ರಾಯಚೂರು: ಆರೋಗ್ಯ ರಕ್ಷಣೆ ಮತ್ತು ಪೋಷಣೆಯ ಜೀವ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೇಯರ್ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ 250 LPM ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಹಾಗೂ ಮೂರು ಟೆಲಿಮೆಡಿಸಿನ್ ಕೇಂದ್ರಗಳನ್ನು ಬೇಯರ್ ಫೌಂಡೇಶನ್ ಮೂಲಕ ಆರಂಭ ಮಾಡಿದೆ. ಈ ಸಿಎಸ್ಆರ್ ಉಪಕ್ರಮಗಳು ಬೇಯರ್ ನ ಪ್ರಮುಖ ಮೌಲ್ಯಗಳಿಗೆ ಅನುಗುಣವಾಗಿರುತ್ತವೆ. ದುರ್ಬಲ ವರ್ಗದವರಿಗೆ ಸಕಾಲಿಕ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವುದು, ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಸಾಮರ್ಥ್ಯಗಳನ್ನು ನಿರ್ಮಾಣ ಮಾಡುವುದು ಮತ್ತು ಸ್ಥಳೀಯ ಮಟ್ಟದಲ್ಲಿ ಆವಿಷ್ಕಾರಗಳನ್ನು ಬೆಂಬಲಿಸಲಿವೆ.
ಇದನ್ನೂ ಓದಿ: ದೇಶದಲ್ಲಿ ಹಿಂದು- ಮುಸ್ಲಿಂ ಸಮುದಾಯದವರು ಒಂದಾಗಿ ಸಹಬಾಳ್ವೆ ನಡೆಸಿ: ಸಾಧ್ವಿ ನಿರಂಜನ ಜ್ಯೋತಿ
ಆಸ್ಪತ್ರೆಗಳಲ್ಲಿ ವೈದ್ಯಕೀಯ ಉದ್ದೇಶಕ್ಕೆ ಬಳಸುವ ಆಮ್ಲಜನಕದ ಕೊರತೆಯನ್ನು ಪರಿಹರಿಸಲು, ಬೂಸ್ಟರ್ ಮತ್ತು 50 ಹಾಸಿಗೆಗಳ ಸಾಮರ್ಥ್ಯದ ಪೂರೈಕೆಯೊಂದಿಗೆ ಘಟಕವನ್ನು ಆರಂಭಿಸಲಾಗಿದೆ. ಪ್ರೆಸರ್ ಸ್ವಿಂಗ್ ಅಬ್ಸಾರ್ಪ್ಶನ್ (PSA) ಆಮ್ಲಜನಕ ತಯಾರಕ ಘಟಕವು 50 ಹಾಸಿಗೆಗಳಿಗೆ 93-95% ಶುದ್ಧ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ, ಆಮ್ಲಜನಕ ಸಿಲಿಂಡರ್ ಗಳನ್ನು ಭರ್ತಿ ಮಾಡಲು ಬೂಸ್ಟರ್ ಸಹಕಾರಿಯಾಗುತ್ತದೆ. ಆಸ್ಪತ್ರೆಗಳು ಗಂಭೀರ ಸ್ವರೂಪದಲ್ಲಿ ಅಸ್ವಸ್ಥರಾದ ರೋಗಿಗಳಿಗೆ ಹೆಚ್ಚಿನ ಆತ್ಮ ವಿಶ್ವಾಸದಿಂದ ಚಿಕಿತ್ಸೆ ನೀಡಲು ಈ ಆಮ್ಲಜನಕ ಉತ್ಪಾದನಾ ಘಟಕವು ಸಹಾಯ ಮಾಡುತ್ತದೆ. ಅಲ್ಲದೇ ಭವಿಷ್ಯದ ಅನಿಶ್ಚಿತತೆಗಳಿಗಾಗಿ ಆಸ್ಪತ್ರೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮೂಲಸೌಕರ್ಯವನ್ನು ವಿಸ್ತರಣೆ ಮಾಡುತ್ತದೆ.
ಸಾಂಕ್ರಾಮಿಕದ ವೇಳೆಯಲ್ಲಿ ರಾಯಚೂರಿನ ಮಾನ್ವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ರಕ್ಷಣಾ ಉಪಕರಣಗಳಿಗೆ ಭಾರೀ ಬೇಡಿಕೆ ಬಂದಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲೆಂದು ಈ ಆಮ್ಲಜನಕ ಉತ್ಪಾದನಾ ಘಟಕ ಆರಂಭದ ಉಪಕ್ರಮ ಕೈಗೊಳ್ಳಲಾಗಿತ್ತು. ಈ ಘಟಕವು ಕೇವಲ ಕೋವಿಡ್ ರೋಗಿಗಳಿಗಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಂಭೀರ ಸ್ವರೂಪದ ಆರೈಕೆ ಅಗತ್ಯವಿರುವ ಇತರೆ ರೋಗಿಗಳಿಗೂ ಆಮ್ಲಜನಕವನ್ನು ಪೂರೈಸಲಿದೆ.
ಇದನ್ನೂ ಓದಿ: ಚೆನ್ನು ಹುಮನಾಬಾದಿಗೆ ಪತ್ರಕರ್ತರಿಂದ ಸನ್ಮಾನ
ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಆರಂಭಿಸಿರುವುದರ ಜೊತೆಗೆ ಬೇಯರ್ ಸಂಸ್ಥೆಯು RxDx ಹೆಲ್ತ್ ಕೇರ್ ಸಹಭಾಗಿತ್ವದಲ್ಲಿ ಮೂರು ಟೆಲಿಮೆಡಿಸಿನ್ ಕೇಂದ್ರಗಳನ್ನು ಆರಂಭ ಮಾಡಿದೆ. ಇವುಗಳ ಮೂಲಕ ಸ್ಥಳೀಯ ಸಮುದಾಯಗಳಿಗೆ ಸಂಪೂರ್ಣವಾದ ಆರೋಗ್ಯ ಚಿಕಿತ್ಸಾ ಸೇವೆಯನ್ನು ಒದಗಿಸಲಿದೆ. ಅಲ್ಲದೇ, ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ತರಬೇತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಲಿದೆ.
ಆಮ್ಲಜನಕ ಘಟಕ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ರಾಯಚೂರು ಜಿಲ್ಲಾಧಿಕಾರಿ ಅವಿನಾಶ್ ರಾಜೇಂದ್ರ ಮೆನನ್ ಅವರು, “ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ನಿರ್ಣಾಯಕವಾಗಿವೆ. ಈ ಸಂಸ್ಥೆಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ. ಈ ಗುರಿಯನ್ನು ತಲುಪಲು ಸರ್ಕಾರದೊಂದಿಗೆ ಕೈಜೋಡಿಸುವಲ್ಲಿ ಖಾಸಗಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ ಮತ್ತು ಮಾನ್ವಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸುವುದು, ಆಮ್ಲಜನಕ ಘಟಕ ಆರಂಭ ಹಾಗೂ ಜಿಲ್ಲೆಯಲ್ಲಿ ಟೆಲಿಮೆಡಿಸಿನ್ ಕೇಂದ್ರಗಳನ್ನು ಆರಂಭಿಸಿರುವ ಬೇಯರ್ ನ ಉಪಕ್ರಮವನ್ನು ನಾನು ಸ್ವಾಗತಿಸುತ್ತೇನೆ’’ ಎಂದರು.
ದಕ್ಷಿಣ ಏಷ್ಯಾದ ಬೇಯರ್ ನ ಹಿರಿಯ ಪ್ರತಿನಿಧಿ ಹಾಗೂ ಸಣ್ಣ ಹಿಡುವಳಿದಾರ ಕೃಷಿಯ ಜಾಗತಿಕ ಮುಖ್ಯಸ್ಥ ಡಿ.ನಾರಾಯಣ್ ಅವರು ಮಾತನಾಡಿ, “ಯಾವುದೇ ಸಂದರ್ಭವನ್ನು ಎದುರಿಸುವ ನಿಟ್ಟಿನಲ್ಲಿ ಉತ್ತಮ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳಂತಹ ನಿರ್ಣಾಯಕ ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ಕೆಲಸ ಮಾಡಲು ನಮಗೆ ಸಂತೋಷವಾಗುತ್ತಿದೆ. ಆಮ್ಲಜನಕ ಘಟಕ ಮತ್ತು ಟೆಲಿಮೆಡಿಸಿನ್ ಕೇಂದ್ರವು ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಸರ್ಕಾರದ ದೃಷ್ಟಿಯನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ರಾಯಚೂರು ಜಿಲ್ಲೆಯ ಆರೋಗ್ಯ ಮೂಲಸೌಕರ್ಯಕ್ಕೆ ನಮ್ಮ ಕೊಡುಗೆಯು ಜನರಿಗೆ ಸಮಯೋಚಿತ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಹಾಯ ಮಾಡುತ್ತದೆ ಹಾಗೂ ಸ್ಥಳೀಯ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ’’ ಎಂದು ತಿಳಿಸಿದರು.
ಇದನ್ನೂ ಓದಿ: ತಾಂಡಾಗಳಲ್ಲಿ ನನಗೆ ಮತ ಹಾಕಿಲ್ಲˌ ಆದ್ರೂ ಕೆಲ್ಸ ನಿಲ್ಸಿಲ್ಲ: ಪ್ರಿಯಾಂಕ್ ಖರ್ಗೆ
ಟೆಲಿಮೆಡಿಸಿನ್ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್ ಸಿಗಳು) ಸಹಯೋಗವನ್ನು ಹೊಂದಿರುತ್ತವೆ. ಪ್ರತಿ ಕೇಂದ್ರದಲ್ಲಿ ತರಬೇತಿ ಹೊಂದಿದ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ(ಜಿಎನ್ಎಂ) ಹಾಗೂ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಅವರು ದೈನಂದಿನ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುತ್ತಾರೆ. ಜಿಎನ್ಎಂಗಳು ರೋಗಿಗಳನ್ನು ನೋಂದಣಿ ಮಾಡುತ್ತಾರೆ, ತಪಾಸಣೆ ನಡೆಸಿ ಅವರಿಗೆ ಸಂಬಂಧಿಸಿದ ಕೇಸ್ ಅನ್ನು ನಮೂದಿಸುತ್ತಾರೆ. ನಂತರ ದೂರ ಸಮಾಲೋಚನೆ ಮೂಲಕ ಸಾಮಾನ್ಯ ವೈದ್ಯರಿಗೆ (ಜಿಪಿ) ಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ.
ಈ ತಪಾಸಣೆ ಆಧಾರದಲ್ಲಿ ರೋಗಕ್ಕೆ ಪೂರಕವಾದ ಪ್ರಿಸ್ಕ್ರಿಪ್ಶನ್ ಮತ್ತು ಔಷಧಿಯನ್ನು ನೀಡುತ್ತಾರೆ. ಇದರ ಜೊತೆಗೆ ಅನುಸಾರಣೆ ಯೋಜನೆಯನ್ನು ರೋಗಿಗೆ ವಿವರಿಸಲಾಗುವುದು. ವಿಶೇಷ ತಜ್ಞರ ಅಗತ್ಯ ಬಿದ್ದರೆ ಅವರನ್ನು ಸಂಪರ್ಕಿಸುವ ಕಾರ್ಯವನ್ನು ನರ್ಸ್ ಗಳು ಮಾಡಲಿದ್ದಾರೆ. ದೂರ ಸಮಾಲೋಚನೆಯ ಮೂಲಕ 20 ವಿವಿಧ ವೈದ್ಯಕೀಯ ವಿಶೇಷತೆಗಳನ್ನು ನೀಡಲಾಗುವುದು ಪ್ರತಿಯೊಂದು ಕೇಂದ್ರವು 15-20 ಗ್ರಾಮಗಳ 7500 ದಿಂದ 10,000 ಫಲಾನುಭವಿಗಳಿಗೆ ಆರೋಗ್ಯ ಆರೈಕೆ ಮಾಡುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…