ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್ ಹಾಗೂ ಭೀಮಬಾಯಿ ದಂಪತಿಗಳ 14ನೇ ಮಗನಾಗಿ 1891ರ ಏಪ್ರಿಲ್ 14ರಂದು ಜನಿಸಿದರು. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಓದುವುದರಲ್ಲಿ ಅಪಾರ ಆಸಕ್ತಿ, ಚುರುಕು ತನದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅಂಬೇಡ್ಕರ್ ರವರ ಬುದ್ಧಿವಂತಿಕೆ ಮೆಚ್ಚಿಕೊಂಡು ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದ ಬ್ರಾಹ್ಮಣ ಅಧ್ಯಾಪಕರೊಬ್ಬರು ಅಂಬೇಡ್ಕರ್ ಎಂಬ ಮನೆತನದವರು.
ಈ ಅಂಬೇಡ್ಕರ್ ನಾಮಾಂಕಿತ ಆ ಗುರುಗಳ ಉಡುಗೊರೆಯಾಗಿ ಭೀಮರಾವ್‌ಗೆ ಲಭ್ಯವಾಯಿತು. ಅಂಬೇಡ್ಕರ್ ಮುಂಬಯಿ ವಿಶ್ವವಿದ್ಯಾನಿಲಯ ದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. 1952, ಜೂನ್ 15ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್ (ಎಲ್‌ಎಲ್.ಡಿ) ಗೌರವ ಪದವಿ ಪ್ರದಾನ ಮಾಡಿತು. 1953, ಜನವರಿ 12ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್.ಎಲ್.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
ಅಂಬೇಡ್ಕರ್ ಎಂದರೆ ಹೋರಾಟದ ಒಂದು ಶಕ್ತಿ: ಬಸವರಾಜ ಹೆಳವರ
ಭಾರತದಲ್ಲಿ ಜಾತಿ ಪದ್ಧತಿ: ಸ್ಚತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟಮೊದಲ ಪ್ರಕಾಶಿತ ಕೃತಿ. ಭಾರತ ಸರ್ಕಾರ ಅವರಿಗೆ 1989ರಲ್ಲಿ ಭಾರತ ರತ್ನ ನೀಡಿ ಗೌರವಿಸಿತು. ತಮ್ಮ ಕಾರ್ಯ ಸಾಧನೆಯ ಹೋರಾಟದಲ್ಲಿ ಅವರು ತಮ್ಮ ಇಡೀ ಬದುಕನ್ನು ದೀನ ದಲಿತರ ಹಿತ ರಕ್ಷ ಣೆಗಾಗಿ ದುಡಿದರು. *1956 ಡಿಸೆಂಬರ್ 6 ರಂದು ಅವರು ಕೊನೆಯುಸಿರೆಳೆದರು, ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರವಲ್ಲದೆ, ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದ ಭಾರತೀಯರೆಲ್ಲರ ಮನದಲ್ಲಿ ನೆಲೆಯಾಗಿದ್ದಾರೆ.
ವಿಶ್ವ ಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್. ಆಸ್ತಿರಹಿತ ವ್ಯವಸ್ಥೆಯನ್ನು ಅತೀ ಸೂಕ್ಷ್ಮವಾಗಿ ವಿವರಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
- ಕೋಲಂಬಿಯಾ (ವಿದೇಶಿ ) ವಿಶ್ವವಿದ್ಯಾಲಯಗಳ ಪ್ರವೇಶ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್.
- ಪ್ರಾಂತೀಯ ಹಣಕಾಸು ವ್ಯವಸ್ಥೆಯನ್ನು ವಿಶ್ಲೀಷಿಸಿರುವ ಪ್ರಥಮ ಭಾರತೀಯ ಹಣಕಾಸು ಅರ್ಥವಿಜ್ಞಾನಿ ನಮ್ಮ ಡಾ.ಬಿ.ಆರ್.ಅಂಬೇಡ್ಕರ್.
- ಭಾರತದ ರೂಪಾಯಿ ಸಮಸ್ಯೆಯ ನಿವಾರಣೆಯ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್.
- ಫೌಲರ ಸಮಿತಿಯ ಸೂತ್ರವನ್ನು ತಿರಸ್ಕರಿಸಿ ಅದಕ್ಕೆ ಬದಲಾಗಿ ಅವರದೇ ಆದ ಸೂತ್ರವನ್ನು ಸೂಚಿಸಿದ್ದಾರೆ .ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
- ಶ್ರಮ ಶೋಷಣೆ ಮತ್ತು ತಾರತಮ್ಯ ಕುರಿತು ಜಗತ್ತಿಗೆ ಹೊಸ ಸಿದ್ಧಾಂತ ನೀಡಿದವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
ಜಗತ್ತಿನ ಇತಿಹಾಸ ಸಂದರ್ಭದಲ್ಲಿ ಗುಲಾಮಗಿರಿಯ ಪದ್ಧತಿ ಸಮಗ್ರವಾಗಿ ಅಧ್ಯಯನ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್. - ಪಾಶ್ಚಿಮಾತ್ಯ ಗುಲಾಮ ಪದ್ಧತಿ ಮತ್ತು ಅಸ್ಪ್ರೃಶ್ಯತೆಗಳೆರಡರ ನಡುವೆ ಮೂಲಭೂತವಾದ ವ್ಯತ್ಯಾಸ ಗುರುತಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
- ಬ್ರಿಟಿಷ್ ಆಡಳಿತದಲ್ಲಿ ಕಾರ್ಮಿಕ ಮಂತ್ರಿಯಾಗಿ ಏಕ ರೀತಿಯ ಶಾಸನ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.*
- ಬ್ರಿಟಿಷ್ ವೈಸ್ ರಾಯ್ ಕಾರ್ಮಿಕರ ಕಾರ್ಯ ಕಾರಿ ಮಂಡಳಿ ಪ್ರತಿನಿಧಿಯಾಗಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್.
- ನೀರಾವರಿ ಮತ್ತು ವಿದ್ಯುತ್ ಯೋಜನೆಗಳ ರೂವಾರಿ ಡಾ.ಬಿ.ಆರ್.ಅಂಬೇಡ್ಕರ್.*
- ಬಿಹಾರ್ ನ ದಾಮೋದರ ಕಣಿವೆಗೆ ಶಾಶ್ವತ ಯೋಜನೆ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
- ಪ್ರಥಮ ಅಸ್ಪೃಶ್ಯ ತಲೆಮಾರಿನ ಪ್ರಪ್ರಥಮ ವಿದ್ಯಾವಂತರು ಡಾ.ಬಿ.ಆರ್.ಅಂಬೇಡ್ಕರ್.
- ತುಳಿತಕ್ಕೊಳಪಟ್ಟ ಸಮುದಾಯದಲ್ಲೆ ಪ್ರಥಮವಾಗಿ ಮೆಟ್ರಿಕ್ಯೊಲೇಷನ್ ಪರೀಕ್ಷೆ ಪಾಸಾದವರು ಡಾ.ಬಿ.ಆರ್.ಅಂಬೇಡ್ಕರ್.
- ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಮಾನವ ವಿರೋಧಿ ಮನುಸ್ಮೃತಿ ಗ್ರಂಥವನ್ನು ಪ್ರಪ್ರಥಮವಾಗಿ ಬಹಿರಂಗವಾಗಿ ಸುಟ್ಟವರು ಡಾ.ಬಿ.ಆರ್.ಅಂಬೇಡ್ಕರ್.
- ದಕ್ಷಿಣ ಏಷ್ಯಾ ಖಂಡದಲ್ಲಿ ಸಮಾಜ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಪ್ರಪ್ರಥಮ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್.
- ದಕ್ಷಿಣ ಏಷ್ಯಾ ಖಂಡದಲ್ಲಿ ಅರ್ಥಶಾಸ್ತ್ರದಲ್ಲಿ ಡಿ.ಎಸ್ಸಿ. ಪದವಿ ಪಡೆದ ಪ್ರಪ್ರಥಮ ಭಾರತೀಯ ನೀರಿಗಾಗಿ (ಚೌಡರ್ ಕೆರೆ ) ಯ ಪ್ರಪ್ರಥಮವಾಗಿ ಧ್ವನಿ ಎತ್ತಿದವರು(1927) ಡಾ.ಬಿ.ಆರ್.ಅಂಬೇಡ್ಕರ್.
- 1930-31-32 ರಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಹಾಜರಿದ್ದು ಸದಸ್ಯರ ಪೈಕಿ ಡಿ.ಎಸ್ಸಿ.ಪದವಿ ಪಡೆದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.
- ಭಾರತದಲ್ಲಿ ರಾಜಕೀಯ ಕ್ರಾಂತಿಯ ಪ್ರಥಮ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್.
- ಭಾರತದ ಸಂವಿಧಾನ ರಚನಾ ಸಭೆಯ ಪ್ರಪ್ರಥಮ ಅಧ್ಯಕ್ಷ ಹಾಗೂ ಸಂವಿಧಾನ ಶಿಲ್ಪಿ ಎಂಬ ಖ್ಯಾತಿಗೆ ಹೆಸರಾದವರು ಡಾ.ಬಿ.ಆರ್.ಅಂಬೇಡ್ಕರ್.
- ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಮಂತ್ರಿ ಡಾ.ಬಿ.ಆರ್.ಅಂಬೇಡ್ಕರ್.
- ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಆಸ್ತಿ ವಿಚಾರದಲ್ಲಿ ಸಂಸತ್ ನಲ್ಲಿ ಪ್ರಫ್ರಥಮವಾಗಿ ಧ್ವನಿ ಎತ್ತಿದವರು(1951) ಡಾ.ಬಿ.ಆರ್.ಅಂಬೇಡ್ಕರ್.
- ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಕಾರ್ಮಿಕರನ್ನು ಕುರಿತು ಧ್ವನಿಯೇರಿಸಿದ ಮೊದಲ ವ್ಯಕ್ತಿ (ಕಾರ್ಮಿಕ ಕ್ರಾಂತಿಯ ಹರಿಕಾರ) (1942-46) ಡಾ.ಬಿ.ಆರ್.ಅಂಬೇಡ್ಕರ್.
- ಕಾಂಗ್ರೆಸ್ ಮತ್ತು ಗಾಂಧೀಜಿಯನ್ನು ಎದುರುಹಾಕಿಕೊಂಡ ಪ್ರಥಮ ನಾಗರಿಕ ಹಕ್ಕುಗಳು ಹರಿಕಾರ ಡಾ.ಬಿ.ಆರ್ .ಅಂಬೇಡ್ಕರ್.
- ಮೂರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ಪ್ರಪ್ರಥಮ ಶೋಷಿತ್ ಸಮುದಾಯದ ನಾಯಕ ಡಾ.ಬಿ.ಆರ್.ಅಂಬೇಡ್ಕರ್.*
- 563 ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಬೇಕೆಂದು ಮೊದಲು ಧ್ವನಿ ಎತ್ತಿದವರು (16 ಸೆಪ್ಟೆಂಬರ್ 1921) ಡಾ.ಬಿ.ಆರ್.ಅಂಬೇಡ್ಕರ್.*
- ಲಂಡನ್ ಮ್ಯೊಸಿಯಂನಲ್ಲಿ ಕಾರ್ಲ್ ಮಾಕ್ಸ್ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಶೇಖರಿಸಿಡಲಾಗಿದೆ.*
- ಭಾರತದ ರಾಷ್ಟ್ರೀಯ ಧ್ವಜದಲ್ಲಿ ಅಶೋಕ ಚಕ್ರವನ್ನು ಮತ್ತು ರಾಷ್ಟ್ರೀಯ ಚಿಹ್ನೆಯಾಗಿ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹವನ್ನು ಪರಿಗಣಿಸಿಸುವಂತೆ ಪ್ರಭಾವ ಬೀರಿದ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.*
- -ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವವನಂತಾದೆ.
- -ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ.
- -ಕತ್ತಲೆ ಕೂಪದಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ.
- -ಶಾಲೆಗೆ ಸೇರಲು ಒದ್ದಾಡಿದ ನೀನೆ ಪಠ್ಯವಾದೆ, ವಿಶ್ವ ವಿದ್ಯಾಲಯವಾದೆ.
- -ಸಂಕೋಲೆಗಳ ಬಂಧಿಯಾಗಿದ್ದ ನೀನೆ ಸ್ವಾತಂತ್ರ್ಯ ದೇವರಂತಾದೆ.
- ಅಸ್ತಿತ್ವ ಇಲ್ಲದವನಾಗಿದ್ದ ನೀನೆ ಬೃಹತ್ ದೇಶದ ಸಂವಿಧಾನದ ಕರ್ತನಾದೆ.
- ಇದೋ ಡಾ. ಬಾಬಸಾಹೇಬರೇ ನಿಮ್ಮ ಪಾದಕ್ಕೆ ನನ್ನ ಕೋಟಿ ಕೋಟಿ ನಮನಗಳು,:-
- ಸಮಸ್ತ ನಾಡಿನ ಜನತೆಗೆ ನನ್ನ ಆದರ್ಶ ಪುರುಷ, ವಿಶ್ವ ಕಂಡ ಮಹಾ ಮಾನವತವಾದಿ , ಸಂವಿಧಾನ ಶಿಲ್ಪಿ, ವಿಶ್ವ ರತ್ನ, ಭಾರತದ ಭಾಗ್ಯವಿದಾತ, ಬಾಬಾ ಸಾಹೇಬ್ “ಡಾ. ಬಿ.ಆರ್.ಅಂಬೇಡ್ಕರ್ ” ಅವರ 131ನೇ ಜಯಂತೋತ್ಸವದ ಹಾರ್ಧಿಕ ಶುಭಾಶಯಗಳು.
ಸಂಗ್ರಹ:- ರಾಜು ವ್ಹಿ ಮುದ್ದಡಗಿ. ಜೇವರ್ಗಿ