ಬಿಸಿ ಬಿಸಿ ಸುದ್ದಿ

ದೇಶದಲ್ಲಿ ಹಿಂದು- ಮುಸ್ಲಿಂ ಸಮುದಾಯದವರು ಒಂದಾಗಿ ಸಹಬಾಳ್ವೆ ನಡೆಸಿ: ಸಾಧ್ವಿ ನಿರಂಜನ ಜ್ಯೋತಿ

ಶಹಾಬಾದ:ಹಿಂದು-ಮುಸ್ಲಿಂ ಭಾವೈಕ್ಯತೆಯ ತಾಣವಾಗಿರುವ ತೊನಸನಹಳ್ಳಿ ಗ್ರಾಮದಂತೆ ದೇಶದಲ್ಲಿ ಹಿಂದು- ಮುಸ್ಲಿಂ ಸಮುದಾಯದವರು ಒಂದಾಗಿ ಕೂಡಿಕೊಂಡು ಸಹಬಾಳ್ವೆ ನಡೆಸಬೇಕೆಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹೇಳಿದರು.

ಅವರು ಸೋಮವಾರ ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಮಲ್ಲಣಪ್ಪ ಮಹಾರಾಜರು,ಅಲ್ಲಮಪ್ರಭು ಹಾಗೂ ಶ್ರೀ ಸುಲ್ತಾನ ಅಹ್ಮದಶಾಹವಲಿ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಅಲ್ಲಮಪ್ರಭು ಹಾಗೂ ಶ್ರೀ ಸುಲ್ತಾನ ಅಹ್ಮದಶಾಹವಲಿ ಜಾತ್ರಾ ಮಹೋತ್ಸವ ನೋಡಿದರೇ ದೇಶದಲ್ಲಿ ಯಾವುದೇ ಧರ್ಮ ಜಾತಿಯ ಬಗ್ಗೆ ಅಶಾಂತಿ ಉಂಟಾಗಲಾರದು.ಇಂತಹ ಪವಿತ್ರ ಕ್ಷೇತ್ರದಲ್ಲಿ ನಾನು ಬಂದಿರುವುದು ನನ್ನ ಸೌಭಾಗ್ಯ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡಾಗನಿಂದಲೂ ಜನರ ಸೇವೆ ಮಾಡುತ್ತಿದ್ದಾರೆ.ಕೊರೊನಾ ಸಮಯದಲ್ಲಿ ದೇಶದ ಜನತೆಗೆ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ನೀಡುವ ಮೂಲಕ ಜನರ ಪ್ರಾಣ ರಕ್ಷಿಸಿದ್ದಾರೆ.ಅಲ್ಲದೇ ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು.

ಎಲ್ಲಿ ಯಾವಾಗ ಯಾರ ಮೇಲೆ ಬಾಂಬ್ ಬೀಳುವುದೋ ಎಂಬ ಆತಂಕದಲ್ಲಿದ್ದರು.ಆಗ ಪ್ರಧಾನಿಯವರು ಮುಂದೆ ಬಂದು ಅವರನ್ನು ಅಲ್ಲಿಂದ ಭಾರತಕ್ಕೆ ಕರೆಯಿಸಿಕೊಂಡಿರುವುದು ಮಾತ್ರ ನಿಜಕ್ಕೂ ಶ್ಲಾಘನೀಯವಾದುದು.ರೈತರಿಗೆ ಕಿಸಾನ ಸಮ್ಮಾನ ಯೋಜನೆ, ಫಸಲ್ ಭೀಮಾ ಯೋಜನೆ ಹಾಗೂ ಉಚಿತ ಆಹಾರ ಒದಗಿಸುವಲ್ಲಿ ಪ್ರಧಾನಿಯವರು ಹೆಚ್ಚಿನ ಕಾಳಜಿ ವಹಿಸಿ ಎಲ್ಲಾ ವರ್ಗದ ಜನರಿಗೆ ಹಲವರು ಯೋಜನೆಗಳನ್ನು ತಂದಿದ್ದಾರೆ. ಹಿಂದು ಸಮಾಜದ ಬಹುದು ದೊಡ್ಡ ಶಕ್ತಿಯಾಘಿರುವ ರಾಮ ಮಂದಿರದ ನಿರ್ಮಾಣ ಕಾರ್ಯವೂ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಅವರ ಪರಿಶ್ರಮದಿಂದಾಗುತ್ತಿದೆ ಎಂದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ತೊನಸನಹಳ್ಳಿ(ಎಸ್) ಗ್ರಾಮಕ್ಕೆ ಬಂದರೆ ಇಲ್ಲಿನ ಜನರು ಯಾವುದೇ ಅನುದಾನ ಸೌಲಭ್ಯ ಕೇಳುವುದಿಲ್ಲ.ಮೊದಲು ನಮಗೆ ಕುಡಿಯುವ ನೀರನ್ನು ಒದಗಿಸಿ ಎಂದು ಕೇಳುತ್ತಾರೆ.ಅದನ್ನು ಕೇವಲ ಇಪ್ಪತ್ತು ದಿನಗಳಲ್ಲಿ ಕಾಮಗಾರಿಯನ್ನು ಮುಗಿಸಿ, ಇಲ್ಲಿನ ಶಾಶ್ವತ ಕುಡಿಯುವ ನೀರನ್ನು ಒದಗಿಸುತ್ತೆನೆ ಎಂದು ಭರವಸೆ ನೀಡಿದರು.ಅಲ್ಲದೇ ಇಲ್ಲಿಯವರೆಗೆ ಮಲ್ಲಣಪ್ಪಸ್ವಾಮಿಗಳು ಯಾವುದೇ ಅನುದಾನ ಕೇಳಿಲ್ಲ. ಮುಂದಿನ ದಿನಗಳಲ್ಲಿ ಮಠಕ್ಕೂ ಅನುದಾನ ಒದಗಿಸಲಾಗುತ್ತದೆ ಎಂದು ಹೇಳಿದರು.

ತೊನಸನಹಳ್ಳಿ(ಎಸ್)ನ ಮಲ್ಲಣಪ್ಪ ಮಹಾರಾಜರು ಹಾಗೂ ಮಹಾರಾಷ್ಟ್ರದ ಗುರುಸಿದ್ದೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ,ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸರಕಾರದ ಆಹಾರ ನಿಗಮ ಮಂಡಳಿ ಸದಸ್ಯೆ ಅಮರೇಶ್ವರಿ ಚಿಂಚನಸೂರ, ಸಂಜೀವಕುಮಾರ ವಾಡೇಕಾರ,ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಮಾಜಿ ಈ.ಸಾ.ನಿ.ಮ ಅಧ್ಯಕ್ಷ ಭೀಮಣ್ಣ ಸಾಲಿ, ಕೃಷ್ಣ ಕಾಢಾ ಅಧ್ಯಕ್ಷ ಶರಣಪ್ಪ ತಳವಾರ,ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್,ತಾಪಂ ಸದಸ್ಯ ಮಲ್ಲಣ್ಣ ಸಣಮೋ,ಕೋಲಿ ಸಮಾಜದ ಅಧ್ಯಕ್ಷ ಶಿವು ತಳವಾರ, ಸಂಗೀತಾ ದೇವೆಂದ್ರ ಕಾರೊಳ್ಳಿ, ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಭೋ, ಉಪಾಧ್ಯಕ್ಷೆ ರೇಷ್ಮಾ ಮಲ್ಲಿನಾಥ ಕರಣಿಕ್,ನಿಂಗಣ್ಣಗೌಡ ಮಾಲಿ ಪಾಟೀಲ, ಗ್ರಾಪಂ ಸದಸ್ಯ ಬಸವರಾಜ ಗೊಳೇದ್, ತಿಪ್ಪಣ್ಣ ನಾಟೇಕಾರ,ಮಹಾದೇವ ಬಂದಳ್ಳಿ, ಹೊನಗುಂಟಾ ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕೊಡಸಾ,ಮಲ್ಲಿಕಾರ್ಜುನ ಇಟಗಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.

ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ಭಕ್ತಿ ಪ್ರಧಾನವಾದ ಹಿಂದಿ ಹಾಡನ್ನು ಹಾಡಿ ನೆರೆದ ಜನರನ್ನು ರಂಜಿಸಿದರು.ಅಲ್ಲದೇ ವೇದಿಕೆಯ ಮೇಲಿದ್ದ ಸಂಸದರು, ಶಾಸಕರು, ಮುಖಂಡರು ಹಾಗೂ ನೆರೆದ ಜನರು ಚಪ್ಪಾಳೆ ತಟ್ಟುತ್ತ ಅವರಿಗೆ ಸಾಥ್ ನೀಡಿದರು. ಸಾವಿರಾರು ಜನರು ಅವರ ಹಾಡನ್ನು ಕೇಳಿ ತಲೆತೂಗಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago