ಬಿಸಿ ಬಿಸಿ ಸುದ್ದಿ

ಕನ್ನಡ ಅಭಿಮಾನದ ದಿನ’ದ ನಿಮಿತ್ತ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ಆಂದೋಲನಕ್ಕೆ ಚಾಲನೆ

ಕಲಬುರಗಿ: ವರನಟ, ಕನ್ನಡಿಗರ ಆರಾಧ್ಯ ದೈವ ಡಾ.ರಾಜಕುಮಾರ ಅವರ ಜನ್ಮದಿನದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಿದ ‘ಕನ್ನಡ ಅಭಿಮಾನದ ದಿನ’ ಹಾಗೂ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ವಿಶೇಷ ಆಂದೋಲನಕ್ಕೆ ಚಾಲನೆ ನೀಡುವ ಅಪರೂಪದ ಕಾರ್ಯಕ್ರಮವೊಂದನ್ನು ನೂರಾರು ಜನರ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಜರುಗಿತು.

ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಅಭೂತಪೂರ್ವ ಸ್ಥಾನ ಪಡೆಯಬಹುದು ಎಂಬುದಕ್ಕೆ ವರನಟ ಡಾ.ರಾಜಕುಮಾರ ಅವರೇ ಸಾಕ್ಷಿ ಎಂದು ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಮಾಲೀಕಯ್ಯಾ ವ್ಹಿ.ಗುತ್ತೇದಾರ  ಹೇಳಿದರು. ಡಾ.ರಾಜಕುಮಾರ ಅವರು ಭಾಷಾ ಶಕ್ತಿಯನ್ನು ತುಂಬಾ ಬಲ್ಲವರಾಗಿದ್ದರು. ಅವರು ನಟಿಸಿದ ಚಿತ್ರಗಳು  ಉತ್ತಮ ಜೀವನಕ್ಕೆ ಮಾದರಿಯಾಗಿವೆ. ವರನಟನ ಕಲಾವಂತಿಕೆ, ಸಂಸ್ಕೃತಿ, ಮಾನವತೆ, ವಿನಯತೆ, ಸಾಮಾಜಿಕ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಡಾ.ರಾಜಕುಮಾರ ಅವರ ತತ್ವಗಳು ಕಾಲ, ದೇಶ, ಭಾಷೆ, ಜಾತಿಗಳನ್ನು ಗೆದ್ದು ನಿಂತಿವೆ. ಅವು ನಿತ್ಯ ನೂತನ, ಸತ್ಯ ದರ್ಶನವಾಗಿವೆ ಎಂದು ಹೇಳಿದರು.

ಡಾ.ರಾಜಕುಮಾರ ಅವರು ಒಬ್ಬ ಕಲಾವಿದರಲ್ಲದೇ ಅತ್ಯುತ್ತಮ ಮಾನವೀಯ ಅಂತ:ಕರಣವುಳ್ಳ ಮಹಾನ್ ಮಾನವತಾವಾದಿಯಾಗಿದ್ದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ನಟನೊಬ್ಬನ ಕನ್ನಡ ಪ್ರೇಮವನ್ನು ಸಾರಿದಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ರಚನಾತ್ಮಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಡಿಮೆ ಸಮಯದಲ್ಲಿ ಜನರ ಹೃದಯವನ್ನು ಗೆಲ್ಲುವ ಕಾರ್ಯ ಮಾಡಿದೆ. – ಮಾಲೀಕಯ್ಯಾ ವ್ಹಿ.ಗುತ್ತೇದಾರ, ಮಾಜಿ ಸಚಿವ.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕಲಾ ಲೋಕದ ಧೃವತಾರೆ, ಕರುನಾಡಿನ ಸುಸಂಪನ್ನ ಸಂಸ್ಕೃತಿಯ ರಾಯಭಾರಿ, ವಿನಯವಂತಿಕೆಯ ಪ್ರತೀಕದಂತಿದ್ದ ವರನಟ ಡಾ.ರಾಜಕುಮಾರ ಅವರು ಅಸಂಖ್ಯಾ ಕನ್ನಡಿಗರ ಆರಾಧ್ಯ ದೈವರಾಗಿದ್ದರು ಎನ್ನುವುದಕ್ಕೆ ಅವರ ಅನುಪಮವಾದ ವ್ಯಕ್ತಿತ್ವವೇ ಕಾರಣ. ಕನ್ನಡ ನೆಲ, ಜಲ, ಭಾಷೆಗೆ ಆಪತ್ತು ಎರಗಿದಾಗಲೆಲ್ಲಾ ಅವರು ಅದರ ರಕ್ಷಣೆಗೆ ಮುಂದಾದರು. ಪ್ರವಾಹ, ಬರ ಮುಂತಾದ ಪ್ರಾಕೃತಿಕ ವಿಕೋಪಗಳು ಎದುರಾದಾಗಲೂ ರಾಜ್ಯದ ಜನತೆಗೆ ನೆರವಾಗಿ ಮಾನವೀಯತೆ ಮೆರೆದಿದ್ದರು. ಕನ್ನಡ ಕಲೆ ಹಾಗೂ ಸಾಂಸ್ಕೃತಿಕ ಡಾ.ರಾಜಕುಮಾರ ಅವರು ಇಂದಿಗೂ ಪ್ರಸ್ತುತ. ಅನೇಕ ಹೋರಾಟಗಾರರಿಗೆ ಡಾ.ರಾಜಕುಮಾರ ಹೆಸರೇ ಬಹು ದೊಡ್ಡ ಸ್ಪೂರ್ತಿ ಎಂದ ಅವರು, ಇವರ ಜನ್ಮದಿನದಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ಅಭಿಮಾನದ ದಿನ’ ಆಚರಣೆ ಜತೆಗೆ ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ ಎಂಬ ಆಂದೋಲನ ಶುರು ಮಾಡಿದ್ದು ಒಂದು ಇತಿಹಾಸವೇ ಸರಿ ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ: ಶರಣು, ಮಹಾರಾಜ, ಸತ್ಯಂಪೇಟೆಗೆ ಕಾಯಕಯೋಗಿ-೨೦೨೨ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಭಾಗದ ಪ್ರಸಿದ್ಧ ಗಾಯಕರು ತಮ್ಮ ಸುಮಧುರ ಕಂಠದಿಂದ ಅನೇಕ ಹಾಡುಗಳನ್ನು ಹಾಡುವ ಮೂಲಕ ಡಾ.ರಾಜ್ ಅವರನ್ನು ಮತ್ತೆ ನೆನಪಿಸಿಕೊಟ್ಟ ಅದ್ಭುತ ಪ್ರಸಂಗ ಕನ್ನಡ ಭವನದಲ್ಲಿ ಜರುಗಿತು. ಸಂಗೀತ ಪ್ರಾಧ್ಯಾಪಕಿ ಡಾ.ಛಾಯಾ ಭರತನೂರ, ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ, ವಿನೋದ ಜೇನವೇರಿ, ಶಕುಂತಲಾ ಪಾಟೀಲ ಜಾವಳಿ, ಶಿಲ್ಪಾ ಜೋಶಿ, ಧರ್ಮಣ್ಣ ಹೆಚ್.ದನ್ನಿ, ನಾಗೇಂದ್ರಪ್ಪ ಮಾಡ್ಯಾಳೆ, ರಾಜೇಂದ್ರ ಮಾಡಬೂಳ, ಸಂಗೀತ ಕಲಾವಿದರಾದ ಸೂರ್ಯಕಾಂತ ಡುಮ್ಮಾ, ಕಲ್ಪನಾ ಗೋಲ್ಡಸ್ಮಿತ್ ವೇದಿಕೆ ಮೇಲಿದ್ದರು.

ವರನಟ ಡಾ.ರಾಜಕುಮಾರ ನೆನಪಿಗಾಗಿ ತಮ್ಮ ವೃತ್ತಿಯ ಜತೆಗೆ ಕನ್ನಡ ಭಾಷಾ ಬೆಳವಣಿಗೆಗಾಗಿ ಶ್ರಮಿಸುತ್ತಿರುವ  ಮಹನೀಯರಾದ ಸಂಜೀವಕುಮಾರ ಡೊಂಗರಗಾವ, ಎಸ್.ಎಸ್.ಮಠಪತಿ, ಡಾ.ಸೀಮಾ ಪಾಟೀಲ, ಶಂಭುಲಿಂಗ ಬುಳ್ಳಾ, ಡಾ.ರವೀಂದ್ರ ಹತ್ತಿ, ಅಕ್ಕಮ್ಮ ಗುರುಗುಂಟಿ, ಚಂದ್ರಕಲಾ ಜಾಗೀರದಾರ, ರಾಜು ಕೋಬಾಳ ಶಹಾಬಾದ, ನಾಗಪ್ಪ ಮುನ್ನೋಳ್ಳಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಇದನ್ನೂ ಓದಿ: ಶರಣು, ಮಹಾರಾಜ, ಸತ್ಯಂಪೇಟೆಗೆ ಕಾಯಕಯೋಗಿ-೨೦೨೨ ಪ್ರಶಸ್ತಿ

ಪ್ರಮುಖರಾದ ವಿಶ್ವನಾಥ ರೇವೂರ, ಕಾಡಸಿದ್ಧ ಜಮಶೆಟ್ಟಿ,  ಡಾ.ವೇಣುಗೋಪಾಲ ದೇಶಪಾಂಡೆ, ಶಿವಲೀಲಾ ತೆಗನೂರ, ಕವಿತಾ ದೇಗಾಂವ, ಎಂ.ಬಿ.ನಿಂಗಪ್ಪ, ಸಿದ್ಧಾರಾಮ ಹಂಚನಾಳ, ಜಗದೀಶ ಮರಪಳ್ಳಿ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಡಾ.ರಾಜಶೇಖರ, ಶಾಮರಾವ ಪಾಟೀಲ ಯಡ್ಡಳ್ಳಿ, ಬಾಬುರಾವ ಪಾಟೀಲ, ವೀರಸಂಗಪ್ಪ ಸುಲೇಗಾಂವ, ವಿಜಯಕುಮಾರ ಹಾಬಾನೂರ,  ಶಿವಾನಂದ ಮಠಪತಿ, ಬಸವರಾಜ ಸಾಲಿ, ಶಿವಲಿಂಗಪ್ಪ ಅಷ್ಠಗಿ, ಹೆಚ್.ಹೆಸ್.ಬರಗಾಲಿ ಸೇರಿದಂತೆ ಹಲವರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago