ಚಿಂಚೋಳಿ: ಪಟ್ಟಣದಲ್ಲಿ ಬಸ್ ಡಿಪೋ ರಸ್ತೆಯಲ್ಲಿರುವ ದಿನಸಿ ಅಂಗಡಿಯಲ್ಲಿ ಸೋಮವಾರ ರಾತ್ರಿ 10.30 ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಬಹುಪಾಲು ವಸ್ತುಗಳು ಸುಟ್ಟುಹೋಗಿವೆ ಮಹಮ್ಮದ್ ಅಮ್ಜದ್ ಹುಸೇನ್ ಅವರಿಗೆ ಸೇರಿದ ಅಂಗಡಿ ಬೆಂಕಿಗಾಹುತಿಯಾಗಿದೆ. ಇವರು ಬಾಡಿಗೆ ಕಟ್ಟಡದಲ್ಲಿದ್ದು ದಿನಸಿ ಅಂಗಡಿ ನಡೆಸುತ್ತಿದ್ದರು, ಅಂಗಡಿಯಲ್ಲಿದ್ದ 43 ಲಕ್ಷ ಮೌಲ್ಯದ ವಸ್ತುಗಳು ಸುಟ್ಟಿವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು, ಅಷ್ಟರೊಳಗೆ ಅಂಗಡಿ ಪೂರ್ಣ ಸುಟ್ಟುಹೋಗಿತ್ತು ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರಬಹುದೆಂದು ಅಂದಾಜಿಸಲಾಗಿದೆ, ಸ್ಥಳಕ್ಕೆ ತಹಸೀಲ್ದಾರ್ ಅಂಜುಮ್ ತಬುಸುಮ್, ಸಿ ಪಿ ಐ ಮಹಾಂತೇಶ್ ಪಾಟೀಲ,ಪಿ ಎಸ್ ಐ ಮಂಜುನಾಥ್ ರೆಡ್ಡಿ ಭೇಟಿನಿದರು.
ಈ ಸಂದರ್ಭದಲ್ಲಿ ಅಬ್ದುಲ್ ಬಾಸಿದ್ ಮಾತನಾಡಿ ಅಂಗಡಿಗಳಿಗೆ ತಪ್ಪದೆ ವಿಮೆ ಮಾಡಿಸಬೇಕೆಂದು ಅಂಗಡಿ ಮಾಲಿಕರ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಕೆ ಎಂ ಭಾರಿ ಮಾತನಾಡಿ ಸರ್ಕಾರದ ಕಡೆಯಿಂದ ಅಂಗಡಿ ಮಾಲೀಕರಿಗೆ ಪರಿಹಾರ ಕೊಡಿಸಲು ಶಾಸಕರಿಗೆ ದೂರವಾಣಿ ಮೂಲಕ ಮಾತನಾಡಿದ್ದು ಕೂಡಲೆ ಪರಿಹಾರ ಕೊಡಿಸಲು ಪ್ರಯತ್ನಿಸುವೆ ಎಂದು ಶಾಸಕರು ತಿಳಿಸಿದ್ದಾರೆ ಎಂದರು.