ಬಿಸಿ ಬಿಸಿ ಸುದ್ದಿ

ಮುಷ್ಠಹಳ್ಳಿ:ಡಾ:ಬಿ.ಆರ್ ಅಂಬೇಡ್ಕರ್ ೧೩೧ನೇ ಜಯಂತಿ

ಸುರಪುರ: ತಾಲೂಕಿನ ಮುಷ್ಠಹಳ್ಳಿ ಗ್ರಾಮದಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಪ್ರೋಫೆಸರ್ ಡಾ:ಹಣಮಂತ್ರಾಯ ಚಂದ್ಲಾಪುರ ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿನಿಂದ ಬದುಕಿನುದ್ದಕ್ಕೂ ನೋವನ್ನುಂಡು ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದ್ದಾರೆ.ಅಂತಹ ಮಹನಿಯನ ಜಯಂತಿಯನ್ನು ಈ ದೇಶದ ಎಲ್ಲರು ಆಚರಿಸಬೇಕು ಎಂದು ಅಂಬೇಡ್ಕರರ ಸಮಗ್ರ ಜೀವನದ ಕುರಿತು ತಿಳಿಸಿದರು.

ಇದನ್ನೂ ಓದಿ: ಕಾರ್ಮಿಕರಿಗೆ ಉಪಕರಣಗಳ ಕಿಟ್ ವಿತರಿಸಲು ಆಗ್ರಹ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ ದಲಿತ ಪ್ಯಾಂಥರ‍್ಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸ್ಮನಿ ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ದಲಿತರ ಪಾಲಿನ ಬೆಳಕಾಗಿದ್ದಾರೆ.ಈ ದೇಶದ ಎಲ್ಲಾ ದೀನ ದಲಿತರು ಶಿಕ್ಷಣ ಪಡೆಯಲು ಅಂಬೇಡ್ಕರರು ಕಾರಣ,ಎಲ್ಲರಿಗೂ ಮೀಸಲಾತಿಯನ್ನು ಕಲ್ಪಿಸಿ ಸಮಗ್ರ ಸಮಾಜದ ಅಭಿವೃಧ್ಧಿಗೆ ಒತ್ತು ನೀಡಿದ್ದಾರೆ.ದೇಶದಲ್ಲಿ ವರ್ಣ ಭೇದ ನೀತಿ ತಾಂಡವವಾಡುತ್ತಿದ್ದ ಸಮಯದಲ್ಲಿ ಮಾನವರಲ್ಲಿ ಸಮಾನತೆ ಬರಲು ಅಂಬೇಡ್ಕರರು ಕಾರಣರಾಗಿದ್ದಾರೆ.ಬಾಬಾ ಸಾಹೇಬರು ನೀಡಿದ ಈ ಎಲ್ಲಾ ಕೊಡುಗೆಗಳನ್ನು ಪಡೆದುಕೊಂಡು ದೇಶದಲ್ಲಿನ ಎಲ್ಲಾ ದೀನ ದಲಿತ ಶೋಷಿತರು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಹಕ್ಕನ್ನು ಪಡೆಯಬೇಕು ಎಂದರು.

ಗ್ರಾಮ ಪಂಚಾಯತಿ ಸದಸ್ಯೆ ಚಂದಮ್ಮ ರಾಮಚಂದ್ರಪ್ಪ ಕಟ್ಟಿಮನಿ ಉದ್ಘಾಟಿಸಿದರು,ಮುಖಂಡ ಹಣಮಂತ ಕೆಸಿಪಿ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಬಸವರಾಜ ಬಿರೇದಾರ,ದೇವಿಂದ್ರಪ್ಪ ಗಡ್ಡಿ,ಸಾಬಣ್ಣ ತಳವಾರ,ಗುರಪ್ಪ ಹೊಸ್ಮನಿ,ಸಾಯಿಬಣ್ಣ ಅಮ್ಮಾಪುರ,ಮಾನಪ್ಪ ಭಂಡಾರಿ ಶೆಳ್ಳಗಿ,ತಿಪ್ಪಣ್ಣ ಶೆಳ್ಳಗಿ ವೇದಿಕೆ ಮೇಲಿದ್ದರು.

ಇದನ್ನೂ ಓದಿ: ಕನ್ನಡ ಅಭಿಮಾನದ ದಿನ’ದ ನಿಮಿತ್ತ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ಆಂದೋಲನಕ್ಕೆ ಚಾಲನೆ

ಕಾರ್ಯಕ್ರಮದಲ್ಲಿ ಮಲ್ಲು ಕೆಸಿಪಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಚಂದ್ರಶೇಖರ ಸ್ವಾಗತಿಸಿದರು,ಅಂಬ್ರೇಶ ನಿರೂಪಿಸಿದರು,ತಮ್ಮಣ್ಣ ಕೆಸಿಪಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಂಕರ ಶಾಬಾದ,ಮಲ್ಲು ಕಟ್ಟಿಮನಿ,ನಾಗಪ್ಪ ಕಟ್ಟಿಮನಿ,ಮರೆಪ್ಪ ಚಲುವಾದಿ,ದೇವಪ್ಪ ತಳವಾರ,ಪ್ರಕಾಶ ಕಟ್ಟಿಮನಿ,ಬಸವರಾಜ ಹೊಸ್ಮನಿ,ಆದಪ್ಪ ಹೊಸ್ಮನಿ,ಯಲ್ಲಪ್ಪ ಕುರಿ,ಮಲ್ಲಪ್ಪ ಹೊಸ್ಮನಿ,ಬಸವರಾಜ ಹೊಸ್ಮನಿ,ರಮೇಶ ಗಡ್ಡಿ ಸೇರಿದಂತೆ ಜಯಂತ್ಯೋತ್ಸವ ಸಮಿತಿಯ ಅನೇಕ ಸದಸ್ಯರಿದ್ದರು.

ಇದನ್ನೂ ಓದಿ: ಶರಣು, ಮಹಾರಾಜ, ಸತ್ಯಂಪೇಟೆಗೆ ಕಾಯಕಯೋಗಿ-೨೦೨೨ ಪ್ರಶಸ್ತಿ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago