ಕಲಬುರಗಿ: ’ಯಾವ ಕೆಲಸದ ಹಿಂದೆ ಒಂದು ಸೃಜನಶೀಲ ಮನಸ್ಸು ಇರುತ್ತದೆಯೋ ಆ ಕೆಲಸ ಒಂದು ಕಲೆಯೇ ಆಗಿರುತ್ತದೆ. ಛಾಯಾಚಿತ್ರಣ ಈ ಮಾತಿಗೆ ಹೊರತಾದುದಲ್ಲ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಹೇಳಿದರು. ನಗರದ ಮಾನಕರ ಲೇಔಟ್‌ನಲ್ಲಿರುವ ಬಿಸಿಲು ಅರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿರುವ ಇಲಕಲ್ಲಿನ ಡಾ. ಬಸವರಾಜ ಗವಿಮಠ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಡಿಜಿಟಲ್ ಮತ್ತು ಮೊಬೈಲ್ ಯುಗದಲ್ಲಿ ಎಲ್ಲರೂ ಛಾಯಾಚಿತ್ರಣ ಮಾಡುತ್ತಾರೆ, ಹಾಗಂದ ಮಾತ್ರಕ್ಕೇ ಎಲ್ಲರೂ ಉತ್ತಮ ಛಾಯಾಚಿತ್ರಕಾರರಾಗಿಲ್ಲ, ಉತ್ತಮ ಛಾಯಾಚಿತ್ರಣದ ಹಿಂದೆ ನಿಜವಾದ ಪ್ರತಿಭಾವಂತನ, ಸಂವೇದನಾಶೀಲನ ಕಣ್ಣು – ಮನಸ್ಸುಗಳಿರುತ್ತವೆ’ ಎಂದ ಅವರು, ’ಪ್ರತಿಭಾವಂತನ ಕಣ್ಣಿಗೆ ಕಸವೂ ರಸವಾಗಿ ಕಾಣಿಸುತ್ತದೆ, ಪ್ರತಿಭಾವಂತನಲ್ಲದವನ ಕಣ್ಣಿಗೆ ರಸವೂ ಕಸವಾಗಿ ಕಾಣಿಸುತ್ತದೆ, ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ಕೆಯುಡಬ್ಲ್ಯೂಜೆ ಜಿಲ್ಲಾ, ರಾಜ್ಯ ಸಂಘದ ಪದಾರ್ಥಗಳ ಪ್ರತಿಜ್ಞಾವಿಧಿ ಸ್ವೀಕಾರ
’ಛಾಯಾಚಿತ್ರಣ ಕಲೆಯಲ್ಲಿ ಹೆಸರು ಮಾಡಿರುವ ಎಮ್. ವೈ. ಘೋರ್ಪಡೆ, ಪ್ರಭುಸ್ವಾಮಿ ಮಳಿಮಠ, ಅಯಾಜುದ್ಧೀನ್ ಪಟೇಲ್, ರಾಚಯ್ಯ ಸ್ಥಾವರಮಠ ಮೊದಲಾದವರಂತೆ ಬಸವರಾಜ ಗವಿಮಠರ ಛಾಯಾಚಿತ್ರಗಳೂ ಸೃಜನಶೀಲ ಅಭಿವ್ಯಕ್ತಿಗಳೇ ಆಗಿವೆ’ ಎಂದು ವಿವರಿಸಿದ ಅವರು ’ಲಲಿತಕಲಾ ಅಕಾಡೆಮಿಯು ಛಾಯಾಚಿತ್ರಣ ಕಲೆಯನ್ನು ಸೃಜನಶೀಲ ಕಲೆಯಾಗಿ ಪರಿಗಣಿಸಬೇಕು’ ಎಂದರು.
ಮುಖ್ಯ ಅಥಿತಿಯಾಗಿದ್ದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ಮಾನಕರ ಮಾತನಾಡಿ ’ಎಲ್ಲರೂ ಈ ಛಾಯಾಚಿತ್ರಗಳ ಸೌಂದರ್ಯವನ್ನು ಸವಿಯಬೇಕೆಂದರು’. ಮತ್ತೋರ್ವ ಅಥಿತಿಯಾದ ಚಿತ್ರಕಲಾವಿದ ನಾರಾಯಣ ಜೋಷಿ ಅವರು ಮಾತನಾಡಿ ’ಛಾಯಾಚಿತ್ರಣ ಒಂದು ಶ್ರಮದಾಯಕ ಕಲೆಯಾಗಿದ್ದು, ಪತ್ರಿಕಾ ಮಾಧ್ಯಮದಲ್ಲಿ ಅದು ಪ್ರಮುಖ ಪಾತ್ರವಹಿಸುತ್ತದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ: ಮೌಲಾನಾ ಆಜಾದ ಆಂಗ್ಲ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
ಬಿಸಿಲು ಆರ್ಟ್ ಗ್ಯಾಲರಿಯ ಸಂಸ್ಥಾಪಕ ವಿ.ಬಿ. ಬಿರದಾರ ಅವರು ’ಸೌಂದರ್ಯವು ನೋಡುವ ಕಣ್ಣುಗಳಲ್ಲಿ ಇರುತ್ತದೆ, ನೋಡುವ ಕಣ್ಣು ಮುಖ್ಯ’ ಎಂದರು. ಛಾಯಾಚಿತ್ರಕಾರ ಡಾ. ಬಸವರಜ ಗವಿಮಠರು ತಮ್ಮ ಅನುಭವಗಳನ್ನು ವಿವರಿಸಿ ಎಲ್ಲರನ್ನೂ ಅಭಿನಂದಿಸಿದರು. ಶೈಲಜಾ ವಿ. ಬಿರಾದಾರ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…