ಬಿಸಿ ಬಿಸಿ ಸುದ್ದಿ

ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಪರಿಹಾರಿಕೆ ಒತ್ತಾಯ: ಗ್ರಾಮದ ಅನೇಕ ಬಡವರ ಮನೆಗಳ ಪತ್ರಾ ಹಾರಿ ಮನೆಯಲ್ಲಿನ ಸಾಮಗ್ರಿ ಧ್ವಂಸಗೊಂಡು ನಷ್ಟವಾಗಿವೆ. ಹಾರಿದ ಅನೇಕರ ಪತ್ರಗಳು ಸಿಕ್ಕಿಲ್ಲ ಇದರಿಂದ ಬಡವರಿಗೆ ತೊಂದರೆ ಆಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಸಂತ್ರಸ್ತರ ಬಡವರ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಂಖರರಾವ್ ದೇಶಮುಖ ಅವರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಆಳಂದ: ತಾಲೂಕಿನ ನಿರುಗಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಬಿಸಿದ ರಬಸದ ಬಿರುಗಾಳಿ, ಆಲಿಕಲ್ಲು ಮಳೆಗೆ ಸುಮಾರು ೬೦ಕ್ಕೂ ಹೆಚ್ಚು ಮನೆಗಳ ಪತ್ರಾ ಹಾರಿಹೋಗಿವೆ. ಅಲ್ಲದೆ, ೨೫ಕ್ಕೂ ಹೆಚ್ಚು ಗಿಡ, ಮರಗಳು ಹಾಗೂ ೧೦ ವಿದ್ಯುತ್ ಕಂಬಗಳು ಉರುಳಿ ಬಿದ್ದುಕೊಂಡಿವೆ. ಇದೇ ವೇಳೆ ಪತ್ರಾ ಹಾರಿ ಹಲವರಿಗೆ ಗಾಯಗೊಂಡ ವರದಿಯಾಗಿದೆ.

ಹಠಾತಾಗಿ ಗ್ರಾಮದಲ್ಲಿ ಆವರಿಸಿದ ಬಿರುಗಾಳಿಗೆ ಹಕ್ಕಾಬೀಕ್ಕಿಯಾದ ಜನರು, ನೋಡು ನೋಡುತ್ತಿದ್ದಂತೆಯೇ ಒಬ್ಬರ ಪತ್ರ ಇನ್ನೊಬ್ಬರ ಮನೆಯ ಮೇಲೆ ಹಾರಾಡಿದ್ದು ಅನೇಕ ಜೀವ ಉಳಿಸಿಕೊಳ್ಳಲು ಪರದಾಡಿದ್ದರಲ್ಲದೆ, ಹಾರಿದ ಪತ್ರಾಗಳು ಸಿಗದೆ ಕಂಗಾಲಾಗಿದ್ದಾರೆ. ಅಲ್ಲದೆ, ಹೆಚ್ಚಿನ ಜನ, ಜಾನುವಾರು ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಸೇಡಂನಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ

ಗ್ರಾಮದಲ್ಲಿನ ಅನೇಕ ಬಡವರ ಪತ್ರಾಟೀನ ಶೆಡ್ಡ್ ಮನೆಗಳು ಮೇಲಿನ ಪತ್ರಾಗಳು ಹಾರಿ ಬಡವರ ಬದಕು ಮೂರಾಬಟ್ಟೆಯಾಗಿಸಿ ನಷ್ಟ ಅನುಭವಿಸುವಂತೆ ಮಾಡಿದೆ ಎಂದು ಗ್ರಾಪಂ ಸದಸ್ಯ ಮಂಜುನಾಥ ಮೂಲಗೆ ಅವರು ಹೇಳಿಕೊಂಡಿದ್ದಾರೆ.

ಶ್ರೀಕಾಂತ ಚನ್ನಯ್ಯಾ ಎಂಬುವರ ಮನೆಯ ಪತ್ರಾ ಹಾರಿ ಮನೆಯಲ್ಲಿದ್ದ ಮಗುವಿನ ತೆಲೆಗೆ ಕಲ್ಲುಬಿದ್ದು ಹಾಗೂ ಮಗಳ ಬೇನ್ನು ಮೇಲೆ ಕಲ್ಲು ಬಿದ್ದು ಬೇನ್ನಿಗೆ ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜ ಬಂಗರಗಿ ಅವರ ಎತ್ತಿಗೆ ಹಾರಿಬಂದ ಪತ್ರ ಬಡಿದು ಸ್ಥಳದಲ್ಲೇ ಕಾಲು ಕಡಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

ಜಗನಾಥ ಮೂಲಗೆ ಮನೆಯ ಎಲ್ಲ ಪತ್ರಗಳು ಹಾರಿಹೋಗಿ ಅರ್ಧ ಕಿ.ಮೀ ದೂರದಲ್ಲಿ ಬಿದ್ದಿವೆ. ಪತ್ರ ಕಟ್ಟಿಯ ಅಡ್ಡಿಗೆ ಹಾಕಿದ ಫ್ಯಾನ್ ತೋಟಲು ಕಿತ್ತು ಹಾರಿಹೋಗಿ ದೂರದಲ್ಲಿ ಬಿದ್ದುಕೊಂಡಿವೆ. ದತ್ತಾ ಪಾತ್ರೆ ಎಂಬುವರ ಕಿರಾಣಿ ಅಂಗಡಿ ಎಲ್ಲಾ ಪತ್ರಗಳು ಹಾರಿ ಗೋಡೆ ಉರುಳಿಬಿದ್ದಿದೆ. ಈ ವೇಳೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಶ್ರೀಕಾಂತ ನವಣೆ ಎಂಬುವರ ಎಲ್ಲ ಪತ್ರ ಹಾರಿವೆ. ಹಣಮಂತ ಗಾಡೆಕರ್, ಶಿವಾನಂದ ನಾಗೂರೆ, ಬಸವರಾಜ ಜಮಗೆ ಪತ್ರಾ ಮತ್ತು ಶಿವಾಜಿ ಪಾತ್ರೆ ಅವರ ಸೀಮೆಂಟಿನ ಪತ್ರ ಹಾರಿ ಗೋಡೆ ಕುಸಿದು ಬಿದ್ದು ಕಿರಾಣಿ ಅಂಗಡಿಯ ಸಾಮಗ್ರಿಗಳ ಹಾನಿಯಾಗಿವೆ. ಮಲ್ಲಿನಾಥ ಬಿರಾದಾರ, ಪ್ರಕಾಶ ಬಿರಾದಾರ ಹುಸೇನಿ ಶೇಖ ಅವರ ಮನೆಯ ಹಾರಿದ ಹೋಗಿದ್ದ ಪತ್ರಾಗಳು ಸಿಕ್ಕಿಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಬಸವರಾಜ ಕೋರೆ ಎಂಬುವರ ೮ ಪತ್ರಗಳು ಹಾರಿಹೋಗಿವೆ ಮನೆಯಲ್ಲ ಬಯಲಾಗಿದೆ. ಈ ಅವಘಡದಿಂದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ, ಗ್ರಾಮಸ್ಥರು ಕತ್ತಲೆಯಲ್ಲಿ ಕಾಲಕಳೆಯುಂತಾಗಿ ಎರಡೂ ದಿನಗಳಾದರು ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಗ್ರಾಮದ ಯುವಕರೊಬ್ಬರು ಗ್ರಾಮಲೇಖಪಾಲಕರ ಗಮನಕ್ಕೆ ತಂದಾಗ ತಹಸೀಲ್ದಾರ ಆದೇಶವಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರಾದರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

7 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

7 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

7 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

7 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

7 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

7 hours ago