ಕಲಬುರಗಿ: ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಅಡಿಯಲ್ಲಿ “ನಮ್ಮ ಸಮಾಜ ನಮ್ಮ ಹೆಮ್ಮೆ” ಎಂಬ ಶಿರೋನಾಮೆಯಲ್ಲಿ ಸ್ಮರಣೋತ್ಸವ ಕಾರ್ಯಕ್ರಮ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ವಿನೋದ ಕುಮಾರ ಜೇನವೆರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಶಿವೈಕ ಮಲ್ಲಪ್ಪ ಸಿ0ಹಾಶನ ರವರು ನಮ್ಮ ಹೆಮ್ಮೆ ನಮ್ಮ ವಿಷಯವಾಗಿದೆ. ಇತಿಹಾಸ ಅರಿಯದವರು ಇತಿಹಾಸ ಶೃಸ್ಟಿಸಲಾರರು, ಎನ್ನುವ ಹಾಗೆ, ನಮ್ಮ ಹಿರಿಯರ ಕಾರ್ಯ ತಿಳಿದಾಗಲೇ ನಮಗೂ ಸಮಾಜಕ್ಕೆ ಹೀಗೂ ಸೇವೆ ಮಾಡಬಹುದು ಎನ್ನುವಕಲ್ಪನೆ ಮೂಡುತದೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕ.ಸಾ.ಪ ದ ಅಧ್ಯಕ್ಷರು ಲಿ. ಮಲ್ಲಪ್ಪ ರವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು 60 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮಾತನಾಡಿದ ವಿಜಯ ಕುಮಾರ ಪಾಟೀಲ್ ತೆಗಲತಿಪ್ಪಿ ಯವರು ಇಂದು ನಾವು ಬಸವೇಶ್ವರ ಜನ್ಮ ಸ್ಥಳವಾದ ಬಾಗೇವಾಡಿ ಯನ್ನು ಬಸವನ ಬಾಗೇವಾಡಿ ಎಂದು ನಾಮಕರಣ ವಾಗುವಲ್ಲಿ ಇವರ ಸೇವೆಯೇ ಮೂಲ ಕಾರಣ ಎನ್ನುವದಕ್ಕೆ ದೇವಸ್ಥಾನದ ಪಕ್ಷಿಮ ದ್ವಾರದ ಬಳಿ ಇವರ ಮೂರ್ತಿ ಮತ್ತು ಅವರ ಸಂಕ್ಷಿಪ್ತ ಪರಿಚಯದ ನುಡಿಗಳ್ಳನ್ನು ನೋಡಿ ಓದಬಹುದು ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಹಾಗೂ ಕ.ಸಾ.ಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ನಮ್ಮ ವಚನೋತ್ಸವ ಪ್ರತಿಷ್ಠಾನದಲ್ಲಿ ವಚನ ಸಾಹಿತ್ಯ ಉಳಿಸಿ, ಬೆಳಿಸಿ ಎನ್ನುವ ಮುಖ್ಯ ಉದ್ದೇಶಗಳಲ್ಲಿ ಇಂತಹ ಹಿರಿಯ ಧಾರ್ಮಿಕ ಕಾರ್ಯ ವನ್ನು ಮಾಡಿದ ವ್ಯಕ್ತಿಗಳ ಪರಿಚಯ ಮಾಲೆ ಕಾರ್ಯಕ್ರಮಗಳು ಇನ್ನೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತೆವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿಂಚೋಳಿ: ಜೆಡಿಎಸ್ ಗೆ ಮೋಹಿನ್ ಮೋಮಿನ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುತ್ರಪ್ಪ ಭಾವಿ ವಹಿಸಿದ್ದರು. ದಾಸಿಮಯ್ಯನವರ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ ಜಮಖಂಡಿ, ತೊಗಟವೀರ ಸಮಾಜದ ಶ್ರೀನಿವಾಸ, ರಾಜೇಂದ್ರ , ಶರಣಪ್ರಸಾದ ಜೇನವೆರಿ, ಹಿರಿಯ ಸಾಹಿತಿ, ಗುಂಡೇರಾವ ಮೂಡಭಿ, ಹಿರಿಯ ವಕೀಲರಾದ ಶ್ರೀ. ಶಿವಲಿಂಗಪ್ಪಾ ಅಷ್ಟಗಿ ಅಲ್ಲೆದೆ ಇತರರು ಉಪಸ್ಥಿತರಿದ್ದರು.