ಸೇಡಂನಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ

0
18

ಸೇಡಂ: ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ ನೀಡಲಾಯಿತು.

ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಸದಾಶಿವ ಸ್ವಾಮೀಜಿ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಜನತಾ ಜಲಧಾರೆ ಯೋಜನೆ ಈಡಿ ಕರ್ನಾಟಕ ರಾಜ್ಯಾದ್ಯಂತ ಪ್ರಾರಂಭಗೊಂಡಿದೆ ಇದರ ಮುಖ್ಯ ಉದ್ದೇಶ ನದಿಯಲ್ಲಿರುವಂತ ನೀರನ್ನು ಹಳ್ಳಿಯ ಕೆರೆಗಳನ್ನು ತುಂಬಿಸುವಂತ್ತದ್ದು ಬ್ರಿಜ್ ಕಂ ಬ್ಯಾರೇಜಗಳ ಮುಖಾಂತರ ಇಡೀ ನೀರಾವರಿ ಪ್ರದೇಶವನ್ನು ನಿರ್ಮಾಣ ಮಾಡುವುದು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ನೇತೃತ್ವದಲ್ಲಿ ರಾಷ್ಟ್ರಕೂಟರ ಮಳಖೇಡ ನೆಲದ ಕಾಗೀಣ ನದಿ ತಟದಲ್ಲಿ ಚಾಲನೆ ನೀಡಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಇಂಡಿಯಾಸ್ಟಾಟ್ ತನ್ನ ಇತ್ತೀಚಿನ’ಎಲೆಕ್ಷನ್ಅಟ್ಲಾಸ್ ಆಫ್ ಇಂಡಿಯಾ’ ಬಿಡುಗಡೆ

ಬರತಕ್ಕಂತ ದಿನಗಳಲ್ಲಿ ಜನತಾ ದಳದ ಅಭ್ಯರ್ಥಿ ಬಾಲರಾಜ ಗುತ್ತೇದಾರ ಇವರ ಮುಖಾಂತರ ಈ ಭಾಗದ ಜನತಾ ಜಲಧಾರೆಯನ್ನು ಸಂಗ್ರಹ ಮುಂದು ವರೆಸಿಕೊಂಡು ಹೋಗಬೇಕೆಂದರು ತದನಂತರ ಪಟ್ಟಣದ ಪ್ರಮುಖ ಬಡಾವಣೆ ಹಾಗೂ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ರಥಯಾತ್ರ ಸಾಗಿತು.

ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಾಲರಾಜ ಗುತ್ತೇದಾರ, ಶಿವು ಅಪ್ಪಾಜಿ,ಮಾಜಿ ಅದ್ಯಕ್ಷ ಜಗನ್ನಾಥರೆಡ್ಡಿ ಗೋಟೂರ,ಯುವ ಅದ್ಯಕ್ಷ ಪವನ ಕೇರಿ, ಮಹಿಳಾ ಘಟಕ ಅದ್ಯಕ್ಷೆ ಪುಷ್ಪಾವತಿ ಗೊಬ್ಬುರ್ ಇನ್ನಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: “ಸ್ಟೆಪ್-ಅಹೆಡ್”: ಡೆಲಿವರಿ ಎಕ್ಸಿಕ್ಯೂಟಿವ್‌ಗಳ ವೃತ್ತಿ ಮಾರ್ಗದರ್ಶನಕ್ಕೆ ಸ್ವಿಗ್ಗಿ ಉಪಕ್ರಮ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here