ಬಿಸಿ ಬಿಸಿ ಸುದ್ದಿ

ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ರೈತ ಸಮ್ಮೇಳನ

ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ ಮತ್ತು ಆತ್ಮ ಕೃಷಿ ಇಲಾಖೆ, ಕಲಬುರಗಿ ಇವರ ಸಂಯುಕ್ತ ಆಶ್ರಯದೊಂದಿಗೆ ಅಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಿಸಾನ್ ಸಮ್ಮೇಳನವನ್ನು ಜಿಲ್ಲಾ ಪಂಚಾಯತ್, ಕಲಬುರಗಿಯ ಮುಖ್ಯ ಕಾರ್ಯನಿರ್ವಾಗಹಕ ಅಧಿಕಾರಿಯವರಾದ ದಿಲೀಪ್ ಸಸಿ ರವರು ಸಹಜ ಮತ್ತು ಸಾವಯವಕೃಷಿಯ ಹಸ್ತಪ್ರತಿಗಳನ್ನು ಬಿಡುಗಡೆ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರೈತರು ವೈಜ್ಞಾನಿಕ ತಂತ್ರಜ್ಞಾನ ಕೃಷಿಯಲ್ಲಿ ಅಳವಡಿಸಿಕೊಂಡು, ಹವಾಮಾನಕ್ಕೆ ಅನುಗುಣವಾಗಿ ತಜ್ಞರ ಮಾಹಿತಿ ಪಡೆದು ಬೇಸಾಯಕ್ರಮ ಕೈಗೊಳ್ಳಲು ರೈತರಿಗೆಕರೆ ನೀಡಿದರು.

ಇದನ್ನೂ ಓದಿ: ದತ್ತಾತ್ರೇಯ ಪಾಟೀಲ ರೇವೂರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಾಮಾಗ್ರಿ ವಿತರಣೆ

ಲೀಡ್ ಬ್ಯಾಂಕ್‌ ಉಪನಿರ್ದೇಶಕರಾದ ಶ್ರೀಇಮತಿಯಾಜ ಹಸನ ರವರು ಮಾತನಾಡಿ ಕಿಸಾನ್‌ ಕ್ರೆಡಿಟ್‌ ಕಾರ್ಡನ ಉಪಯೋಗದ ಬಗ್ಗೆ ಹಾಗೂ ಕೃಷಿಯಲ್ಲಿ ಬ್ಯಾಂಕುಗಳ ಪಾತ್ರದಕುರಿತು ಮಾಹಿತಿ ತಿಳಿಸಿದರು. ಜಂಟಿ ಕೃಷಿ ನಿರ್ದೇಶಕರಾದ ಸೂಗುರರವರು ಮಾತನಾಡಿ ಕೃಷಿ ಇಲಾಖೆಯ ಸಾಧನೆ ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಉಪ ಕೃಷಿ ನಿರ್ದೇಶಕರಾದ ಅನುಸೂಯ ಹೂಗಾರರವರುಆತ್ಮ ಯೋಜನೆಗಳ ವಿವರಣೆಯ ನೀಡಿದರು. ಕೃಷಿ ಮಹಾವಿದ್ಯಾಲಯ, ಕಲಬುರಗಿ ಡೀನ್ (ಕೃಷಿ) ರಾದಡಾ.ಸುರೇಶ್‌ಎಸ್. ಪಾಟೀಲ್‌ ರವರು ಕೃಷಿಯಲ್ಲಿ ಖರ್ಚುವೆಚ್ಚ ಹಾಗೂ ವಿವಿದ ಕಡಿಮೆ ಖರ್ಚಿನ ಕೃಷಿಯ ಅನುಕೂಲಗಳನ್ನು ವಿವರಿಸಿದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಧಾನೋಜಿರವರು ಮಾತನಾಡಿ ನೂತನ ತಾಂತ್ರಿಕತೆಯನ್ನು ಹೊರತರಲು ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರದ ವಿಜ್ಞಾನಿಗಳು ನಿರಂತರ ಸಂಶೋಧನೆ ಪ್ರಗತಿಯಲ್ಲಿದೆ, ಶೂನ್ಯ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿಗೆ ವಿಜ್ಞಾನಿಗಳು ಒತ್ತು ನೀಡುತ್ತಿದ್ದಾರೆಂದು ತಿಳಿಸಿದರು.

ಇದನ್ನೂ ಓದಿ: ತೈಲ ಬೆಲೆ ಏರಿಕೆ ವಿರೋಧಿಸಿ ಕರುನಾಡ ವಿಜಯ ಸೇನೆ ಪ್ರತಿಭಟನೆ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಹಮ್ಮಿಕೊಂಡ ನೇರಸಂವಾದ ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ಸುಂಟನೂರಗ್ರಾಮದ ಶ್ರೀ ವಿಠಲ್ ತಳವಾರ್ ರವರುತನ್ನ ಕೃಷಿ ಸಾಧನೆಯನ್ನುಕೇಂದ್ರ ಕೃಷಿ ಮಂತ್ರಿಯೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡರು. ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ವಿವಿಧ ಬ್ಯಾಂಕಗಳ ಸಿಬ್ಬಂದಿಗಳು ರೈತರಿಗೆ ಕೃಷಿ ಸಾಲದ ಬಗ್ಗೆ ಮಾಹಿತಿ ನೀಡಿದರು. ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿ ಹಿರಿಯ ವಿಜ್ಞಾನಿಗಳಾದ ಡಾ.ಪಂಡಿತ್‌ರಾಠೋಡ್‌ರವರು ಸಾವಯವ ಕೃಷಿ ಮತ್ತು ನೈಸರ್ಗಿಕಕೃಷಿಯ ಮಾಹಿತಿ ನೀಡಿದರು.

ವಿಜ್ಞಾನಿಯಾದಡಾ. ಶಿವಕುಮಾರ ಚಿಂಚೂರ್‌ ಕರ್‌ರವರು ಕ್ಷೇತ್ರ ಪ್ರಾತ್ಯಕ್ಷಿಯ ಮೂಲಕ ಸಾವಯವ ಕೃಷಿಯ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿ ರವರು ಪ್ರಾಸ್ತಾವಿಕ ನುಡಿ ಹಾಗೂ ಅತಿಥಿಗಳಿಗೆ ಸ್ವಾಗತಿಸಿದರು. ಡಾ. ಯುಸುಪ್‌ ಅಲಿ ರವರುಕಾರ್ಯಕ್ರಮವನ್ನು ನಿರುಪಿಸಿದರು ಹಾಗೂ ಡಾ.ಜಹೀರ್‌ ಅಹೆಮದ್‌ರವರು ಕಾರ್ಯಕ್ರಮವನ್ನು ವಂದಿಸಿದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಡಾ. ವಾಸುದೇವ ನಾಯ್ಕ್, ಡಾ.ಮಂಜುನಾಥ ಪಾಟೀಲ್‌ಡಾ. ಶ್ರೀನಿವಾಸ ಬಿ.ವಿ, ನಬಾರ್ಡ್, ಕಲಬುರಗಿಯ ವ್ಯವಸ್ಥಾಪಕರಾದ ರಮೇಶ ಭಟ್ಟ್, ರೈತ ಮೋರ್ಚಾದ ಮುಖ್ಯಸ್ಥರಾದ ಶ್ರೀ ರಮೇಶದುತ್ತರಗಾಂವ ಹಾಗೂ ೨೫೦ ಕ್ಕಿಂತಲೂ ಹೆಚ್ಚು ರೈತರು ಕೀಸಾನ ರೈತ್ ಸಮ್ಮೇಳನ ಭಾಗವಹಿಸಿದರು.

ಹೈದ್ರಾಬಾದ್, ನಿಕ್ರಾ ಹವಾಮಾನ್ ಸೈರಣೆಯೋಜನೆಯಡಿಯಲ್ಲಿಉತ್ತಮರೈತನೆಂದು ಹೆಗ್ಗಳಿಕೆಯನ್ನು ಮೇಳಕುಂದಾ (ಬಿ) ಗ್ರಾಮದ ಶ್ರೀ ಮಲ್ಲಿನಾಥ ಕೊಳ್ಳುರವರಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವಾಹಕ ಅಧಿಕಾರಿಯವರಿಂದ ಸನ್ಮಾನಿಸಲಾಯಿತು.

ಇದನ್ನೂ ಓದಿ: ಚಿಂಚೋಳಿ: ಜೆಡಿಎಸ್ ಗೆ ಮೋಹಿನ್ ಮೋಮಿನ್

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago