ತೈಲ ಬೆಲೆ ಏರಿಕೆ ವಿರೋಧಿಸಿ ಕರುನಾಡ ವಿಜಯ ಸೇನೆ ಪ್ರತಿಭಟನೆ

1
34

ಕಲಬುರಗಿ: ಪೆಟ್ರೋಲ್, ಡಿಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕರುನಾಡ ವಿಜಯ ಸೇನೆಯ ಜಿಲ್ಲಾ ಅಧ್ಯಕ್ಷ ಪುನೀತರಾಜ ಸಿ.ಕವಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: “ನಮ್ಮ ಸಮಾಜ ನಮ್ಮ ಹೆಮ್ಮೆ” ಸ್ಮರಣೋತ್ಸವ 

Contact Your\'s Advertisement; 9902492681

ರಾಜ್ಯದ ಮುಖ್ಯಮಂತ್ರಿಗಳಾದ ತಾವು ರಾಜ್ಯದ ಸಾಮಾನ್ಯ ಜನರ ಹಿತಕಾಪಾಡುವಲ್ಲಿ ವಿಫಲವಾಗಿದ್ದೀರಿ. ಏಕೆಂದರೆ ರಾಜ್ಯದಲ್ಲಿ ೧ ಲೀಟರ್ ಪೆಟ್ರೋಲಕ್ಕೆ ರೂ. ೧೧೧-೦೦ ಮತ್ತು ಡಿಸೆಲ್ ಬೆಲೆ ರೂ. ೧೦೦ ಮತ್ತು ಅಡುಗೆ ಅನಿಲ ರೂ. ೯೮೦ ಒಂದು ಸಿಲೆಂಡರಕ್ಕೆ ರಾಜ್ಯದ ಹಳ್ಳಿಗಳಲ್ಲಿ ಕಟ್ಟಿಗೆಯಿಂದ ಒಲೆಗಳು ಇದ್ದವು. ಆದರೆ ದೇಶದ ಪ್ರಧಾನಿಗಳು ರಾಜ್ಯದ ಪ್ರತಿಯೊಂದು ಹಳ್ಳಿಯ ಸಾಮಾನ್ಯ ಬಡಜನಗಳಿಗೆ ಪುಕ್ಕಟ್ಟೆಯಾಗಿ ಗ್ಯಾಸ್ ಸಿಲೆಂಡರಗಳು ನೀಡಿದ್ದರು. ಆದರೆ ಈಗ ಅಡುಗೆ ಅನಿಲ ಬೆಲೆ ಮುಗಿಲಿಗೆ ಮುಟ್ಟಿದೆ. ಇದರಿಂದಾಗಿ ಗ್ರಾಮೀಣ ಜನಸಾಮಾನ್ಯರ ಸ್ಥಿತಿ ತುಂಬಾ ಕಷ್ಟದಲ್ಲಿದ್ದಾರೆ. ಹೀಗೆ ಮುಂದುವರೆದರೆ ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಹೀಗಾಗಿ ನಮ್ಮ ಸಂಘಟನೆಯ ಮನವಿಯನ್ನು ಪುರಸ್ಕರಿಸಿ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ ಜನಸಾಮನ್ಯರಿಗೆ ಅನುಕೂಲ ಮಾಡಿಕೊಡಬೇಕು ಒಂದು ವೇಳೆ ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ, ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಜಿಲ್ಲೆಯಾದ್ಯಾಂತ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ. ಎ ಂದರು. ಈ ಸಂದರ್ಭದಲ್ಲಿ ನಿಸಾಋ ಅಹ್ಮದ ಖಾನ್, ಶಿವಲಿಂಗಯ್ಯ ಗುತ್ತೇದಾರ, ಪೃತ್ವಿರಾಜ ರಾಂಪುರೆ, ಸಾಗರ ಮಾಚನಾಳ, ದಸ್ತಯ್ಯ ಗುತ್ತೇದಾರ, ಪ್ರಭು ಯಳವಂತಗಿ ಇತರರು ಇದ್ದರು.

ಇದನ್ನೂ ಓದಿ: ಚಿಂಚೋಳಿ: ಜೆಡಿಎಸ್ ಗೆ ಮೋಹಿನ್ ಮೋಮಿನ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here