ಬಿಸಿ ಬಿಸಿ ಸುದ್ದಿ

ಯಾತ್ರೆಯ ಬಳಿಕ ಚುನಾವಣೆ ಅಭ್ಯರ್ಥಿಯ ಘೋಷಣೆ

ಅಭ್ಯರ್ಥಿ ಘೋಷಣೆ: ಜಲ ಯಾತ್ರೆಯ ಬಳಿಕ ರಾಜ್ಯದ ಮಾಜಿ ಸಿಎಂ, ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರು ಆಗಮಿಸಲಿದ್ದು, ಈ ವೇಳೆ ಆಳಂದ ವಿಧಾನ ಸಭಾ ಕ್ಷೇತ್ರದ ಮುಂಬರುವ ಚುನಾವಣೆಯ ಅಭ್ಯರ್ಥಿ ಘಷಣೆಯನ್ನು ಕೈಗೊಳ್ಳಲಿದ್ದಾರೆ. ಸದ್ಯಕ್ಕೆ ನಾನೂ ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿದ್ದು, ಪಕ್ಷದ ವರಿಷ್ಠರು ಕೊಟ್ಟಕೆಲಸವನ್ನು ನಿರ್ವಹಿಸಿ ಪಕ್ಷವನ್ನು ಸಂಘಟಿಸಿ ಜನಪರ ಕಾರ್ಯದಲ್ಲಿ ತೊಡಗುವೆ. ಮಹೇಶ್ವರಿ ವಾಲಿ ಜೆಡಿಎಸ್ ಮುಖಂಡರು.

ಆಳಂದ: ಜೆಡಿಎಸ್ ರಾಜ್ಯ ಘಟಕವು ರಾಜ್ಯದಾದ್ಯಂತ ಆರಂಭಿಸಿದ ಜನತಾ ಜಲಧಾರೆ ಯಾತ್ರೆಯು ಏ. ೧೯ರಂದು ಆಳಂದದ ಅಮರ್ಜಾ ಅಣೆಕಟ್ಟೆ ಆಗಮಿಸಲಿದ್ದು, ಈ ಕುರಿತು ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರಾದ ಮಹೇಶ್ವರಿ ವಾಲಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಚನ ಜಾತ್ರೆ-೨೦೨೨ ರಲ್ಲಿ ವಿವಿಧ ಸಾಧಕರಿಗೆ ಗೌರವ ಸನ್ಮಾನ

ಪಟ್ಟಣದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಕುಮಾರಣ್ಣನವರ ನಿರ್ದೇಶನದ ಮೇರೆಗೆ ನನ್ನ ಊರಿನ ಋಣ ತೀರಿಸುವುದಕ್ಕಾಗಿ ಆಳಂದಕ್ಕೆ ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಜನಪರ ಸೇವೆ ಆರಂಭಿಸಿದ್ದೇನೆ ಈ ನಿಟ್ಟಿನಲ್ಲಿ ಆಗಮಿಸುವ ಜಲಧಾರೆ ಯಾತ್ರೆಗೆ ಸ್ವಾಗತಿಸುವ ಮೂಲಕ ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಜನರ ಸಹಕಾರವು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಅಮರ್ಜಾ ಅಣೆಕಟ್ಟೆಯ ಹಲವು ದಶಕಗಳು ಕಳೆದರು ರೈತರ ಜಮೀನಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ರೈತರ ಜಮೀನಿಗೆ ಕಾಲುವೆ ಮೂಲಕ ನೀರು ಒದಗಿಸಬೇಕು. ವಿತರಣಾ ಕಾಲುವೆಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಈ ನೀರನ ಸದ್ಭಳಕೆ ಮಾಡಿ ತಾಲೂಕಿನ ಜನತೆಗೆ ಜಲಶ್ಯಾಮಲ, ಸಸ್ಯ ಶಾಮಲವಾಗಿಸಲು ಪಕ್ಷವು ಬದ್ಧವಾಗಿ ಆರಂಭಿಸಿದ ಜನತಾ ಜಲಧಾರೆ ಯಾತ್ರೆಗೆ ಭವ್ಯ ಸ್ವಾಗತ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಕೃಷಿಕರ ನೂರೆಂಟು ಸಮಸ್ಯೆಗಳ ಪರಿಹಾರಕ್ಕೆ ‘ರೈತ ನ್ಯಾಯ ಮಂಡಳಿ’ ರಚನೆಯ ಅತ್ಯವಶ್ಯಕತೆ

ಅಂದು ಅಮರ್ಜಾ ಅಣೆಕಟ್ಟೆಗೆ ಜನತಾ ಜಲಧಾರೆ ಯಾತ್ರೆ ತೆರಳುವ ಮುನ್ನ ೯:೦೦ ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲ ೫೦೦ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಯಲಿದೆ. ನಂತರ ಅಮರ್ಜಾ ಅಣೆಕಟ್ಟೆಗೆ ತೆರಳಿದ ಬಳಿಕ ಐದನೂರು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಮತ್ತು ಕುಂಬ ಕಳಸ ಹೊತ್ತಿ ಬರುವ ೨೫೦ ಮಹಿಳೆಯರು ಜಲಪೂಜೆ ನೆರವೇರಿಸುವುದು ಜೊತೆಗೆ ಐವರು ಮಹಿಳೆಯರ ಕೈಯಿಂದ ಜಲಗಂಗಾ ಪೂಜೆ ನೆರವೇರಿಸಿ ಜಲಯಾತ್ರೆಗೆ ಸಮರ್ಪಣೆ ಕೈಗೊಳ್ಳಲಾಗುವು.

ಈ ಯಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಪಕ್ಷದ ಮುಖಂಡರು ಪಾಳ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಈ ಕಾರ್ಯಕ್ರಮದ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಭಿವೃದ್ಧಿಪರ ಜನಪರ ಕಾರ್ಯಕ್ರಮಗಳನ್ನು ಜನರಲ್ಲಿ ಜಾಗೃತಿ ಮೂಡಿಸಿ ಆಳಂದ ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಮೂಲಕ ಅಧಿಕಾರಕ್ಕೆ ತರುವ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಯುವ ಮುಖಂಡ ಶರಣ ಕುಲಕರ್ಣಿ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ:ರಸ್ತೆ ಅಭಿವೃದ್ಧಿಯ ಧೂಳು: ಎಐಡಿವೈಒ ಆಕ್ರೋಶ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago