ಕಲಬುರಗಿ: 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಸದರಿ ಮಾದರಿ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಶೇಕಡಾ 75 ಮತ್ತುಇತರೆ ವರ್ಗಗಳ ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ಸ್ಥಾನಗಳು ಮೀಸಲಿಡಲಾಗಿದೆ. ತಾಲೂಕುವಾರು ಶಾಲೆಗಳ ವಿವರ, ಮುಖ್ಯೋಧ್ಯಾಯರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.
ಇದನ್ನೂ ಓದಿ: ಶೋಭಯಾತ್ರೆಗೆ ಅನುಮತಿ ನೀಡದಂತೆ ಸಿಪಿಐಎಂ ಪ್ರತಿಭಟನೆ
ಕಮಲಾಪುರ ತಾಲೂಕು: ಕಮಲಾಪುರದ ಸರ್ಕಾರಿ ಶಾಲೆಯಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಮಲ್ಲಿಕಾರ್ಜುನ(9902772935). ಕಲಬುರಗಿ ತಾಲೂಕು: ಕಲಬುರಗಿ ಎಂ.ಎಸ್.ಕೆ.ಮಿಲ್‍ದಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಅಜ್ಮೀರ ಪಾಷಾ(9164038820). ಫರಹತಾಬಾದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಯುಸುಪ್(8147232389). ಕಲಬುರಗಿ (ಮಾಲಗತ್ತಿ) ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ ಮಹಿಬೂಬನಗರ-ಜೋಹರಾ ಜಬೀನ್(8762505105).
ಅಫಜಲಪೂರ ತಾಲೂಕು: ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ ಪಟ್ಟಣ ಪಂಚಾಯತ್ ಅಫಜಲಪೂರ ಟೌನ್-ಬಸವರಾಜ ನಾಯಕವಾಡಿ (9901738430). ಮಣ್ಣೂರಿನ ಸರ್ಕಾರಿ ಶಾಲೆಯಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಅಮ್ಮಣ್ಣ(7760910308).
ಆಳಂದ ತಾಲೂಕು: ಆಳಂದ ತಾಲೂಕಿನ ನರೋಣಾ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಸಚಿನ್ ಗಾಯಕವಾಡ್ (9741908720). ಅಳಂದ ಟೌನ್ ಬಂಗಡಿ ಪೀರ ಕಾಲೋನಿಯ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ- ಕಾವ್ಯಾ (9686847376).
ಇದನ್ನೂ ಓದಿ: ವಿಕಲಚೇತನರಿಗೆ ತ್ರಿಚಕ್ರ ವಾಹನ (ಸ್ಕೂಟರ್) ವಿತರಣೆ: ಅರ್ಜಿ ಆಹ್ವಾನ
ಚಿಂಚೋಳಿ ತಾಲೂಕು: ಚಿಂಚೋಳಿ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಸಮಿಖಾನ್ (9945855786). ಚಿಮ್ಮನಚೋಡ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಸೈಯದ್ ಹಸನ (8951793436). ಸುಲೇಪೆಟ್ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಜಿತೇಂದ್ರದನ್ನಿ (8105351899).
ಚಿತ್ತಾಪೂರ ತಾಲೂಕು: ವಾಡಿ(ಜಂ) ಸೋನಾಬಾಯಿ ಏರಿಯಾ ಉರ್ದು ಶಾಲೆಯಲ್ಲಿರುವ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ನಿತೀನಸಿಂಗ್ (7829130115).
ಶಹಾಬಾದ ತಾಲೂಕು: ಶಹಾಬಾದ ಗಂಜ್ ಏರಿಯಾದಲ್ಲಿನ ಸರ್ಕಾರಿ ಉರ್ದು ಶಾಲೆಯ ಮiËಲಾನಾ ಆಜಾದ ಆಂಗ್ಲಮಾಧ್ಯಮ ಮಾದರಿ ಶಾಲೆ-ಕು.ಕೀರ್ತಿ 7406161960.
ಚಿತ್ತಾಪೂರ ತಾಲೂಕು: ಚಿತ್ತಾಪೂರ ಟೌನ್ ಬಸ್‍ಸ್ಟಾಂಡ್ ಹತ್ತಿರ ಸರ್ಕಾರಿ ಶಾಲೆಯಲ್ಲಿನ ಮiËಲಾನಾ ಆಜಾದ ಆಂಗ್ಲಮಾಧ್ಯಮ ಮಾದರಿ ಶಾಲೆ-ಮಹ್ಮದ್ ಮರ್ಧಾನ (9663126895).
ಇದನ್ನೂ ಓದಿ: ಕಲಬುರಗಿಯಲ್ಲಿ ಸಿಎಂ ವಾಹನಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಾಕರ್ತರ ಬಂಧನ
ಕಾಳಗಿ ತಾಲೂಕು: ಕಾಳಗಿ ಸಮಾಜ ಕಲ್ಯಾಣ ಇಲಾಖೆ ಕಟ್ಟಡದಲ್ಲಿನ ಸರ್ಕಾರಿ ಉರ್ದು ಶಾಲೆ ಹತ್ತಿರದ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಲಕ್ಷ್ಮಿ (9611672763).
ಜೇವರ್ಗಿ ತಾಲೂಕು: ಜೇವರ್ಗಿ ಟೌನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷಿ ಇಲಾಖೆ ಹತ್ತಿರದ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ನಸರೀನ (9740237554).
ಯಡ್ರಾಮಿ ತಾಲೂಕು: ಜೇವರ್ಗಿ ತಾಲೂಕಿನ ಇಜೇರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೊದಲನೇ ಮಹಡಿಯಲ್ಲಿನ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಗಂಗೂಬಾಯಿ (9880831830) ಹಾಗೂ ಅರಳಗುಂಡಗಿ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಜಾಮೀಯಾ ಮಸೀದ ಹತ್ತಿರದ ಮiËಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಮರಿಲಿಂಗಮ್ಮ (9980256116).
ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ
ಸೇಡಂ ತಾಲೂಕು: ಸೇಡಂ ಬಿ.ಎಸ್.ಎನ್.ಎಲ್ ಆಫೀಸ್ ಹಿಂದುಗಡೆಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ವಿಜಯಲಕ್ಷ್ಮೀ (7760680162, 7892369798) ಹಾಗೂ ಮಳಖೇಡ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆ-ಚನ್ನಬಸರೇಡ್ಡಿ (8105242324).
ಅರ್ಹ ವಿದ್ಯಾರ್ಥಿಗಳು ಸಂಬಂಧಪಟ್ಟ ತಾಲೂಕಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಿಂದ ನಿಗದಿತ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾದರಿ ಶಾಲೆಯನ್ನು ಅಥವಾ ಎಲ್ಲಾ ತಾಲ್ಲೂಕಾ ಮಾಹಿತಿ ಕೇಂದ್ರಗಳು ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಕಚೇರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.