ಕಲಬುರಗಿ: ತಾಲೂಕಿನ ನದಿಸಿಣ್ಣೂರ-ಫಿರೋಜಾಬಾದ್ ಸೀಮಾಂತರದ ಶ್ರೀ ಮಹಾಲಕ್ಷ್ಮೀ ಮಹಾಶಕ್ತಿ ಸಂಸ್ಥಾನಮಠದಲ್ಲಿ ದಿ. 29 ರಂದು ಸಂಜೆ 5 ಗಂಟೆಗೆ ಮಹಾಲಕ್ಷ್ಮೀ ದೇವಿ ರಥೋತ್ಸವ ನೆರವೇರಲಿದೆ ಎಂದು ಹೂಗಾರ ಸಮಾಜದ ರಾಜ್ಯ ಉಪಾಧ್ಯಕ್ಷ, ದಾಲ್ ಅಸೋಸಿಯೇಷನ್ ನಿರ್ದೇಶಕ ಶಿವಶರಣಪ್ಪ ಹೂಗಾರ, ಶಿಕ್ಷಕರಾದ ಸಿದ್ದಣ್ಣ ಹೂಗಾರ, ಸಂಬಣ್ಣ ಹೂಗಾರ, ನಿವೃತ್ತ ಮುಖ್ಯಗುರು ರಮೇಶ ಪೂಜಾರಿ ತಿಳಿಸಿದ್ದಾರೆ.
ಇದಕ್ಕೂ ಮುನ್ನಾ 1008ರ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅಮೃತಹಸ್ತದಿಂದ ಪಲ್ಲಕ್ಕಿ ಉತ್ಸವ, ಹೂಗಾರ ಮಾದಯ್ಯ ಶರಣರ ಮೂರ್ತಿ ಸ್ಥಾಪನೆ, ಶ್ರೀ ಮಹಾಲಕ್ಷ್ಮೀ ದೇವಿ ಭಕ್ತಿ ಕುಸುಮ ಧ್ವನಿ ಸುರಳಿ ಬಿಡುಗಡೆ, ಮಹಾಶಕ್ತಿ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಹಾಗೂ ಐದನೇ ವರ್ಷದ ಜಾತ್ರಾಮಹೋತ್ಸವ, ರಥೋತ್ಸವ ಅತಿ ವಿಜೃಂಭಣೆಯಿಂದ ಜರುಗಲಿವೆ. ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಬಬಲಾದ ಶಿವಮೂರ್ತಿ ಶಿವಾಚಾರ್ಯರು, ತೋನಸನಹಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ದಂಡಗುಂಡದ ಸಂಗನಬಸವ ಶಿವಾಚಾರ್ಯರು, ಚಿಂಚೋಳಿಯ ಶರಣಬಸವ ಶರಣರು ಸಮ್ಮುಖವಹಿಸುವರು. ಶ್ರೀಮಠದ ಪೂಜ್ಯ ಗುರುರಾಜೇಂದ್ರ ಶಿವಯೋಗಿಗಳು ನೇತೃತ್ವವಹಿಸುವರು.
ನಾಳೆ ಗುಲ್ಬರ್ಗಾ ವಿವಿಯ 39 ಮತ್ತು 40ನೇ ಘಟಿಕೋತ್ಸವ
ನಂತರ ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜ್ಯೋತಿ ಬೆಳಗಿಸುವರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಡಾ. ಉಮೇಶ ಜಾಧವ ಕಲ್ಯಾಣ ಮಂಟಪ ಅಡಿಗಲ್ಲು ಸಮಾರಂಭ ಉದ್ಘಾಟಿಸುವರು. ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಉದ್ಘಾಟಿಸಲಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಧ್ವನಿಸುರುಳಿ ಬಿಡುಗಡೆಗೊಳಿಸುವರು. ಶಾಸಕ ಎಂ. ವೈ. ಪಾಟೀಲ್ ಅಧ್ಯಕ್ಷತೆವಹಿಸುವರು. ಶಾಸಕಿ ಖನಿಜಾ ಫಾತೀಮಾ ಉದ್ಘಾಟಿಸುವರು. ಶಾಸಕ ಡಾ. ಅಜಯಸಿಂಗ್ ನೇತೃತ್ವವಹಿಸುವರು. ಎಂಎಲ್‍ಸಿ ಸುನೀಲ್ ವಲ್ಲ್ಯಾಪುರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳಲಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…