ಶಿಕ್ಷಕರ ಅಸಲಿ ನಾಯಕ, ಈಗ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿ ನಡೆದು ಬಂದ ದಾರಿ

  • ಕೆ.ಶಿವು.ಲಕ್ಕಣ್ಣವರ

ಕರ್ನಾಟಕ ವಿಧಾನಪರಿಷತ್‍ನ ನೂತನ ಸಭಾಪತಿಯಾಗಿ ಈ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಬಸವರಾಜ್ ಹೊರಟ್ಟಿಯವರು ಸತತವಾಗಿ 7 ಬಾರಿ ಒಂದೇ ಕ್ಷೇತ್ರದಿಂದ, ಅದೂ ಶಿಕ್ಷಕರ ಮತಕ್ಷೇತ್ರದಿಂದ ಶಿಕ್ಷಕರ ಪ್ರತಿನಿಧಿಯಾಗಿ ಗೆಲ್ಲುವ ಮೂಲಕ ದೇಶದ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಬಸವರಾಜ್ ಹೊರಟ್ಟಿಯವರು 1980 ರಿಂದ 1986, 1992, 1998, 2004, 2010 ಹಾಗೂ 2016ರಲ್ಲಿ ಹೀಗೆಯೇ ಒಂದೇ ಕ್ಷೇತ್ರದಿಂದ ಅಂದರೆ ಪಶ್ಚಿಮ ಶಿಕ್ಷಕರ ಕೇತ್ರದಿಂದ ಸತತ ಏಳು ಬಾರಿಗೆ ಗೆದ್ದು ದಾಖಲೆ ಬರೆದಿದ್ದವರು.

ಹುಟ್ಟೂರಾದ ಯಡಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಮುಧೋಳದಲ್ಲಿ ಪ್ರೌಢಶಿಕ್ಷಣ, ಹುಬ್ಬಳ್ಳಿಯಲ್ಲಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಯಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದವರು. ಬಳಿಕ 1975 ರಿಂದ 80 ರವರೆಗೆ ಹುಬ್ಬಳ್ಳಿ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಶಿಕ್ಷಕರ ಸಮಸ್ಯೆಗಳನ್ನು ಗುರುತಿಸಿ ಅವರಿಗಾಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವುದಕ್ಕಾಗಿಯೇ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘವನ್ನು ಸ್ಥಾಪನೆಯನ್ನು ಮಾಡಿದ್ದವರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

1983, 86 ಹಾಗೂ 89 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಮತ್ತು ನಾಲ್ಕು ಬಾರಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿ 1998 ರಲ್ಲಿ ರಾಜ್ಯ ಕ್ರೀಡಾ ಮಂಡಳಿಯ ಸದಸ್ಯರಾಗಿದ್ದವರು. ರಾಜ್ಯದಲ್ಲಿ 2004 ರ ವೇಳೆಯಲ್ಲಿ ಕಾಂಗ್ರೆಸ್ — ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ಹೊರಟ್ಟಿಯವರು ವಿಜ್ಞಾನ, ತಂತ್ರಜ್ಞಾನ, ಸಣ್ಣ ಉಳಿತಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದವರು.

2006 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ ಬಸವರಾಜ್ ಹೊರಟ್ಟಿಯವರಿಗೆ ಅನುಭವವವೂ ಸಾಕಷ್ಟಿದೆ. 1995-96, 1996-99 ಮತ್ತು 2015 ರಿಂದ ಭರವಸೆ ಸಮಿತಿ ಅಧ್ಯಕ್ಷರಾಗಿ ಹಾಗೂ ವಿಧಾನಪರಿಷತ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿಯೂ ಕರ್ತವ್ಯ ನಿರ್ವಹಿಸಿದ್ದವರು ಬಸವರಾಜ್ ಹೊರಟ್ಟಿಯೌರು.

ಇದನ್ನೂ ಓದಿ: ಜ್ಞಾನ ಜ್ಯೋತಿ ಶಾಲೆ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಪರವಾನಿಗೆ ರದ್ದು ಮಾಡಬೇಕು: ಲಿಂಗರಾಜ ಸಿರಗಾಪೂರ

ರಾಜ್ಯದಲ್ಲೇ ಮಾದರಿಯಾದಂತಹ ತೋಟವನ್ನು ನಿರ್ಮಿಸಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಪುಷ್ಪೋದ್ಯಮ ಸೇರಿದಂತೆ ಕೃಷಿ ಚಟುವಟಿಕೆಯಲ್ಲೂ ಅವರು ತೊಡಗಿಸಿಕೊಂಡಿದ್ದವರು.  ತೋಟದಲ್ಲಿ ಚೆಕ್‍ಡ್ಯಾಮ್, ಮಳೆನೀರು ಕೊಯ್ಲು, ಕಾರ್ಮಿಕರಿಗೆ ಉದ್ಯೋಗ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಯಲ್ಲೂ ಹೊರಟ್ಟಿ ಗುರುತಿಸಿಕೊಂಡಿದ್ದವರು ಬಸವರಾಜ ಹೊರಟ್ಟಿಯವರು..!

ಈ ಮಧ್ಯೆ ಬಸವರಾಜ್ ಹೊರಟ್ಟಿಯವರು ಬಿಜೆಪಿ ಪಕ್ಷವನ್ನು ಸೇರುತ್ತಾರೆ. ಅಲ್ಲದೇ ಬಿಜೆಪಿಯಿಂದಲೇ ಮುಂಬರುವ ವಿಧಾನ ಪರಿಷತ್ ಚುನಾವಣೆ ಎದುರಿಸಲಿದ್ದಾರೆ ಎಂಬ ಪುಕಾರೂ ಎದ್ದೀತ್ತು. ಆ ಪುಕಾರು ಏನಿದ್ದರೂ ಬರೀ ಪುಕಾರು ಎಂಬುದಕ್ಕೆ ಬಸವರಾಜ್ ಹೊರಟ್ಟಿಯರು ಚಲೋ ಉತ್ತರ ಕೊಟ್ಟಿದ್ದಾರೆ ಕೂಡ.  ಆ ಪುಕಾರು ಮತ್ತು ಬಸವರಾಜ್ ಹೊರಟ್ಟಿಯವರು ಕೊಟ್ಟ ಉತ್ತರವೇನು ಎಂಬುದನ್ನು ಈಗ ನೋಡೋಣ ನಾವು.

ಕರ್ನಾಟಕದ 4 ವಿಧಾನಪರಿಷತ್ (Karnataka Legislative Council Election) ಸ್ಥಾನಗಳಿಗೆ  ಈ ವರ್ಷದ ಮಧ್ಯಭಾಗದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದ್ದವು.  ಆಗ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸದಸ್ಯತ್ವ ಅವಧಿ ಜೂನ್ ವೇಳೆಗೆ ಮುಕ್ತಾಯವಾಗಲಿದ್ದು, ಅವರು ಮುಂದಿನ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆಗಲೇ ಅದಕ್ಕೆ ಸ್ವತಃ ಬಸವರಾಜ್ ಹೊರಟ್ಟಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸದ್ಯಕ್ಕೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸೇರುವ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಧರ್ಮ ಸಭೆಯಲ್ಲಿ ಭಾಗವಹಿಸುವಂತೆ ಶೋಭಾ ಕರದಾಂಜ್ಲೆ ಆಹ್ವಾನ

ಶಿಕ್ಷಕರ ಕ್ಷೇತ್ರಕ್ಕೆ ಆಯಾ ಪಕ್ಷ ಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಇನ್ನೂ ಮೇ ತಿಂಗಳಲ್ಲಿ ಚುನಾವಣೆ ಇದೆ. ನನ್ನ ಚುನಾವಣೆ ವಿಚಾರದಲ್ಲಿ ಜಾತಿ ಪ್ರಶ್ನೆಯೇ ಬರುವುದಿಲ್ಲ. ಶಿಕ್ಷಕರ ಬೆಂಬಲ ನನಗಿದೆ. ಯಾವ ಪಕ್ಷಕ್ಕೂ ಹೋಗಬೇಕೆಂಬುದಿಲ್ಲ. ಕೆಲವರು ಸ್ನೇಹಿತರ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು ಎಂಬುದು ಸತ್ತ. ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರು. ಆದರೂ ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಜೆಡಿಎಸ್ ಪಕ್ಷದಿಂದಲೇ ಚುನಾವಣೆ ಎದುರಿಸುತ್ತೇನೆ ಎಂದು ಘಂಟಾಘೋಷವಾಗಿ ಬಸವರಾಜ್ ಹೊರಟ್ಟಿಯವರು ಪುಕಾರೆಬ್ಬಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಬಜೆಟ್ ಅಧಿವೇಶನದಲ್ಲಿ ಪರಿಷತ್ ನಲ್ಲಿ ಮಂಡನೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಮಸೂದೆಗಳು ಮಂಡನೆಯಾಗುತ್ತೆ ಅನ್ನೋದರ ಬಗ್ಗೆ ಮಾಹಿತಿಯಿಲ್ಲ.  ಪರಿಷತ್ ನಲ್ಲಿ ಮಂಡನೆ ಆದ್ರೂ ನೆಕ್ ಟು ನೆಕ್ ಫೈಟ್ ಇದೆ ಎಂದೂ ಅವರು ಹೇಳುತ್ತಾರೆ.

ಹಿಜಾಬ್,​ ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ಹೀಗಿತ್ತು ನೋಡಿ. ಸರ್ಕಾರ ತನ್ನ ಜವಬ್ದಾರಿಯಿಂದ ವಿಮುಖವಾಗಿದೆ‌. ಹಿಜಾಬ್ ಕೇಸರಿ ವಿವಾದ ರಾಜಕೀಯಮಯವಾಗಿದ್ದು, ಶಾಲಾ-ಕಾಲೇಜಿಗೆ ರಜೆ ನೀಡಿದ್ದು ಸರಿಯಲ್ಲ. ಸರ್ಕಾರಕ್ಕೆ ಈ ವಿಷಯದಲ್ಲಿ ಗಂಭೀರತೆಯೇ ಇಲ್ಲ. ಶಿಕ್ಷಣ ಸಚಿವರು ಸುಮ್ಮನೇ ಆರಾಮಾಗಿದ್ದರೆ ಹೇಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು ಬಸವರಾಜ್ ಹೊರಟ್ಟಿಯವರು.

ರಾಮನ ಭಕ್ತರೇ ಇರಲಿ, ಹನುಮನ ಭಕ್ತರೇ ಇರಲಿ, ಮಕ್ಕಳ ಜೊತೆಗೆ ರಾಜಕೀಯ ಮಾಡಬಾರದು. ಕೆಲ ಸಂಘಟನೆಗಳು ರಾಜಕೀಯ ನಾಯಕರ ಸಂಬಂಧಿಕರಾಗಿದ್ದಾರೆ. ಕುಮ್ಮಕ್ಕು ಕೊಟ್ಟು ಈ ರೀತಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜವಬ್ದಾರಿ ಇರುವವರು ನಮ್ಮ ಊರು, ‌ನಮ್ಮ ಜಿಲ್ಲೆಯ ಮಕ್ಕಳು ಎನ್ನುವುದನ್ನು ಮರೆತಿದ್ದಾರೆ. ಈ ರೀತಿ ಮಾಡುವುದು ಒಂದೇ, ಕೊಲೆ ಮಾಡುವುದು ಎರಡೂ ಒಂದೇ ಎಂದು ಹೇಳಿದ್ದರು ಅವರು. 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರ ಒಟ್ಟು ನಾಲ್ಕು ಸ್ಥಾನಗಳಿಗೆ,  ಜೂನ್ ಇಲ್ಲವೇ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ಬಿಜೆಪಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಅರುಣ್ ಶಹಾಪುರ್ ಅವರಿಗೆ ಟಿಕೆಟ್ ದೊರೆಯುವ ನಿರೀಕ್ಷೆಗಳಿವೆ.

ಇನ್ನೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹೆಸರು ಘೋಷಿಸುವ ನಿರೀಕ್ಷೆ ಇದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ.‌ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ ಹೆಸರುಗಳು ರೇಸ್​ನಲ್ಲಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದೂ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇಬ್ಬರು ಬೈಕ್ ಕಳ್ಳರ ಬಂಧನ

ಇತ್ತ ಕಾಂಗ್ರೆಸ್​ನಲ್ಲಿ ಪರಿಷತ್​ನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮಧು ಮಾದೇಗೌಡರು ಹಾಗೂ ಧಾರವಾಡದ ಗುರಿಕಾರ್ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ. ಇನ್ನೆರಡು ಕ್ಷೇತ್ರಗಳಿಗೆ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇನ್ನೂ ಜೆಡಿಎಸ್ ಪಕ್ಷದ ಪಶ್ಚಿಮ ಶಿಕ್ಷಕರ ಕೇತ್ರದಿಂದ ಬಸವರಾಜ್ ಹೊರಟ್ಟಿಯವರ ಹೆಸರು ಅಂತಿಮವೆನ್ನುವುದು ಸ್ಪಷ್ಟವಾಗಿದೆ. ಅಲ್ಲದೇ ಈ ಕ್ಷೇತ್ರದಿಂದ ಬಸ ಹೊರಟ್ಟಿಯವರು ನಿಶ್ಚಿತವಾಗಿ ಗೆಲ್ಲವ ಅಭ್ಯರ್ಥಿ ಎಂಬುದು ಎಲ್ಲರೂ ಒಪ್ಪುವ ವಿಚಾರವಾಗಿದೆ.

ಹೀಗೆ ಬಸವರಾಜ್ ಹೊರಟ್ಟಿಯವರು ಎಂಬ ರಾಜಕಾರಣಿ ಒಬ್ಬ ಸರಳ, ಸಾದಾ ಮತ್ತು ಪ್ರಮಾಣಕ ಶಿಕ್ಷಕನಾಗಿ ರಾಜಕೀಯದಲ್ಲಿ ಮೇಲೇರುತ್ತಲೇ ಬಂದಿದ್ದು ಸಾಮಾನ್ಯವಲ್ಲ. ಅದೂ ಪ್ರಜಾಪ್ರಭುತ್ವದ ಹೆಗ್ಗಳಿಕೆಯೇ ಸರಿ ಎಂಬುದು ನಮ್ಮ ಅಭಿಪ್ರಾಯ.

ಇದನ್ನೂ ಓದಿ: ಶಹಾಬಾದನಲ್ಲಿ ಜಿಲ್ಲಾ ಸಮ್ಮೇಳನ ಮಾಡಲು ಸಹಕಾರ ನೀಡಲು ಸಿದ್ಧ-ಮತ್ತಿಮಡು

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

18 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420