ಅಂಬೇಡ್ಕರ್ ಎಂದರೆ ಹೋರಾಟದ ಒಂದು ಶಕ್ತಿ: ಬಸವರಾಜ ಹೆಳವರ

0
93
  • ಪಿ.ಎಪ್ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
  • ಅಂಬೇಡ್ಕರ್ ಎಂದರೆ ಹೋರಾಟದ ಒಂದು ಶಕ್ತಿ – ಬಸವರಾಜ ಹೆಳವರ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ  ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರ ಮೂಲಕ‌ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ: ಬಿಜೆಪಿ ಕಮಿಷನ್ ಸರಕಾರ ನಡೆಸುತ್ತಿದೆ: ಶರಣ ಪ್ರಕಾಶ ಪಾಟೀಲ್

Contact Your\'s Advertisement; 9902492681

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಸವರಾಜ ಹೆಳವರ ಅಂಬೇಡ್ಕರ್ ಎಂದರೆ ಹೋರಾಟದ ಒಂದು ಶಕ್ತಿ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳಾ ಮೀಸಲಾತಿಗಾಗಿ ಸಚಿವ ಸ್ಥಾನ ತ್ಯಜಿಸಿ ಸಂಪುಟದಿಂದ ಹೋರ ನಡೆದ ಮಹಾನ್ ನಾಯಕ. ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ಎಂದರು.

ಇದನ್ನೂ ಓದಿ: ಫೀರದೋಸ್ ಕಾಲೋನಿ ವೇಲ್ಫರ್ ಸೊಸೈಟಿಯಿಂದ ಶರಣ ಪ್ರಕಾಶ ಪಾಟೀಲ್ ಗೆ ಸನ್ಮಾನ

ಕಾರ್ಯಕ್ರಮದಲ್ಲಿ ಶಿವರಾಜ, ವಿಠ್ಠಲ ಮರಗುತ್ತಿ, ಬಸವರಾಜ ಹೆಳವರ ಯಾಳಗಿ, ಮನೀಶಾ ಗಡ್ಡಿಪರ್ತಿ, ಕೀರಣಕುಮಾರ, ಕಾಂತಪ್ಪ, ರಾವುಪ್ ಪಟೇಲ, ಶಿವಶರಣಪ್ಪ ಶಿವಕೇರಿ, ಮಲ್ಲಿಕಾರ್ಜುನ, ಪಾರ್ವತಿಬಾಯಿ, ರಮೇಶ ಮಾಂಗ, ಪ್ರವೀಣ್ ತಿರುವಂಡಿಮಠ, ಸುಗಳಾಬಾಯಿ, ಮೈತ್ರಾಬಾಯಿ, ಕೇಶವ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here