ಕಲಬುರಗಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತ ಜಿಲ್ಲಾ ಯುವ ಘಟಕದ ವತಿಯಿಂದ ಪರಿಷತ್ತಿನ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕನ್ನಡ ನಾಡಿನ ಶರಣರು ಮೊದಲು ನಡೆದು ನಂತರ ಅದರಂತೆ ನುಡಿದು ತಮ್ಮದೇ ಆದ ಶೈಲಿಯಲ್ಲಿ ಭಾಷೆಯಿಂದ ಬರೆದಿಟ್ಟ ಅಪಾರ ಶರಣ/ವಚನ ಸಾಹಿತ್ಯ ಹರಿದು-ಹಂಚಿ ಹೋಗಿದ್ದು, ಮತ್ತೆ ಅದನ್ನು ನ್ಯಾಯವಾದಿಗಳಾಗಿದ್ದ ವಚನ ಪಿತಾಮಹ ಡಾ. ಪು.ಗು.ಹಳಕಟ್ಟಿ ರವರ ಸಂಶೋಧನೆ ಮತ್ತು ಸಂರಕ್ಷಣೆಯಿಂದ ಉಳಿದ ಸಾಹಿತ್ಯವೇ ಶರಣ/ವಚನ ಸಾಹಿತ್ಯ.
ನ್ಯಾಯವಾದಿಗಳಾದ ಡಾ. ಪ.ಗು.ಹಳ್ಳಕಟ್ಟಿ ರವರು ಇಡೀ ತಮ್ಮ ಬದುಕೇ ಶರಣ/ವಚನ ಸಾಹಿತ್ಯದ ಸಂಶೋಧನೆ ಮತ್ತು ಸಂರಕ್ಷಣೆ ತ್ಯಾಗ ಮಾಡಿದ ಮಹಾನ ವ್ಯಕ್ತಿಯ ವೃತ್ತಿ ಬಳಗದವರಾದ ನಾವು ಅವರ ಸಂರಕ್ಷಣೆ ಮಾಡಿದ ಸಾಹಿತ್ಯ ಜನಸಾಮಾನ್ಯರಿಗೆ ಮುಟ್ಟುವಂತೆ ಪ್ರಚಾರಪಡಿಸುವ ಕಾರ್ಯ ನಡೆಯಲಿ ಎಂಬ ಆಶಾಭಾವನೆಯಿಂದ ಕರ್ನಾಟಕ ಸ್ಟೇಟ್ ಬಾರ ಕೌನ್ಸಿಲ್ ಸದಸ್ಯ ಹಾಗೂ ನ್ಯಾಯವಾದಿಗಳಾದ ಕಾಶಿನಾಥ ಮೋತಕಪಲ್ಲಿ ಹಾಗು ಕಲಬುರಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅರುಣಕುಮಾರ ಕಿಣ್ಣಿ ಅವರಿಗೆ ಪರಿಷತ್ತಿನ ಸದಸ್ಯತ್ವ ಪಡೆಯಲು ಶರಣ ಸಾಹಿತ್ಯ ಪರಿಷತ್ತ ಕಲಬುರಗಿ ಜಿಲ್ಲಾ ಯುವ ಘಟಕದ ಸಂಚಾಲಕರಾದ ಶಿವರಾಜ ಅಂಡಗಿ ರವರು ಅಭಿಯಾನದ ಕರ ಪತ್ರದೊಂದಿಗೆ ವಿನಂತಿ ಮಾಡಿಕೊಂಡರು.
ಅಭಿಯಾನದಲ್ಲಿ ನ್ಯಾಯವಾದಿಗಳಾದ ಕಲ್ಯಾಣಪ್ಪ ವಾಗ್ದಾರೆ, ಶರಣು ಪಸ್ತಾಪೂರ, ಗಿರಿರಾಜ ಶಿರವಾಳ, ಸಂತೋಷಗೌಡ ಪಾಟೀಲ ಕಲ್ಲೂರ, ಶಂಕರ ಕಣ್ಣಿ ಮನೆ, ಸುಧೀರ ಗಾದಗೆ, ರಾಜಣ್ಣ ಬಿರಾದಾರ ಹಾಗೂ ರಾಜು ಕೋಸ್ಟಿ, ಡಾ.ಸಾದಿಖ ಶಹಾ ಉಪಸ್ಥಿತರಿದ್ದರು. ನಂತರ ಮಾತನಾಡುತ್ತಾ ಕನ್ನಡ ನಾಡಿನ ಚರಿತ್ರೆಯಲ್ಲಿ ವಚನಕಾರರು ನಡೆಸಿದ ಆ ಕ್ರಿಯಾತ್ಮಕ ವಚನ ಕ್ರಾಂತಿ ಒಂದು ಅಪೂರ್ವ ಬಂಡಾಯದ ಘಟ್ಟ. ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ವಿವಿಧ ಕಾಯಕ ಶರಣರೆಲ್ಲರು ಕಾಲ-ಕಾಲಾಂತರದಿಂದ ಪ್ರಚಲಿತದಲ್ಲಿದ್ದ ಮಾನವ ವಿರೋಧಿ ಮತ್ತು ಸಮಾಜ ವಿರೋಧ ವಿದ್ಯಮಾನಗಳನ್ನು ಪ್ರಶ್ನಿಸಿ ಒಂದು ಹೊಸ ಸಾಮಾಜಿಕ ಪ್ರಗತಿಯ ಆಶಯಗಳಿಗೆ ತಮ್ಮ ಬದುಕು ಮತ್ತು ಅಭಿವ್ಯಕ್ತಿಯ ಮೂಲಕ ಚಾಲನೆಕೊಟ್ಟ ಶರಣ ಸಾಹಿತ್ಯ ಓದುವುದು, ಅರ್ಥಮಾಡಿಕೊಳ್ಳುವುದು ಅಗತ್ಯ, ಹಿಂದೆಂದಿಗಿಂತಲೂ ಈಗ ಹೆಚ್ಚಾಗಿರುವ ಕಾರಣ ನಾವು ಮತ್ತೆ ಶರಣ/ವಚನ ಸಾಹಿತ್ಯ ಆಶ್ರಯಕ್ಕೆ ಹಿಂದಿರುಗಿ ಹೋಗುವ ಅನಿವಾರ್ಯ ಮತ್ತು ಅಗತ್ಯವಿದೆ.
ಹಾಗಾಗಿ ಬನ್ನಿ ಶರಣ ಬಂಧುಗಳೇ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಮಾಡುವ ಮೂಲಕ ಶರಣರ ಉದಾತ ಆಶಯಗಳಿಗೆ ನೀರುಣ್ಣಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶರಣ/ವಚನ ಸಾಹಿತ್ಯ ಉಳಿಸಿ ಬೆಳೆಸಿ ಪ್ರಚಾರ ಪಡಿಸುವ ಈ ಮಹತ್ವದ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಪರಿಷತ್ತಿನ ಸದಸ್ಯತ್ವ ಅಭಿಯಾನದ ನೇತೃತ್ವ ವಹಿಸಿದ ಶರಣ ಸಾಹಿತ್ಯ ಪರಿಷತ್ತ ಕಲಬುರಗಿ ಜಿಲ್ಲಾ ಯುವ ಘಟಕದ ಸಂಚಾಲಕರಾದ ನಾನು ಶಿವರಾಜ ಅಂಡಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ಇಂತಹ ಸಶಕ್ತ ಶರಣ/ವಚನ ಸಾಹಿತ್ಯದ ವಿಶ್ವವ್ಯಾಪಕತೆ ಹಾಗು ಅದರ ನಿರಂತರ ಪ್ರಸ್ತುತ್ತೆಯನ್ನು ಇಡೀ ಜಗತ್ತಿನ ಸಮಾಜಕ್ಕೆ ತಿಳಿಸಿಕೊಡುವ ಹಾಗು ಪ್ರಸಾರಿಸುವ ಉದ್ದೇಶದಿಂದಲೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿತವಾಗಿದೆ.
ಪರಿಷತ್ತಿನ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಲಬುರಗಿ ಜಿಲ್ಲೆಯ ತಮ್ಮ ಕ್ರಿಯಾಶೀಲತೆ ಮೂಲಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಶ್ರೀ ಅಪ್ಪಾರಾವ ಅಕ್ಕೋಣಿ ಆಯ್ಕೆಯಾದ್ದುದು ನಮಗೆ ಹೆಮ್ಮೆಯ ವಿಷಯ. ಈಗ ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಪ್ರೊ.ಕುಪೇಂದ್ರ ಪಾಟೀಲ ಅವರು ಸಾಹಿತ್ಯ ಸೇವೆಯನ್ನು ಮುಂದುವರೆಸಿದ್ದಾರೆ. ಹಾಗಾಗಿ ಕಲಬುರಗಿ ಜಿಲ್ಲೆಯಿಂದ ಹೆಚ್ಚು-ಹೆಚ್ಚು ಸದಸ್ಯತ್ವ ಆಗಬೇಕೆಂಬ ಉದ್ದೇಶದಿಂದಲೇ ಈ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಿವರಾಜ ಅಂಡಗಿ ತಿಳಿಸಿದ್ದಾರೆ.
ಅಭಿಯಾನದಲ್ಲೇ ಹಿರಿಯ ನ್ಯಾಯವಾದಿಗಳಾದ ಕಾಶಿನಾಥ ಮೋತಕಪಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗು ನ್ಯಾಯವಾದಿಗಳಾದ ರಮೇಶ ಮರಗೋಳ, ಕಲ್ಯಾಣಪ್ಪ ವಾಗ್ದರೆ, ಬಿ.ಎನ್.ಪಾಟೀಲ, ವಿನೋದಕುಮಾರ ಜನೇವರಿ ಸದಸ್ಯತ್ವ ಪಡೆದುಕೊಂಡರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…