ಬಿಸಿ ಬಿಸಿ ಸುದ್ದಿ

ಹದಿನಾಲ್ಕು ಪದವಿ ಪಡೆದ ಬಾಬಾ ಸಾಹೇಬ್ ವಿಶ್ವರತ್ನ: ವಿಠ್ಠಲ್ ವಗ್ಗನ್

ಸುರಪುರ:ನಗರದ ಝಂಡದಕೇರಾದ ಡಾ:ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಅಂಬೇಡ್ಕರ್ ವಾದಿ ವಿಠ್ಠಲ್ ವಗ್ಗನ್ ಮಾತನಾಡಿ,ಬದುಕಿನುದ್ಧಕ್ಕೂ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಅವೆಲ್ಲವನ್ನು ಮೆಟ್ಟಿನಿಂತು ೧೪ ಪದವಿಯನ್ನು ಪಡೆದ ಜಗತ್ತಿನ ಏಕೈಕ ವ್ಯಕ್ತಿ ಎಂದರೆ ಬಾಬಾ ಸಾಹೇಬ್ ಡಾ:ಬಿ.ಆರ್ ಅಂಬೇಡ್ಕರ್ ಅವರು ವಿಶ್ವರತ್ನವಾಗಿದ್ದಾರೆ ಎಂದರು.

ಇದನ್ನೂ ಓದಿ: ವಕೀಲರ ಸಂಘದ ಚುನಾವಣೆ ನಡೆಸಲು ಆಗ್ರಹ

ಅಂಬೇಡ್ಕರ್‌ರ ಕುರಿತು ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಮಾತನಾಡಿ ಈ ದೇಶದಲ್ಲಿ ಅಂಬೇಡ್ಕರ್ ಅವರು ಹುಟ್ಟದಿದ್ದಲ್ಲಿ ನಾನು ಕುರಿ ಕಾಯ್ದುಕೊಂಡಿರಬೇಕಿತ್ತು ಎಂದಿದ್ದರು.ಅದರಂತೆ ಪಾರ್ಲಿಮೆಂಟಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಇಲ್ಲದಿದ್ದಲ್ಲಿ ನಾನು ಇನ್ನೂ ಚಹಾ ಮಾರಿಕೊಂಡಿರುತ್ತಿದ್ದೆ ಎಂದಿದ್ದರು.ಅಖಿಲೇಶ ಯಾದವ್ ಕೂಡ ಅಂಬೇಡ್ಕರ್‌ರ ಕುರಿತು ನೆನಪಿಸಿಕೊಂಡಿದ್ದಾರೆ ಇದು ಅಂಬೇಡ್ಕರ್‌ರ ತಾಕತ್ತು ಎಂದರು.ಸಂಪ್ರದಾಯವಾದಿಗಳು ಬುದ್ಧನನ್ನು ವಿಷ್ಣುವಿನ ೯ನೇ ಅವತಾರ ಎಂದು ಹೇಳಿ ಹೈಜಾಕ್ ಮಾಡಿದ್ದಾರೆ.ಅದರಂತೆ ಡಾ:ಬಾಬಾ ಸಾಹೇಬರು ಆಗದಂತೆ ನೋಡಿಕೊಳ್ಳಬೇಕು ಎಂದರು.

ಅಲ್ಲದೆ ಈ ದೇಶದಲ್ಲಿನ ಕೇವಲ ದಲಿತರಿಗಾಗಿ ಮಾತ್ರವಲ್ಲ ಈ ದೇಶದ ಎಲ್ಲಾ ಮೂಲನಿವಾಸಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗಾಗಿ ಮಹಿಳೆಯರಿಗಾಗಿ,ಕಾರ್ಮಿಕರು ಸೇರಿ ಎಲ್ಲರ ಅಭಿವೃಧ್ಧಿಗಾಗಿ ಸಂವಿಧಾನ ಬರೆದುಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ: 43 ಲಕ್ಷ ವಸ್ತು ಹಾನಿ

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಭೋದಿನಂದ ಭಂತೇಜಿ ಮದ್ದರಕಿ ಹಾಗು ಪ್ರಜ್ಞಾನಂದ ಭಂತೇಜಿ ಶಹಾಪುರ ಸಾನಿಧ್ಯವಹಿಸಿದ್ದರು.ಮುಖಂಡರಾದ ಸೂಗುರೇಶ ವಾರದ,ಮಾನಪ್ಪ ಕಟ್ಟಿಮನಿ,ಉಸ್ತಾದ ವಜಾಹತ್ ಹುಸೇನ್,ದುರ್ಗಪ್ಪ ಗೋಗಿಕೇರಾ,ಶಿವಕುಮಾರ ಕಟ್ಟಿಮನಿ,ಶಿವರಾಜ ಕಲಿಕೇರಿಸುವರ್ಣಾ ಎಲಿಗಾರ,ಲಕ್ಷ್ಮೀ ಎಮ್ ಬಿಲ್ಲವ್,ಮಲ್ಕಪ್ಪ ತೇಲ್ಕರ್,ವೆಂಕಟೇಶ ಹೊಸ್ಮನಿ,ಪೂಜಾ ಖರ್ಗೆ,ಶಿಲ್ಪಾ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಅಲ್ಲದೆ ಮದ್ಹ್ಯಾನ ನಗರದಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯನ್ನು ತೆರೆದ ವಾಹನದಲ್ಲಿ ನಗರದ ತುಂಬೆಲ್ಲಾ ಮೆರವಣಿಗೆ ನಡೆಸಲಾಯಿತು.ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago