ಸುರಪುರ: ಜಿಲ್ಲೆಯಲ್ಲಿನ ಕಟ್ಟಡ ಕಾರ್ಮಿಕರಿಗೆ ಸರಕಾರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಪಕರಣಗಳ ಕಿಟ್ ವಿತರಿಸಲು ಆಗ್ರಹಿಸಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿರು ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು,ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಅದರಂತೆ ಯಾದಗಿರಿ ಜಿಲ್ಲೆಯಾದ್ಯಂತ ಮರಳು ಸಾಗಾಟ ಇಲ್ಲದ್ದರಿಂದ ಕಟ್ಟಡ ಕಾಮಗಾರಿಗಳು ನಿಂತುಹೋಗಿದ್ದೂ ಇದರಿಂದ ಕಾರ್ಮಿಕರು ಸಂಕಷ್ಟ ಹೆದರಿಸುವಂತಾಗಿದ್ದು ಸರಕಾರ ಕಾರ್ಮಿಕರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕನ್ನಡ ಅಭಿಮಾನದ ದಿನ’ದ ನಿಮಿತ್ತ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ಆಂದೋಲನಕ್ಕೆ ಚಾಲನೆ
ಅಲ್ಲದೆ ಮುಂಬರು ಕಾರ್ಮಿಕರ ದಿನದಂದು ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಕಟ್ಟಡ ನಿರ್ಮಾಣದಲ್ಲಿ ಅವಶ್ಯವಿರುವ ಮಷಿನ್,ಎಲೆಕ್ಟ್ರೀಷಿಯನ್,ಪ್ಲಂಬರ್ ಹಾಗೂ ಪೇಂಟರ್‌ಗಳಿಗೆ ಅಗತ್ಯವಿರುವ ಉಪಕರಣಗಳ ಕಿಟ್ ವಿತರಣೆ ಮಾಡುವಂತೆ ಮನವಿ ಮಾಡಿ ನಂತರ ಕಾರ್ಮಿಕ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶಪ್ಪ ಎಸ್.ಹೆಮನೂರ,ತಾಲೂಕು ಗೌರವಾಧ್ಯಕ್ಷ ತಿಪ್ಪಣ್ಣ ಪಾಟೀಲ್,ತಾಲೂಕು ಅಧ್ಯಕ್ಷ ಮರೆಪ್ಪ ಕಾಟಮಳ್ಳಿ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ರಾಘವೇಂದ್ರ ಮೈಲಾಪುರ, ಸಂಜೀವಎಲ್. ಗುಪ್ತಾ ಅಧಿಕಾರಸ್ವೀಕಾರ”