ಸುರಪುರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರ ನೇಮಿಸಲು ಒತ್ತಾಯಿಸಿ ಗ್ರಾಮಸ್ಥರು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗಾಂಧಿವಾದಿ ಹಯ್ಯಾಳಪ್ಪ ಕಡಿಮನಿ ಮಾತನಾಡಿ ಶಾಲೆಯಲ್ಲಿ ನಾಲ್ಕು ನೂರಕ್ಕು ಹೆಚ್ಚು ಮಕ್ಕಳಿದ್ದು ಖಾಯಂ ಶಿಕ್ಷಕರ ಸಂಖ್ಯೆ ಬರೀ ನಾಲ್ಕು ಎಂಬುದು ನೋವಿನ ಸಂಗತಿಯಾಗಿದೆ.ಕೂಡಲೆ ಕನಿಷ್ಟ ಹತ್ತು ಜನ ಶಿಕ್ಷಕರನ್ನು ನೀಡಬೇಕೆಂದು ಒತ್ತಾಯಿಸಿದರು.
ನ್ಯಾಯವಾದಿ ಶರಣು ಅನಕಸುಗೂರ ಮಾತನಾಡಿ,ಶಿಕ್ಷಣ ಇಲಾಖೆ ನಮ್ಮ ಗ್ರಾಮದ ಶಾಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ,ಖಾಯಂ ಶಿಕ್ಷಕರನ್ನು ನೀಡುವದಂತೆ ಅನೇಕ ಬಾರಿ ಮೌಖಿಕವಾಗಿ ವಿನಂತಿಸಿದರು ಇಲಾಖೆ ಸ್ಪಂಧಿಸುತ್ತಿಲ್ಲ ಇದರಿಂದ ಬೇಸತ್ತು ಇಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು ಕೂಡಲೆ ನಿಯಮದಂತೆ ಶಿಕ್ಷಕರನ್ನು ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗಲಿದೆ ಎಂದು ಎಚ್ಚರಿಸಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಯನ್ನು ಶಿಕ್ಷಣ ಸಂಯೋಜಕರ ಮೂಲಕ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಿಕ್ಷಣ ಸಂಯೋಜಕ ಸುಭಾಸ ಕೊಂಡಗುಳಿ ಮಾತನಾಡಿ,ಖಾಯಂ ಶಿಕ್ಷಕರನ್ನು ಸರಕಾರ ನೇಮಿಸಲಿದೆ,ಸದ್ಯ ಶಾಲೆಗೆ ಸುಮಾರು ಎಂಟು ಜನ ಅತಿಥಿ ಶಿಕ್ಷಕರನ್ನು ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಆರ್‌ಸಿ ಷಣ್ಮುಕಪ್ಪ ನುಚ್ಚಿ ಹಾಗು ಗ್ರಾಮಸ್ಥರಾದ ಚಂದ್ರಕಾಂತ ಮ್ಯಾಕಲ್,ಮಲ್ಲಪ್ಪ ಚೌಡೇಶ್ವರಿಹಾಳ,ದಾನಪ್ಪ ಕಡಿಮನಿ,ಹಣಮಂತ್ರಾಯಗೌಡ,ಪುರುಷೋತ್ತಮ ನಾಯಕ,ರಂಗು ನಾಯಕ ಸೇರಿದಂತೆ ಶಾಲಾ ಮಕ್ಕಳು ಮತ್ತಿತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…