ಬಿಸಿ ಬಿಸಿ ಸುದ್ದಿ

“ನಮ್ಮ ಸಮಾಜ ನಮ್ಮ ಹೆಮ್ಮೆ” ಸ್ಮರಣೋತ್ಸವ

ಕಲಬುರಗಿ: ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಅಡಿಯಲ್ಲಿ “ನಮ್ಮ ಸಮಾಜ ನಮ್ಮ ಹೆಮ್ಮೆ” ಎಂಬ ಶಿರೋನಾಮೆಯಲ್ಲಿ ಸ್ಮರಣೋತ್ಸವ  ಕಾರ್ಯಕ್ರಮ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ವಿನೋದ ಕುಮಾರ ಜೇನವೆರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಶಿವೈಕ ಮಲ್ಲಪ್ಪ ಸಿ0ಹಾಶನ ರವರು ನಮ್ಮ ಹೆಮ್ಮೆ ನಮ್ಮ ವಿಷಯವಾಗಿದೆ. ಇತಿಹಾಸ ಅರಿಯದವರು ಇತಿಹಾಸ ಶೃಸ್ಟಿಸಲಾರರು, ಎನ್ನುವ ಹಾಗೆ, ನಮ್ಮ ಹಿರಿಯರ ಕಾರ್ಯ ತಿಳಿದಾಗಲೇ ನಮಗೂ ಸಮಾಜಕ್ಕೆ ಹೀಗೂ ಸೇವೆ ಮಾಡಬಹುದು ಎನ್ನುವಕಲ್ಪನೆ ಮೂಡುತದೆ ಎಂದು ಹೇಳಿದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕ.ಸಾ.ಪ ದ ಅಧ್ಯಕ್ಷರು ಲಿ. ಮಲ್ಲಪ್ಪ ರವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು 60 ನೇ ಪುಣ್ಯಸ್ಮರಣೋತ್ಸವದ  ಅಂಗವಾಗಿ ಮಾತನಾಡಿದ ವಿಜಯ ಕುಮಾರ ಪಾಟೀಲ್ ತೆಗಲತಿಪ್ಪಿ ಯವರು ಇಂದು ನಾವು ಬಸವೇಶ್ವರ ಜನ್ಮ ಸ್ಥಳವಾದ ಬಾಗೇವಾಡಿ ಯನ್ನು ಬಸವನ ಬಾಗೇವಾಡಿ ಎಂದು ನಾಮಕರಣ ವಾಗುವಲ್ಲಿ ಇವರ ಸೇವೆಯೇ ಮೂಲ ಕಾರಣ ಎನ್ನುವದಕ್ಕೆ ದೇವಸ್ಥಾನದ ಪಕ್ಷಿಮ ದ್ವಾರದ ಬಳಿ ಇವರ ಮೂರ್ತಿ ಮತ್ತು ಅವರ ಸಂಕ್ಷಿಪ್ತ ಪರಿಚಯದ ನುಡಿಗಳ್ಳನ್ನು ನೋಡಿ ಓದಬಹುದು ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಹಾಗೂ ಕ.ಸಾ.ಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ನಮ್ಮ ವಚನೋತ್ಸವ ಪ್ರತಿಷ್ಠಾನದಲ್ಲಿ ವಚನ ಸಾಹಿತ್ಯ ಉಳಿಸಿ, ಬೆಳಿಸಿ ಎನ್ನುವ ಮುಖ್ಯ ಉದ್ದೇಶಗಳಲ್ಲಿ ಇಂತಹ ಹಿರಿಯ ಧಾರ್ಮಿಕ ಕಾರ್ಯ ವನ್ನು ಮಾಡಿದ ವ್ಯಕ್ತಿಗಳ ಪರಿಚಯ ಮಾಲೆ ಕಾರ್ಯಕ್ರಮಗಳು ಇನ್ನೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತೆವೆ ಎಂದು ತಿಳಿಸಿದರು.

ಇದನ್ನೂ ಓದಿ: ಚಿಂಚೋಳಿ: ಜೆಡಿಎಸ್ ಗೆ ಮೋಹಿನ್ ಮೋಮಿನ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುತ್ರಪ್ಪ ಭಾವಿ ವಹಿಸಿದ್ದರು. ದಾಸಿಮಯ್ಯನವರ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ ಜಮಖಂಡಿ, ತೊಗಟವೀರ ಸಮಾಜದ ಶ್ರೀನಿವಾಸ, ರಾಜೇಂದ್ರ , ಶರಣಪ್ರಸಾದ ಜೇನವೆರಿ, ಹಿರಿಯ ಸಾಹಿತಿ, ಗುಂಡೇರಾವ ಮೂಡಭಿ, ಹಿರಿಯ ವಕೀಲರಾದ ಶ್ರೀ. ಶಿವಲಿಂಗಪ್ಪಾ ಅಷ್ಟಗಿ ಅಲ್ಲೆದೆ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago