ಬಿಸಿ ಬಿಸಿ ಸುದ್ದಿ

ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾದ ಡೇಟಾ ಎನೆಲೆಟಿಕ್ಸ್: ಮೋರೆ

ಕಲಬುರಗಿ: ಮಹಾವಿದ್ಯಾಲದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಇನಸ್ಟೀಟ್ಯೂಟ್ ಆಫ್ ಇಂಜಿನಿಯರಿಂಗ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನಿಡಲಾಯಿತು.

ಭಾರತದ ಆರ್ಥಿಕ ಬೇಳವಣಿಗೆಯಲ್ಲಿ ಡೇಟಾ ಎನೆಲೆಟಿಕ್ಸ್ ನ ಮಹತ್ವ ಮತ್ತು ಪರಿಣಾಮ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಇನಸ್ಟೀಟ್ಯೂಟ್ ಆಫ್ ಇಂಜಿನಿಯರಿಂಗ್ನ ಬಿ.ಎಸ್. ಮೋರೆ ಅವರು ವಿದ್ಯಾರ್ಥಿಗಳು ಡೇಟಾ ಎನೆಲೆಟಿಕ್ಸನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ, ವಿಶ್ವದ ಪ್ರಭಲ ಎಂಟು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು ಡೇಟಾ ಎನೆಲೆಟಿಕ್ಸನಲ್ಲಿ ತನ್ನದೆ ಛಾಪು ಮೂಡಿಸಿದೆ ಎಂದು ಹೇಳಿದರು.

ಸ್ವಾಗದ ಭಾಷಣ ಮಾಡಿದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ಸರ್ವರಿಗೂ ಸ್ವಾಗತಿಸಿ ತಮ್ಮ ವಿಭಾಗದಲ್ಲಿ ವರುಷಕ್ಕೆ ಸುಮಾರು ಮೂರು ವಿಧ್ಯಾರ್ಥಿಗಳ ಗುಂಪುಗಳು ಡೇಟಾ ಎನೆಲೆಟಿಕ್ಸ್ ನ ಮೇಲೆ ಪ್ರೋಜೆಕ್ಟಗಳನ್ನು ಮಂಡಿಸುತ್ತಿದ್ದು, ಅವುಗಳು ಉತ್ತಮ ಪ್ರೊಜೆಕ್ಟ ಎಂಬ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿವೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಅಶೋಕ ಪಾಟೀಲ ಅವರು ತಮ್ಮ ವಿಚಾರವನ್ನು ಮಂಡಿಸಿ ಡೇಟಾ ಎನೆಲೆಟಿಕ್ಸ್ ಬ್ಯಾಂಕಿಂಗ್, ವೀಮಾ, ಆರೋಗ್ಯ ಹಾಗೂ ಕೃಷಿ ವಲಯಗಳಲ್ಲಿ ಮಾಡಿದ ಕ್ರಾಂತಿಕಾರಿ ಬೆಳವಣಿಗೆಗಳನ್ನು ಹಾಗೂ ಅವುಗಳಿಂದ ಭಾರತದ ಆರ್ಥಿಕ ಸುಧಾರಣೆಯನ್ನು ಉದಾಹರಣೆಯೊಂದಿಗೆ ವಿವರಿಸಿದರು. ಇನ್ನೊಬ್ಬ ಭಾಷಣಕಾರರದಾ ಉದಯ ಎಸ್. ಬಳಿಗಾರರ ಅವರು ಬಿಗ್ ಡೇಟಾ ಎನೆಲೆಟಿಕ್ಸ್‌ನ ಮೇಲೆ ಸವಿಸ್ತಾರ ವಿವರಣೆಯನ್ನು ನೀಡಿದರು.

ಅಧ್ಯಕ್ಷೀಯ ಭಾಷಣ ಮಂಡಿಸಿದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್. ಹೆಬ್ಬಾಳ ಅವರು ಮಾತನಾಡಿ ಮಾಹಿತಿ ವಿಜ್ಞಾನ ವಿಭಾಗವು ಸಕ್ರೀಯವಾಗಿ ವಿವಿಧ ತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ ಯಶಸ್ವಿಯತ್ತ ಸಾಗುತ್ತಿರುವುದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. ಬಾಬುರಾವ ಸೇರಿಕಾರ ಹಾಗೂ ಸದಸ್ಯರಾದ ಹನುಮಯ್ಯ ಬೇಲೂರೆ ಅವರು ಉಪಸ್ಥಿತರಿದ್ದರು, ಸದಸ್ಯರಾದ ಡಾ.ಶ್ರೀಧರ ಪಾಂಡೆಯವರು ವಂದನಾರ್ಪಣೆ ಮಾಡಿದರು ಹಾಗೂ ಸಂಚಾಲಕರಾದ ವಿಭಾಗದ ಉಪ ಪ್ರಾಧ್ಯಾಪಕರಾದ ಮುಕುಂದ ಹರವಾಳಕರ ಮತ್ತು ಗುರಪ್ಪ ಕಲ್ಯಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಭಾದ ಡಾ.ವಿಶ್ವನಾಥ ಬುರಕಪಳ್ಳಿ, ನಿತಿನ ಕಟ್ಟಶೆಟ್ಟರ, ಶರಣಕುಮಾರ ಹುಲಿ, ಗೌರಿ ಪಾಟೀಲ, ರಶ್ಮೀ ತಳ್ಳಳಿ, ಗಂಗಾ ಧರಕ, ಗೀತಾ ವಿ.ಜಿ., ಮಲ್ಲಿಕಾರ್ಜುನ ರೆಡ್ಡಿ, ಶ್ರೀಮತಿ ಕವಿತಾ ಕೆ., ಅಂಬಾರಾಯ ಹಾಗೂ ಇತರರು ಈ ವಿಚಾರ ಸಂಕಿರಣದ ಉಸ್ತುವಾರಿಯನ್ನು ವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago