಿಇಯ ಒಟ್ಟು 4800 ಸಂಸ್ಥೆಗಳಲ್ಲಿ 4700 ಐಎಸ್‍ಟಿಇ ಸದಸ್ಯರಾಗಿದ್ದಾರೆ. ಐಎಸ್‍ಟಿಇಯು ಶಿಕ್ಷಕರಿಗೆ ತರಬೇತಿ ಮತ್ತು ಕೌಶಲ್ಯಗಳನ್ನು ಸುಧಾರಿಸುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ ಎಂದರು.
ಯುವ ಮತ್ತು ಸಮರ್ಪಿತ ಸಿಬ್ಬಂದಿಯನ್ನು ಹೊಂದಿರುವ ಶರಣಬಸವ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದ ಡಾ. ಪ್ರತಾಪ್‍ಸಿನ್ ದೇಸಾಯಿ, ವಿಶ್ವವಿದ್ಯಾಲಯವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಹೊರಹೊಮ್ಮುವ ಸಮಯ ದೂರವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹಾಗೂ ಕಲಬುರಗಿಯ ಪ್ರಾದೇಶಿಕ ವಿಟಿಯುನ ಮುಖ್ಯಸ್ಥ ಡಾ.ಬಸವರಾಜ ಗದಗೆ ಮಾತನಾಡಿದರು. ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಐಇಟಿಇ ಉಪಕೇಂದ್ರದ ಮುಖ್ಯಸ್ಥೆ ಡಾ.ಡಿ.ಸಿ.ಶುಭಾಂಗಿ, ಕುಲಸಚಿವ (ಮೌಲ್ಯಮಾಪನ) ಡಾ.ಬಸವರಾಜ ಮಠಪತಿ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…