ಅಂಕಣ ಬರಹ

“ಕಾಡಸಿದ್ಧ”ನ ಕೂಡಿದಾತನಿಗೆ ಕೇಡಿಲ್ಲ ಎಂದ ಶಿವಯೋಗಿಗಳು

ಶರಣರ ವಚನಗಳು ಬಯಲಿಗೆ ತೊಡಿಸಿದ ಬಣ್ಣಗಳು. ಶರಣರ ಅನುಭಾವದ ನುಡಿಗಳು ಕನ್ನಡ ಸಾಹಿತ್ಯದ ಒಡವೆಗಳು. ಶರಣರ ವಚನಗಳು ಅನುಭಾವದ ನುಡಿಗಳು. ಶರಣರ ವಚನಗಳು ತಾನಾರೆಂದು ತೋರುವ ಕನ್ನಡದ ಮುಕ್ತಕಗಳು. ಶರಣರ ವಚನವೆಂದರೆ ಅಷ್ಟಾವರಣ, ವಚನಗಳೆಂದರೆ ಪಂಚಾಚಾರ, ವಚನಗಳೆಂದರೆ ಷಟಸ್ಥಲಗಳು. ಅರ್ಚನೆ, ಅರ್ಪಣೆ, ಅನುಭಾವ ಇವುಗಳ ಸಂಗಮವೇ ಬಸವತತ್ವ.

ಆ ಬಸವತತ್ವವೇ ಈ ಭಾರತದ ಸತ್ವ. ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಜ ಕಟ್ಟಿದ ಬಸವಣ್ಣನವರನಂತರ ಒಬ್ಬರು ಮಹಾನುಭಾವ ಆಗಿ ಹೋಗುತ್ತಾರೆ. ಕರ್ನಾಟಕ-ಮಹಾರಾಷ್ಟ್ರಕ್ಕೆ ಭಕ್ತಿಯ ಸಂಪ್ರದಾಯದ ಬೆಸುಗೆ ಹಾಕಿದ ಶಿವಯೋಗಿ ಕಾಡಸಿದ್ಧ ಶಿವಯೋಗಿಗಳು. ದೊಡ್ಡ ಮಹಾಪುರುಷ ಆತ. ೧೭೨೫ರಲ್ಲಿ ಈ ನಾಡಿನಲ್ಲಿ ಕಾಣಿಸುತ್ತಾರೆ. “ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯ ಪ್ರಭುವೆ” ಅಂಕಿತದಲ್ಲಿ ೫೦೦ ವಚನಗಳನ್ನು ಬರೆಯುತ್ತಾನೆ. ಆ ವಚನಗಳಲ್ಲಿ ೬೧ ಶರಣರ ಸ್ಮರಣೆ ಮಾಡುತ್ತಾನೆ. ಇವರ ವಚನಗಳಲ್ಲಿ ಗುರುವಿನ ಲಕ್ಷಣಗಳು, ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಐಕ್ಯ ಈ ಷಟಸ್ಥಲಗಳನ್ನು ಕಟ್ಟಿಗನುಗುಣವಾಗಿ ಜೋಡಿಸಿಟ್ಟಿರುವುದನ್ನು ಕಾಣಬಹುದು. ಅದರೊಳಗೆ ಇಸ್ಲಾಂ ಸೂಫಿ-ಸಂತರನ್ನು ಕೊಂಡಾಡುತ್ತಾನೆ. ಭಾವೈಕ್ಯದೊಳಗೆ “ಮಹ್ಮದ್ ಅಲಿಖಾನಯ್ಯ”ನನ್ನು ಸ್ಮರಿಸುತ್ತಾರೆ.

ಇಸ್ಲಾಂ, ಹಿಂದು, ಜೈನ, ಕ್ರೈಸ್ತ, ಪಾರ್ಶಿ, ಲಿಂಗ ಇವೆಲ್ಲವೂ ಎರಡಕ್ಷರಗಳಿಂದ ಕೂಡಿವೆ. ಇವು ಸಮಾನತೆಯನ್ನು ಹೇಳುತ್ತವೆ. ಎಲ್ಲ ಧರ್ಮಗಳ ಸಾರ ಒಂದೇ ಇರುವಾಗ ನಿವ್ಯಾಕೆ ಗದ್ದಲ-ಗಲಾಟೆ ಮಾಡಿಕೊಳ್ಳುತ್ತೀರಿ ಎಂದು ಇವರು ಹೇಳುತ್ತಾರೆ. ಇನ್ನೊಬ್ಬರ ನೋವು-ನಲಿವುಗಳಲ್ಲಿ ಪರಸ್ಪರ ಭಾಗವಹಿಸುವುದೇ ಭಾವೈಕ್ಯ. ಸಿದ್ಧಪುರುಷ ಪರಂಪರೆಯಲ್ಲಿ ಅವಧೂತ, ಆರೂಢ ಪರಂಪರೆಗಳು ಬರುತ್ತವೆ. ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಇರುವ “ಕನ್ಹೇರಿ”ಯ ಸಿದ್ಧಗಿರಿ ಮಠದ ಮೂಲಗುರುಗಳು ಇವರು. ಛತ್ರಪತಿ ಶಿವಾಜಿ ಮಹಾರಾಜ ಈ ಮಠಕ್ಕೆ ಸನದು ಕೊಟ್ಟಿದ್ದ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ವಿಜ್ಞಾನದ ಓದಿನಿಂದ ಸೂರ್ಯ ಕೂಡ ಈ ವಿಶ್ವದ ಕಿಂಚತ್ ಒಂದು ನಕ್ಷತ್ರ. ಭೂಮಿಯಿಂದ ಸೂರ್ಯನಿಗಿರುವ ಅಂತರ ೯.೩ ಕೋಟಿ ಮೈಲು ಅಂತರವಿದೆ. ಭೂಮಿಯಿಂದ ಅತ್ಯಂತ ದೂರವಿರುವ ಪ್ಲೋಟೋ ಗ್ರಹ ೩೭೬ ಕೋಟಿ ಮೈಲು. ಇವುಗಳ ಜೊತೆಗೆ ಗೆಲಾಕ್ಸಿ, ನಿಹಾರಿಕೆಗಳಿವೆ. ಒಂದು ಗ್ಯಾಲಕ್ಸಿಯ ಒಂದು ತುದಿಯಿಂದ ಇನ್ನೊಂದು ತುದಿಯ ಅಂತರ ೧ ಲಕ್ಷ ಕೋಟಿ ಜ್ಯೋತಿವರ್ಷ. ಒಂದು ಗ್ಯಾಲಕ್ಸಿಯಲ್ಲಿ ೨೫ ಸಾವಿರ ಕೋಟಿ ನಕ್ಷತ್ರಗಳಿವೆ. ಒಂದು ಜ್ಯೋತಿವರ್ಷ ಅಂದರೆ ೬೦ ಸಾವಿರ ಕೋಟಿ ಮೈಲು ದೂರವಿದೆ. ಅದರಲ್ಲಿ ಒಂದು ಶೂನ್ಯವಿದೆ. ಶೂನ್ಯ ಎಂದರೆ ಎಲ್ಲವನ್ನೂ ತುಂಬಿಕೊಂಡಿರುವುದು. ಶೂನ್ಯದ ಉದ್ರಿಕ್ತ ಸ್ಥಿತಿಯೇ ಈ ವಿಶ್ವ (ಬಿಗ್ ಬ್ಯಾಂಕ್ ಥೇರಿ). ವಿಶ್ವದ ಕುರುಹು ಲಿಂಗ. ಅದುವೆ ನಮ್ಮಪ್ಪ ಬಸವಣ್ಣ ಕೊಟ್ಟ ಇಷ್ಟಲಿಂಗ. ಜಗತ್ತು ರಚಿಸಿರುವವನೇ ನಿಮ್ಮ ಕೈಯಲ್ಲಿದ್ದಾನೆ.

ಯಾವುದು ಉದ್ಭವಿಸಲು ಕಾರಣವಾಗಿದೆಯೋ, ಕೊನೆಯಲ್ಲಿ ಯಾವುದರಲ್ಲಿ ಲೀನವಾಗುವುದೋ ಅದು ಲಿಂಗ. ಎಲ್ಲದಕ್ಕೂ ಕಾರಣವಾಗಿ ಅದರಲ್ಲಿ ತಾನಿಲ್ಲದ್ದು, ಅಂಥ ಲಿಂಗವನ್ನು ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಇಷ್ಟ ಲಿಂಗ ಕೊಡುಗೆಯಾಗಿ ನೀಡಿದವರು ಬಸವಣ್ಣನವರು. ಹರಪ್ಪಾ-ಮಹಂಜೋದಾರ ಸಂಸ್ಕೃತಿಯಲ್ಲಿ ಸ್ಥಾವರಲಿಂಗವಿತ್ತು. ಅಂತಹ ವಿಶ್ಮಾತ್ಮನ ಕುರುಹು ಬಸವಣ್ಣನವರು ನಮಗೆ ಕರುಣಿಸಿದರು. ಹೀಗಾಗಿ ಬಸವಣ್ಣ ಇಷ್ಟಲಿಂಗ ಜನಕ. ನಮ್ಮ ದೃಷ್ಟಿಯಿಂದ ಅನಿಷ್ಟಗಳೆಲ್ಲ ದೂರವಾಗಲಿ, ಅನಿಷ್ಟ ಪದ್ಧತಿಗಳು ದೂರವಾಗಲೆಂದು ಇದನ್ನು ಕೊಟ್ಟಿದ್ದಾರೆ. ಅಂತಹ ಲಿಂಗದ ಬಗ್ಗೆ “ಕಾಡಸಿದ್ಧನ ಕೂಡಿದಾತನಿಗೆ ಕೇಡಿಲ್ಲವೋ” ಎಂದು ಕಾಡಸಿದ್ಧ ಶಿವಯೋಗಿಗಳು ಹೇಳುತ್ತಾರೆ.

ಜಲದೊಳಗಣ ಸೂರ್ಯನಂತೆ
ಕಾಷ್ಠದೊಳಗಿನ ಅಗ್ನಿಯಂತೆ
ಪುಷ್ಟಪದೊಳಗಣ ಪರಿಮಳದಂತೆ
ನೆಲದೊಳಗಣ ದ್ರವ್ಯದಂತೆ
ಕ್ಷೀರದೊಳಗಣ ಗ್ರತದಂತೆ
ಕಾಡನೊಳಗಾದ ಶಂಕರಪ್ರಿಯ ಚನ್ನ
ಕದಂಬಲಿಂಗ ನಿರ್ಮಾಯ ಪ್ರಭುವೆ

ಜಲದೊಳಗೆ ಸೂರ್ಯ, ಕಟ್ಟಿಗೆಯೊಳಗೆ ಅಗ್ನಿ, ಹೂವಿನೊಳಗೆ ಮಕರಂದ, ನೆಲದೊಳಗೆ ದ್ರವ್ಯ, ಹಾಲಿನೊಳಗೆ ತುಪ್ಪ ಅಡಗಿವೆ. ಆದರೆ ಇವು ಯಾರಿಗೂ ಕಾಣುವುದಿಲ್ಲ. ಹೂ ಕಾಣುತ್ತದೆ. ಮಕರಂದ ಕಾಣುವುದಿಲ್ಲ. ಒಂದು ಸಾಕಾರ ರೂಪ, ಇನ್ನೊಂದು ನಿರಾಕಾರ ರೂಪ. ನಿರಾಕಾರವನ್ನು ಯಾರೂ ಕಂಡಿಲ್ಲ. ಅದನ್ನು ಕಾಣಬೇಕಾದರೆ ನಮಗೆ ನಾವೇ ಹಾಕಿಕೊಂಡ ಬೇಲಿ ತೆಗೆದು ಹೊರಬರಬೇಕು. ಭಕ್ತನಾದವನು ಬಾಳೆಯಂತೆ ಬಾಗಿರಬೇಕು, ಮಾವಿನ ಫಲದಂತಿರಬೇಕು. ಹುಟ್ಟು ಸಾವಿನ ಮಧ್ಯದಲ್ಲಿರುವ ಜೀವನ ಮುಖ್ಯ. ಇದೆಲ್ಲವನ್ನು ಸೃಷ್ಟಿ ಮಾಡಿದಾತ ತಾನಿಲ್ಲದಂತೆ ಇದ್ದಾನೆ. ಅದನ್ನು ನಾವು ಕಾಣಬೇಕು ಎಂದು ಹೇಳಿದ ಕಾಡಸಿದ್ಧ ಶಿವಯೋಗಿಗಳು ನಮಗೆ ಆದರ್ಶ-ಮಾದರಿಯಾಗಬೇಕಿದೆ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

10 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

10 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

12 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

12 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

12 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

13 hours ago