ಬಿಸಿ ಬಿಸಿ ಸುದ್ದಿ

ವೀರ ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ

ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು. ಸಮಾರಂಭದ ದಿವ್ಯ ಸನ್ನಿಧಾನವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಅಕ್ಕಮಹಾದೇವಿ ಜಗತ್ತು ಕಂಡ ಮಹಾನ್ ವೈರಾಗ್ಯ ನಿಧಿ. ಬಸವಾದಿ ಶರಣರ ಸಂಕುಲದಲ್ಲಿ ಅನುಭಾವದ ಎತ್ತರವನ್ನು ಏರಿದ ಮಹಾನುಭಾವಿ. ಇವರ ಜೀವನ ವ್ಯಕ್ತಿತ್ವ ಇಡೀ ಸ್ತ್ರೀಕುಲಕ್ಕೆ ಮಾದರಿಯಾಗಿದೆ. ಅದಕ್ಕಾಗಿಯೆ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅಕ್ಕಮಹಾದೇವಿ ಹೆಸರಿನ ಮೇಲೆ ಶಾಲೆ ಮತ್ತು ಕಾಲೇಜುಗಳು ಪ್ರಾರಂಭಿಸಿದರು.

ಇದನ್ನೂ ಓದಿ: ಹೊನ್ನ ಕಿರಣಗಿಯಲ್ಲಿ ಜಂಗಮ ವಟುಗಳಿಗೆ ಹದಿನಾಲ್ಕನೇ ವರ್ಷದ ಸಂಸ್ಕಾರ ಶಿಬಿರ

ಅಕ್ಕಮಹಾದೇವಿಯವರ ಐಕ್ಯಸ್ಥಲವಾಗಿರುವ ಕದಳಿ ವನದಲ್ಲಿ ಅವರ ಮೂರ್ತಿಯನ್ನು ಸ್ಥಾಪನೆ ಮಾಡಿದರು. ಮಹಿಳೆಯರ ಸರ್ವಾಂಗೀಣ ಅಭಿವೃಧ್ಧಿಗಾಗಿ ಅಕ್ಕನ ಬಳಗವನ್ನು ಕಟ್ಟಿದರು. ಅಕ್ಕನ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ನಮ್ಮ ಜೀವನ ಸುಖಿ ಮತ್ತು ಸಮಾಧಾನಿ ಮಾಡಿಕೊಳ್ಳಬೇಕು ಎಂದು ನುಡಿದರು.

ಸಮಾರಂಭದ ಉದ್ಘಾಟನೆಯನ್ನು ಭಾಲ್ಕಿ ತಹಸೀಲ್ದಾರರಾದ ಶರಣೆ ಕೀರ್ತಿ ಚಾಲಕ ಅವರು ನೇರವೇರಿಸಿ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ ಧೀರ ವೀರ ಶರಣೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸ್ತ್ರೀಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಿದರು. ಆ ಒಂದು ಚಳುವಳಿಯಲ್ಲಿ ಅಕ್ಕಮಹಾದೇವಿ ಒಬ್ಬ ಆದರ್ಶ ಮಹಿಳೆಯೆಂದೇ ಹೇಳಬೇಕು. ಅಧ್ಯಕ್ಷತೆಯನ್ನು ಶರಣೆ ಅಶ್ವಿನಿ ಶರಣು ಅಷ್ಟೂರೆ ಇವರು ವಹಿಸಿ ಅಕ್ಕಮಹಾದೇವಿಯ ವಚನಗಳನ್ನು ನಮಗೆ ಬದುಕುವ ಕಲೆಯನ್ನು ತೋರಿಸುತ್ತವೆ ಎಂದು ನುಡಿದರು.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಬೀ ಟೀಮ್ ಎಂಬ ಆರೋಪಕ್ಕೆ ಹೆಚ್ಡಿಕೆ ಪಲಟ್ ವಾರ್

ಡಾ.ದೇವಕಿ ಡಾ.ಅಶೋಕ ನಾಗೂರೆ ಇವರು ತಮ್ಮ ಉಪನ್ಯಾಸದಲ್ಲಿ ಅಕ್ಕಮಹಾದೇವಿ ತಾಯಿಯವರ ಸಮಗ್ರ ಜೀವನ ಮತ್ತು ಸಾಧನೆ ವಿವರವಾಗಿ ತಿಳಿಸಿದರು. ಅವರ ವಚನಗಳಲ್ಲಿ ಅಡಗಿರುವ ಸಂದೇಶವನ್ನು ಮನಮುಟ್ಟುವ ಹಾಗೆ ಹೇಳಿದರು. ಮುಖ್ಯ ಅತಿಥಿಗಳಾಗಿ ಪೂಜ್ಯ ಶ್ರೀ ಟಿ.ಎಂ.ಪಂಚಾಕ್ಷರಿ ಸ್ವಾಮಿಗಳು ಉಪಸ್ಥಿತರಿದ್ದರು.

ಸುಶೀಲಾಬಾಯಿ ಕಾಶ್ಪಪ ಖಂಡ್ರೆ ಬಸವಗುರುಪೂಜೆ ನೆರವೇರಸಿದರು. ಶರಣೆ ಚಂದ್ರಕಲಾ ಪ್ರಭು ಡಿಗ್ಗೆ ಸ್ವಾಗತಿಸಿದರು. ಅಕ್ಕನಬಳಗದ ತಾಯಂದಿರಿಂದ ತೊಟ್ಟಿಲು ಕಾರ್ಯಕ್ರಮ ನೆರವೇರಿತು. ತೊಟ್ಟಿಲು ಗೀತೆಯನ್ನು ಮಲ್ಲಮ್ಮ ಆರ್.ಪಾಟೀಲ ಹಾಡಿದರು. ಸುರೇಖಾ ಬೇಲೂರೆ ವಚನ ಸಂಗೀತ ನಡೆಸಿಕೊಟ್ಟರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಶರಣು ಸಮರ್ಪಣೆ ಮಾಡಿದರು. ಸವಿತಾ ಭೂರೆ ನಿರೂಪಿಸಿದರು.

ಇದನ್ನೂ ಓದಿ:ರಸ್ತೆ ಅಭಿವೃದ್ಧಿಯ ಧೂಳು: ಎಐಡಿವೈಒ ಆಕ್ರೋಶ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago