ಬಿಸಿ ಬಿಸಿ ಸುದ್ದಿ

ಸುಖ ಶಾಂತಿ ನೆಮ್ಮದಿ ಪಡೆಯುವ ವಸ್ತುಗಳಲ್ಲ: ಅರವಿಂದ ಶಾಸ್ತ್ರೀ

ಕಲಬುರಗಿ: ಸುಖ ಶಾಂತಿ ನೆಮ್ಮದಿ ಪಡೆಯುವ ವಸ್ತುಗಳಲ್ಲ, ನಾವು ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ತಾನಾಗಿಯೇ ಸಿಗುತ್ತವೆ ಎಂದು ಪ್ರವಚನಗಾರ ಅರವಿಂದ ಶಾಸ್ತ್ರೀ ಭೂಪಾಲ ತೆಗನೂರ ಹೇಳಿದರು.

ನಗರದ ಭವಾನಿನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ 59ನೇ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾ ಮಾನವ ಜನ್ಮ ವ್ಯರ್ಥವಾಗಿ ಕಳೆಯದೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸಾರ್ಥಕಗೊಳಿಸಿಕೊಳ್ಳಬೇಕು. ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದು ಮಹತ್ವವಲ್ಲ ಬದುಕಿದ್ದಷ್ಟು ದಿನವು ಒಳ್ಳೆಯ ಕಾರ್ಯಗಳೇ ನಮ್ಮ ಗಣನೆಗೆ ಬರುತ್ತವೆ. ಇಂದಿನ ದಿನಮಾನಗಳಲ್ಲಿ ಮನುಷ್ಯ ಒತ್ತಡದ ಜೀವನ ಸಾಗಿಸುತ್ತಿದ್ದಾನೆ. ಕ್ಷಣಿಕ ಸುಖದ ಬೆನ್ನು ಹತ್ತಿ ಅಶಾಂತಿಯ ಜೀವನ ಸಾಗಿಸುತ್ತಿದ್ದಾನೆ ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಹಾಗೂ ಗಣಕಯಂತ್ರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀಮತಿ ಮಂಜುಳಾ ಎ. ಬಿರಾದಾರ ಅವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಮಕ್ಕಳನ್ನು ಉತ್ತಮ ಸಂಸ್ಕಾರದಿಂದ ಬೆಳೆಸಿ ಉತ್ತಮ ನಾಗರಿಕರನ್ನಾಗಿ ಮಾಡುವುದು ಪಾಲಕರ ಕರ್ತವ್ಯವಾಗಿದೆ. ಎಲ್ಲ ಸ್ತ್ರೀಯರು ಕುಟುಂಬದ ಹಿರಿಯರಿಗೆ ಗೌರವ ಕೊಟ್ಟು ಅವಿಭಕ್ತ ಕುಟುಂಬಕ್ಕೆ ಒತ್ತು ಕೊಟ್ಟು ಸಮೃದ್ಧ ಸಮಾಜ ಕಟ್ಟಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಸ್ವ. ಗುರುಪಾದಲಿಂಗ ಮಹಾಶಿವಯೋಗಿಗಳಿಗೆ ಶ್ರೀಮಠದ ಭಕ್ತರ ವತಿಯಿಂದ ಗುರುವಂದನಾ ಸಲ್ಲಿಸಲಾಯಿತು.

ಈ ಭಾಗದ ಸಂಗೀತ ಕಲಾವಿದರಾದ ಶ್ರೀಕಾಂತ ಜೇವರ್ಗಿ ತೆಲ್ಲೂರ ಪ್ರಾರ್ಥಿಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರ ನಿರೂಪಿಸಿದರು, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗಮೇಶ ಹೂಗಾರ ಸ್ವಾಗತಿಸಿದರು, ಉಪನ್ಯಾಸಕ ಪ್ರಕಾಶ ರೋಳೆ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯಾ ಶಾಸ್ತ್ರಿ, ಶಿವಕುಮಾರ ಗಣಜಲಖೇಡ, ಜಗನ್ನಾಥ ಸಜ್ಜನಶೆಟ್ಟಿ, ಸಂಗೀತ ಶಿಕ್ಷಕರಾದ ಶರಣಯ್ಯ ಸ್ವಾಮಿ, ವೀರೆಶ ಬಿರಾದಾರ ಉಪಳಾಂವ, ನಾಗರಾಜ ವೆಂಕಟಬೇನೂರ, ರವಿ ಕುರಕೋಟಿ, ವೈಜನಾಥ ನಂದ್ಯಾಳ, ಶಿವಯ್ಯ ಪತ್ರಿ, ಬಸವರಾಜ ಜಿ. ಪಾಟೀಲ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago